ಧಾರವಾಡದಲ್ಲಿ ಸಚಿವರ ಕಾರಿಗೆ ಡೀಸಿ ಡ್ರೈವರ್‌ !

Published : Nov 02, 2026, 11:02 AM IST
Kannada Rajyotsava

ಸಾರಾಂಶ

ಧಾರವಾಡದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ಸಚಿವ ಸಂತೋಷ ಲಾಡ್ ಅವರ ಕಾರನ್ನು ಚಲಾಯಿಸುವ ಮೂಲಕ ಜಿಲ್ಲಾಧಿಕಾರಿ ಸ್ನೇಹಲ್ ಗಮನ ಸೆಳೆದರು.ಕಾರ್ಯಕ್ರಮದ ನಂತರ ಅಧಿಕಾರಿಗಳು ಹಾಗೂ ಸಚಿವರು ನಗರ ಪರಿಶೀಲನೆಗೆ ತೆರಳಲು ಮುಂದಾದರು. ಆಗ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ತಮ್ಮ ಕಾರಿನಲ್ಲಿಯೇ ಬರುವಂತೆ ಸೂಚಿಸಿದರು

ಧಾರವಾಡದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ಸಚಿವ ಸಂತೋಷ ಲಾಡ್ ಅವರ ಕಾರನ್ನು ಚಲಾಯಿಸುವ ಮೂಲಕ ಜಿಲ್ಲಾಧಿಕಾರಿ ಸ್ನೇಹಲ್ ಗಮನ ಸೆಳೆದರು.

ಸಚಿವ ಲಾಡ್‌ಗೂ ಅಚ್ಚರಿ

ಕಾರ್ಯಕ್ರಮದ ನಂತರ ಅಧಿಕಾರಿಗಳು ಹಾಗೂ ಸಚಿವರು ನಗರ ಪರಿಶೀಲನೆಗೆ ತೆರಳಲು ಮುಂದಾದರು. ಆಗ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ತಮ್ಮ ಕಾರಿನಲ್ಲಿಯೇ ಬರುವಂತೆ ಸೂಚಿಸಿದರು. ಇತರ ಅಧಿಕಾರಿಗಳು ಕಾರಿನ ಹಿಂದಿನ ಆಸನಗಳಲ್ಲಿ ಕೂತರೆ, ಸ್ನೇಹಲ್ ಅವರು ಚಾಲಕರ ಸೀಟಿನಲ್ಲಿ ಕುಳಿತುಕೊಂಡು, ಸೀಟ್ ಬೆಲ್ಟ್ ಕಟ್ಟಿಕೊಂಡು, ಕಾರನ್ನು ಚಲಾಯಿಸಿದರು. ಇದನ್ನು ಕಂಡು ಸಚಿವ ಲಾಡ್‌ಗೂ ಅಚ್ಚರಿಯಾಯಿತು.

ಸಂತೋಷ ಲಾಡ್ ಚಾಲಕರ ಪಕ್ಕದ ಸೀಟಿನಲ್ಲಿ ಕುಳಿತುಕೊಂಡರು

ಸಚಿವ ಸಂತೋಷ ಲಾಡ್ ಚಾಲಕರ ಪಕ್ಕದ ಸೀಟಿನಲ್ಲಿ ಕುಳಿತುಕೊಂಡರು. ಕಾರಿನಲ್ಲಿ ಪೊಲೀಸ್ ಕಮೀಷನರ್ ಭೂಷಣ ಜಿ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಪಂಚಾಯತ ಸಿಇಒ ಭುವನೇಶ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಸಹಾಯಕ ಆಯುಕ್ತರಾದ ಪ್ರಭಾವತಿ ಕೂಡ ತೆರಳಿದರು.

PREV
Stay updated with the latest news, developments and happenings from Dharwad district (ಧಾರವಾಡ ಸುದ್ದಿ) — including politics, local governance, civic issues, education, crime, social events and more. All in Kannada, from Kannada Prabha.
Read more Articles on

Recommended Stories

ಪಾತಾಳಕ್ಕಿಳಿದ ಅಂತರ್ಜಲ, ಬೆಳೆ ರಕ್ಷಣೆಗೆ ಸಾಹಸ!
ಧಾರವಾಡದಲ್ಲಿ ಅರ್ಥಪೂರ್ಣ 71ನೇ ರಾಜ್ಯೋತ್ಸವ