ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ರೋಟರಿ ಭವನದಲ್ಲಿ ಆರ್.ಧ್ರುವನಾರಾಯಣ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಧ್ರುವನಾರಾಯಣ ಅವರು ನಮ್ಮನ್ನಗಲಿ 3 ವರ್ಷಗಳು ಕಳೆದಿವೆ. ಅವರು ಪಕ್ಷಾತೀತವಾಗಿ ಸರ್ವರಿಗೂ ಸಮಾಜಮುಖಿ ಕೆಲಸ ಮಾಡುತ್ತಿದ್ದರು. ಅವರನ್ನು ವಿರೋಧ ಪಕ್ಷದವರು ಕೂಡ ಇಷ್ಟಪಡುತ್ತಿದ್ದರು. ಅವರು ಶಾಸಕರಾಗಿ, ಸಂಸದರಾಗಿ ಉತಮ ಸೇವೆ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷರಾಗುವ ಅವಕಾಶ ಕೂಡ ದಟ್ಟವಾಗಿತ್ತು. ಅವರು ಇಂದು ಇದ್ದಿದ್ದರೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗುತ್ತಿದ್ದರು ಎಂದರು.ಕ್ರಿಯಾಶೀಲ ವ್ಯಕ್ತಿಯಾಗಿದ್ದ ಧ್ರುವನಾರಾಯಣ ಅವರನ್ನು ಕಳೆದುಕೊಂಡಿರುವುದು ಕಾಂಗ್ರೆಸ್ ಗೆ ತುಂಬಲಾರದ ನಷ್ಟ ಉಂಟಾಗಿದೆ. ಪ್ರಕೃತಿ ಮಡಿಲಿನಲ್ಲಿರುವ ಧ್ರುವನಾರಾಯಣರವರ ಆತ್ಮಕ್ಕೆ ಶಾಂತಿ ನೆಲೆಸಲಿ ಎಂದು ಆಶಿಸಿದರು.
ಧ್ರುವನಾರಾಯಣ ಅವರಿಂದ ಪಕ್ಷ ಸಂಘಟನೆ, ಶಿಸ್ತು ಕಲಿತಿದ್ದೇವು. ಅಂತಹ ರಾಜಕಾರಣಿ ಸಿಗುವುದು ಬಹಳ ಅಪರೂಪ. ಅವರು ಶಾಸಕರಾಗಿ, ಸಂಸದರಾಗಿ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ನಮ್ಮಿಂದ ದೂರವಾಗಿರಬಹುದು. ಆದರೆ, ಅವರು ಜಿಲ್ಲೆಯಲ್ಲಿ ಮಾಡಿರುವ ಕೆಲಸಗಳು ನಮ್ಮ ಕಣ್ಣ ಮುಂದಿವೆ. ಅವರೊಬ್ಬ ಅಪರೂಪದ ರಾಜಕಾರಣಿಯಾಗಿದ್ದರು ಎಂದರು.
ಆರ್. ಧ್ರುವನಾರಾಯಣರವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಎಲ್ಲಾ ರೋಗಿಗಳಿಗೂ ಧ್ರುವನಾರಾಯಣರವರ ಅಭಿಮಾನಿ ಬಳಗದ ವತಿಯಿಂದ ಉಚಿತವಾಗಿ ಡಯಾಲಿಸಿಸ್ ಮಾಡಿಸಲು ಆರ್ಥಿಕ ಸಹಾಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಕನಿಷ್ಠ ವೇತನಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಎಸ್ ಪಿಕೆ, ಧ್ರುವನಾರಾಯಣ ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು, ಉದ್ಯಮಿ ಶ್ರೀನಿಧಿ , ಚಿಕ್ಕಹೊಳೆ ಕುಮಾರ್, ಜಿ.ರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ವಿನೋದ, ಚಿಕ್ಕಮಹದೇವ್, ಕಮಲಖಾನ್, ನಾಗಯ್ಯ, ಎಂ.ಶಿವಮೂರ್ತಿ, ನಲ್ಲೂರು ಮಹಾದೇವಸ್ವಾಮಿ, ಚೂಡಾ ಮಾಜಿ ಅಧ್ಯಕ್ಷರಾದ ಸೈಯದ್ ರಫೀ, ಸುಹೇಲ್ ಅಲಿಖಾನ್, ತಾಪಂ ಮಾಜಿ ಸದಸ್ಯ ರಾಜು, ಗ್ರಾಪಂ ಮಾಜಿ ಅಧ್ಯಕ್ಷ ರೂಪೇಶ್, ಎಎಚ್ ಖಾನ್, ರಂಗಸ್ವಾಮಿ, ನಾಗರಾಜು, ಮನೋರಾಜ್ ಇತರರು ಹಾಜರಿದ್ದರು.