ದೊಡ್ಮನೆ ಆನಂದ್ ಕೃತಿಯ ಸಂವಾದ ವಿಮರ್ಶೆ

KannadaprabhaNewsNetwork |  
Published : May 06, 2026, 01:30 AM IST
ದೊಡ್ಮನೆ ಆನಂದ್ ಕೃತಿಯ ಸಂವಾದ-ವಿಮರ್ಶೆ:ಓದಿನ ಸಂಸ್ಕೃತಿ ಬೆಳೆಸಲು ಸಪ್ನ ಬುಕ್ ಹೌಸ್ ಮಹತ್ವದ ವೇದಿಕೆ | Kannada Prabha

ಸಾರಾಂಶ

ಹಾಸನ ಜಿಲ್ಲೆಯ ಖ್ಯಾತ ಸಾಹಿತಿ ದೊಡ್ಮನೆ ಆನಂದ್ ಅವರ ಕನ್ನಂಬಾಡಿ ಜೋಡಿ ಕೊಲೆಯ ರಹಸ್ಯ ಕೃತಿಯನ್ನು ಆಧಾರವಾಗಿಟ್ಟುಕೊಂಡು ಹಾಸನದ ಸಪ್ನ ಬುಕ್ ಹೌಸ್ನಲ್ಲಿ ಸಂವಾದ ಮತ್ತು ವಿಮರ್ಶಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು. ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಓದಿನ ಸಂಸ್ಕೃತಿಗೆ ಹೊಸ ಉತ್ತೇಜನ ನೀಡುವಂತಾಯಿತು. ಓದು ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿ ಎಂದು ಹೇಳಿದರು. ಜೊತೆಗೆ ಸಪ್ನ ಬುಕ್ ಹೌಸ್ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಓದಿನ ವಾತಾವರಣವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು.

ಹಾಸನ: ಜಿಲ್ಲೆಯ ಖ್ಯಾತ ಸಾಹಿತಿ ದೊಡ್ಮನೆ ಆನಂದ್ ಅವರ ಕನ್ನಂಬಾಡಿ ಜೋಡಿ ಕೊಲೆಯ ರಹಸ್ಯ ಕೃತಿಯನ್ನು ಆಧಾರವಾಗಿಟ್ಟುಕೊಂಡು ಹಾಸನದ ಸಪ್ನ ಬುಕ್ ಹೌಸ್ನಲ್ಲಿ ಸಂವಾದ ಮತ್ತು ವಿಮರ್ಶಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು. ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಓದಿನ ಸಂಸ್ಕೃತಿಗೆ ಹೊಸ ಉತ್ತೇಜನ ನೀಡುವಂತಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಗೊರೂರು ಶಿವೇಶ್ ಅವರು ಕೃತಿಯ ಕಥಾವಸ್ತು, ನಿರೂಪಣಾ ಶೈಲಿ ಹಾಗೂ ಓದುಗರನ್ನು ಸೆಳೆಯುವ ರೀತಿಯ ಬಗ್ಗೆ ವಿವರವಾಗಿ ಮಾತನಾಡಿದರು. ಬಳಿಕ ಮೇಟಿಕೆರೆ ಹಿರಿಯಣ್ಣ ಅವರು ದೊಡ್ಮನೆ ಆನಂದ್ ಅವರ ಸಮಗ್ರ ಸಾಹಿತ್ಯ ಸಾಧನೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಅವರ ಬರವಣಿಗೆಯ ವೈಶಿಷ್ಟ್ಯ, ಸಮಾಜಮುಖಿ ಚಿಂತನೆ ಹಾಗೂ ವ್ಯಕ್ತಿತ್ವದ ಕುರಿತಾಗಿ ಆಳವಾದ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರು

ಓದಿನ ಸಂಸ್ಕೃತಿ ಬೆಳೆಸಲು ಸಪ್ನ ಬುಕ್ ಹೌಸ್ ಮಹತ್ವದ ವೇದಿಕೆ

ಆನಂದ್ ಅವರ ಸಾಹಿತ್ಯವು ಓದುಗರಲ್ಲಿ ಕುತೂಹಲ ಹುಟ್ಟಿಸುವುದರ ಜೊತೆಗೆ ವಿಚಾರಪ್ರೇರಣೆಯನ್ನೂ ನೀಡುತ್ತದೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ವಿ.ಕೆ ಕಾಲೇಜಿನ ಪ್ರಾಂಶುಪಾಲ ಡಾ. ಯತೀಶ್ ವಹಿಸಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಓದಿನ ಹವ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು. ಓದು ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿ ಎಂದು ಹೇಳಿದರು. ಜೊತೆಗೆ ಸಪ್ನ ಬುಕ್ ಹೌಸ್ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಓದಿನ ವಾತಾವರಣವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು.ಪ್ರಸಿದ್ಧ ಪತ್ರಕರ್ತ ಆರ್‌. ಪಿ. ವೆಂಕಟೇಶ್ ಮೂರ್ತಿ ಅವರು ಮಾತನಾಡಿ, ದೊಡ್ಮನೆ ಆನಂದ್ ಅವರ ಕೃತಿಗಳ ಸಾಹಿತ್ಯಮೌಲ್ಯ ಹಾಗೂ ಸಾಮಾಜಿಕ ಪ್ರಸ್ತುತತೆಯನ್ನು ಮೆಚ್ಚಿದರು. ಶಿವಶಂಕರ್‌ ಅವರು ಸಹ ಆನಂದ್ ಅವರ ಲೇಖನ ಶೈಲಿಯನ್ನು ಕೊಂಡಾಡಿ, ಅವರ ಸಾಹಿತ್ಯವು ಓದುಗರ ಮನಸ್ಸಿನಲ್ಲಿ ದೀರ್ಘಕಾಲದ ಪ್ರಭಾವ ಬೀರುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎ.ವಿ.ಕೆ ಕಾಲೇಜಿನ ವಿದ್ಯಾರ್ಥಿಗಳು ಲೇಖಕರೊಂದಿಗೆ ನೇರ ಸಂವಾದ ನಡೆಸಿ ಕೃತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಕೇಳಿದರು. ಲೇಖಕರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮಗ್ರ ಉತ್ತರಗಳನ್ನು ನೀಡಿ, ಓದಿನ ಮಹತ್ವವನ್ನು ಮತ್ತಷ್ಟು ವಿವರಿಸಿದರು. ಈ ಸಂವಾದವು ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಸಪ್ನ ಬುಕ್ ಹೌಸ್ ಹಾಸನವು ಪುಸ್ತಕಗಳ ವಿಮರ್ಶೆ, ವಿಶ್ಲೇಷಣೆ ಹಾಗೂ ಸಾಹಿತ್ಯ ಸಂವಾದಗಳಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುತ್ತಿರುವುದು ಸಾಹಿತ್ಯಾಸಕ್ತರಿಂದ ಪ್ರಶಂಸೆಗೆ ಪಾತ್ರವಾಗಿದೆ. ಓದಿನ ಅಭಿರುಚಿ ಬೆಳೆಸಲು ಹಾಗೂ ಯುವಪೀಳಿಗೆಗೆ ಸಾಹಿತ್ಯ ಪರಿಚಯಿಸಲು ಇಂತಹ ವೇದಿಕೆಗಳು ಅಗತ್ಯವೆಂದು ಹಲವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಯಶಸ್ಸಿಗೆ ಸಪ್ನ ಬುಕ್ ಹೌಸ್ ಹಾಸನದ ಮ್ಯಾನೇಜರ್ ಶಾಂತಲ ಅವರು ಪ್ರಮುಖ ಪಾತ್ರವಹಿಸಿದ್ದು, ಎಲ್ಲ ಅತಿಥಿಗಳಿಗೆ ಹಾಗೂ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು ಎಂಬ ಆಶಯವನ್ನು ಮೇಟಿಕೆರೆ ಹಿರಿಯಣ್ಣ ಸೇರಿದಂತೆ ಹಲವು ಗಣ್ಯರು ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಆದೇಶ ಕೈಬಿಟ್ಟು, ಸಮರ್ಪಕ ಬೀಜ, ರಸಗೊಬ್ಬರ ಪೂರೈಸಿ
ಬೀಗ ಪ್ರಕರಣ ತನಿಖೆಗೆ ಕಠಿಣ ಕ್ರಮಕ್ಕೆ ಶಿವಕುಮಾರಪ್ಪ ಒತ್ತಾಯ