ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಿರ್ವಹಿಸುತ್ತಿರುವ ಐಲ್ಯಾಂಡ್ ಸ್ಟಾರ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಟಿ.ಪಿ.ವಿವೇಕಾನಂದ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಜನರೇಟರ್ ಸೆಟ್‌ಗೆ ಅಗತ್ಯವಾದ ತಪಾಸಣೆ ಹಾಗೂ ಪ್ರಮಾಣೀಕರಣವನ್ನು ವಿದ್ಯುತ್ ನಿರೀಕ್ಷಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಡೆಸುತ್ತಿರುವಾಗ, ಬಿಬಿಎಂಪಿ ವಾರ್ಷಿಕ ಟ್ರೇಡ್ ಲೈಸೆನ್ಸ್ ಪಡೆಯುವಂತೆ ಒತ್ತಾಯಿಸಿ ಭಾರಿ ನವೀಕರಣ ಶುಲ್ಕ ವಿಧಿಸುವುದು ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.ಪ್ರಕರಣದ ವಿವರ:
ಅದನ್ನು ಪ್ರಶ್ನಿಸಿ ಮಾಲ್ ಅಭಿವೃದ್ಧಿ ಕಂಪನಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯ ಸೆಕ್ಷ ನ್ 354ರ ಅಡಿ ಬಿಬಿಎಂಪಿ ಶುಲ್ಕ ವಿಧಿಸಬಹುದೆಂದು ಅಭಿಪ್ರಾಯಪಟ್ಟು ಕಂಪನಿಯ ಅರ್ಜಿ ವಜಾಗೊಳಿಸಿ 2022ರಲ್ಲಿ ಆದೇಶಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಕಂಪನಿ ವಿಭಾಗೀಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.