ತುಮಕೂರಿನಲ್ಲಿ 20ನೆಯ ಕರ್ನಾಟಕ ರಾಜ್ಯರಾಜ್ಯಶಾಸ್ತ್ರ ಶಿಕ್ಷಕರ ಸಮ್ಮೇಳನ
ಕನ್ನಡಪ್ರಭ ವಾರ್ತೆ, ತುಮಕೂರು
ದೇಶದ ಪ್ರಜಾಪ್ರಭುತ್ವವು ವಿವಿಧ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ. ಗಾಂಧಿ, ಅಂಬೇಡ್ಕರ್‌ಅವರ ಕೊಡುಗೆಗಳನ್ನು ಬಯಸುವ ನಾಗರಿಕನಿಗೆ, ಅವರ ಆದರ್ಶ, ನಿಷ್ಠೆ, ತತ್ವಗಳನ್ನೂ ಕೂಡ ಪಾಲಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲವಾಗಿದೆ ಎಂದು ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಆರ್.ಎಲ್. ಎಂ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.ತುಮಕೂರು ವಿವಿಯಲ್ಲಿ ‘ಭಾರತೀಯ ಪ್ರಜಾಪ್ರಭುತ್ವದ ಕಾಳಜಿಗಳು, ಅಸ್ಮಿತೆ, ಬಹುತ್ವ ಹಾಗೂ ಸಂಯುಕ್ತ ರಾಜಕಾರಣ ವಿಷಯ ಕುರಿತ ಎರಡು ದಿನಗಳ 20ನೆಯ ಕರ್ನಾಟಕ ರಾಜ್ಯರಾಜ್ಯಶಾಸ್ತ್ರ ಶಿಕ್ಷಕರ ಸಮ್ಮೇಳನದಲ್ಲಿ ಮಾತನಾಡಿದರು.ದೇಶವನ್ನು ಮುನ್ನಡೆಸಲು ಸಂವಿಧಾನ, ಕಾನೂನಿನ ಅಗತ್ಯವಿದೆ. ಎಲ್ಲರೂ ಭಾರತವನ್ನು ಮರುನಿರ್ಮಿಸಲು ಶ್ರಮಿಸೋಣ ಎಂಬುದಾಗಿತ್ತು. ಈಗಿನ ಕಾಲಘಟ್ಟದ ಕಾನೂನು, ರಾಜಕಾರಣವನ್ನು ಮರು ವ್ಯಾಖ್ಯಾನಿಸಬೇಕಿದೆ ಎಂದರು.ಮೈಸೂರು ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಂ.ರಾಜಶೇಖರ್ ದಿಕ್ಸೂಚಿ ಭಾಷಣ ಮಾಡಿ, ರಾಜಕೀಯ ಭ್ರಷ್ಟಾಚಾರದಿಂದ ಆಡಳಿತಾತ್ಮಕ ಭ್ರಷ್ಟಾಚಾರ, ಜನರ ತೆರಿಗೆಯ ಹಣದ ದುರುಪಯೋಗ, ಧಾರ್ಮಿಕ, ಜಾತಿ ಮತ್ತು ಸಮುದಾಯಗಳ ಧ್ರುವೀಕರಣದಿಂದ ರಾಜಕೀಯ ಧ್ರುವೀಕರಣ, ಕುಟುಂಬ ಆಧಾರಿತ ರಾಜಕೀಯದಿಂದ ಸ್ವಾರ್ಥ. ಇದರಿಂದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಪೆಟ್ಟಾಗಿದೆ. ಸಂಯುಕ್ತ ರಾಜಕಾರಣ ಮತ್ತು ಪ್ರಜಾಪ್ರಭುತ್ವ ಸಂವಿಧಾನದ ಎರಡು ಮುಖಗಳಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಪ್ರಜೆಗಳ ನಿರೀಕ್ಷೆಗಳನ್ನು ನೆರವೇರಿಸಿರುವರೇ ಎಂಬ ಪ್ರಶ್ನೆ ಸದಾಕಾಡುತ್ತದೆ. ಅಭಿವೃದ್ಧಿ ಪೂರಕ ಆಡಳಿತದಿಂದ ಮಾತ್ರ ಪ್ರಜಾಪ್ರಭುತ್ವಕ್ಕೆ ಗೌರವ ಎಂದು ತಿಳಿಸಿದರು.ಹೈದರಾಬಾದ್ ಕೇಂದ್ರೀಯ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಸಿ. ಸೂರಿ ರಾಷ್ಟ್ರ, ರಾಜ್ಯ ಮತ್ತು ಗುರುತು: ಭಾರತೀಯ ಪ್ರಜಾಪ್ರಭುತ್ವದ ಕೆಲವು ಕೇಂದ್ರೀಯ ಕಾಳಜಿಗಳ ಕುರಿತಾದ ಪ್ರತಿಫಲನಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಸದಾನಂದ ಜೆ.ಎಸ್., ವಹಿಸಿದ್ದರು.ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು 400 ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮಂಡಿಸಿದರು. ಕರ್ನಾಟಕರಾಜ್ಯರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಜಯಪ್ರಕಾಶ್ ಮಾವಿನಕುಳಿ,, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿಯಅಧ್ಯಕ್ಷಡಾ. ಟಿ. ಜಿ. ನಾಗಭೂಷಣ, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಬೆಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಪಿ. ಎಸ್. ಜಯರಾಮು, ಸಮ್ಮೇಳದ ಅಧ್ಯಕ್ಷ ಪ್ರೊ.ಬಸವರಾಜ ಜಿ., ಸಂಘಟನಾ ಕಾರ್ಯದರ್ಶಿಗಳಾದ ಡಾ.ನಾಗರಾಜು ಎಂ.ಎಸ್.,ಡಾ. ಕೆ. ಸಿ. ಸುರೇಶ, ಕೋಶಾಧಿಕಾರಿಡಾ. ಮಂಜುನಾಥ್ ಆರ್.ಉಪಸ್ಥಿತರಿದ್ದರು.ಸಹ ಪ್ರಾಧ್ಯಾಪಕಡಾ.ರೂಪೇಶ್‌ಕುಮಾರ್ ಎ. ನಿರೂಪಿಸಿದರು.ಸಮ್ಮೇಳನದ ಎರಡನೆಯ ದಿನ ವರ್ತಮಾನದ ರಾಜಕೀಯವು ಪ್ರಜಾಪ್ರಭುತ್ವಕ್ಕೆ ಅನುಕೂಲಕರವೇ? ವಿಷಯದ ಕುರಿತು ವಿಶೇಷ ಗೋಷ್ಠಿ ನಡೆಯಲಿದ್ದು ಮಾಜಿ ಸಚಿವ ಜೆ. ಸಿ. ಮಾಧುಸ್ವಾಮಿ, ಮಾಜಿ ಸಂಸತ್ ಸದಸ್ಯ ಆಯನೂರು ಮಂಜುನಾಥ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಮೈಸೂರು ವಿವಿಯರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮುಜಾಫರ್ ಅಸಾದಿ, ಕರ್ನಾಟಕರಾಜ್ಯ ಮುಕ್ತ ವಿವಿಯ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಜೆ. ಸುರೇಶ್ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ.
ಕೋಟ್ ..
ಭಾರತದಲ್ಲಿ ರಾಷ್ಟ್ರೀಯತೆಯು ಧರ್ಮದ ಆಧಾರದಲ್ಲಿ ವಿಂಗಡಣೆಯಾಗಿದೆ. ರಾಷ್ಟ್ರ ಪರಿಕಲ್ಪನೆಯು ಧರ್ಮದ ಕಲ್ಪನೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸದ ಧರ್ಮಶಾಸ್ತ್ರಗಳಿಂದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಪ್ರಜಾಪ್ರಭುತ್ವ ಧಾರ್ಮಿಕತೆಯ ನೆರಳಲ್ಲಿ ನಡೆಯಬಾರದು. ರವಿ ಜೋಶಿ, ನಿವೃತ್ತ ಜಂಟಿ ಕಾರ್ಯದರ್ಶಿ, ಭಾರತ ಸರ್ಕಾರ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.