ಯಾಂತ್ರೀಕೃತ ದೋಣಿಗೆ ಡೀಸೆಲ್ ವಿತರಿಸುವ ಬಂಕ್ ಉದ್ಘಾಟನೆ

KannadaprabhaNewsNetwork |  
Published : May 20, 2025, 01:29 AM IST
ಹೊನ್ನಾವರದಲ್ಲಿ ಯಾಂತ್ರೀಕೃತ ದೋಣಿಗೆ ಡೀಸೆಲ್ ವಿತರಿಸುವ ಬಂಕ್ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಇದು 44 ಕೆಎಲ್‌ ಸಾಮರ್ಥ್ಯದ ಡೀಸೆಲ್ ಬಂಕ್ ಇದಾಗಿದೆ.

ಹೊನ್ನಾವರ: ತೆರಿಗೆ ರಹಿತ ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ವಿತರಿಸುವ ಬಂಕ್ ನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.

ತಾಲೂಕಿನ ಕಾಸರಕೋಡ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಈ ಬಂಕ್ ಸ್ಥಾಪಿಸಲಾಗಿದೆ. ಇದು 44 ಕೆಎಲ್‌ ಸಾಮರ್ಥ್ಯದ ಡೀಸೆಲ್ ಬಂಕ್ ಇದಾಗಿದೆ. ಈ ಬಂಕ್ ಕರಾವಳಿ ಕರ್ನಾಟಕದಲ್ಲಿ ನಿಗಮದ 6ನೇ ಕರ ರಹಿತ ಡೀಸೆಲ್ ವಿತರಿಸುವ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಂಗಳೂರು ಅಧ್ಯಕ್ಷೆ ಮಾಲಾ ಬಿ. ನಾರಾಯಣ ರಾವ್, ಕಾಸರಕೋಡ ಗ್ರಾಪಂ ಅಧ್ಯಕ್ಷೆ ಮಾಂಕಾಳಿ ಪ್ರಕಾಶ ಹರಿಜನ, ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೆ. ಗಣೇಶ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶಕುಮಾರ್ ಯು., ಮೀನುಗಾರಿಕೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ ಮತ್ತು ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ನಿಗಮದ ಹಿರಿಯ ಕಾರ್ಯ ನಿರ್ವಾಹಕರು ಸಿಬ್ಬಂದಿ ವರ್ಗದವರು ಮತ್ತು ಸ್ಥಳೀಯ ಮೀನುಗಾರರ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ