ಕನ್ನಡಪ್ರಭ ವಾರ್ತೆ ರಾಯಚೂರು
ಶಿಬಿರದ ಮೊದಲ ದಿನವಾದ ಶುಕ್ರವಾರ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ‘ಮಹಾನ್ ವ್ಯಕ್ತಿಗಳ ಕನಸುಗಳು ಮತ್ತು ಇಂದಿನ ಸಾಮಾಜಿಕ - ಸಾಂಸ್ಕೃತಿಕ ಸಮಸ್ಯೆಗಳು’ ಎಂಬ ವಿಷಯದ ಕುರಿತು ಮಾತನಾಡಿ, ಬ್ರಿಟಿಷರು ತಮ್ಮ ಆಡಳಿತಕ್ಕೆ ಬೇಕಾದ ಗುಮಾಸ್ತರನ್ನು ತಯಾರಿಸಲು ಮಾತ್ರವೇ ಶಿಕ್ಷಣ ನೀಡಿದ್ದರಿಂದ ಅವರಿಂದ ನಮಗೆ ನಿಜವಾದ ಶಿಕ್ಷಣ ಸಿಗಲಿಲ್ಲ ಎಂದರು.
ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ತುಳಜಾರಾಮ್ ಎನ್.ಕೆ, ಮಾಜಿ ಅಖಿಲ ಭಾರತ ಅಧ್ಯಕ್ಷ ವಿ.ಎನ್.ರಾಜಶೇಖರ್, ರಾಜ್ಯ ಅಧ್ಯಕ್ಷ ಅಶ್ವಿನಿ ಕೆ.ಎಸ್., ತಮಿಳುನಾಡಿನ ರಾಜ್ಯ ಕಾರ್ಯದರ್ಶಿ ಸುಗುಬಾಲಾ, ಉಪಾಧ್ಯಕ್ಷ ಹಣಮಂತ ಎಸ್.ಎಚ್., ಅಭಯಾ ದಿವಾಕರ್, ಅಪೂರ್ವ, ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಲ್ಯಾಣ್ ಕುಮಾರ್, ವಿನಯ ಚಂದ್ರ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿ ಕಾರ್ಯಕರ್ತರು ಭಾಗವಹಿಸಿದ್ದರು.ಶಿಬಿರದ ಎರಡನೇ ದಿನವಾದ ಶನಿವಾರ ನಡೆದ ‘ವಿದ್ಯಾರ್ಥಿಗಳು ರಾಜಕೀಯ ಸೇರಬೇಕೆ?’ ಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ
ಗೋಷ್ಠಿಯ ಅಧ್ಯಕ್ಷತೆಯನ್ನು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣ್ ಕುಮಾರ್ ವಹಿಸಿದ್ದರು. ಎಐಡಿಎಸ್ಒ ಮಾಜಿ ಅಖಿಲ ಭಾರತ ಅಧ್ಯಕ್ಷ ವಿ.ಎನ್. ರಾಜಶೇಖರ್, ಕೇಂದ್ರ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಸುಗುಬಾಲ, ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್., ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್., ಅಭಯ ದಿವಾಕರ್, ಅಪೂರ್ವ ಸಿ.ಎಂ., ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಹಾಗೂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ ಚಂದ್ರ ಸೇರಿದಂತೆ ಹಲವರು ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಎಐಡಿಎಸ್ಒ ವಿದ್ಯಾರ್ಥಿ ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದ್ದರು.
03ಕೆಪಿಆರ್‌ಸಿಆರ್ 01: ರಾಯಚೂರಿನ ವಿದ್ಯಾನಿಧಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಎಐಡಿಎಸ್‌ಒ ರಾಜ್ಯ ಸಮಿತಿಯಿಂದ ಹಮ್ಮಿಕೊಂಡಿರುವ ಎಐಡಿಎಸ್‌ಒ ರಾಜ್ಯಮಟ್ಟದ ವಿದ್ಯಾರ್ಥಿ ಶಿಬಿರವು ಶನಿವಾರ ಎರಡನೇ ದಿನದ ಗೋಷ್ಠಿಯಲ್ಲಿ ಎಸ್‌ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿದರು.