ರಾಮನಗರ: ಸೇವೆ ಕಾಯಂ, ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 25 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ಅ.16ರಂದು ಶುಕ್ರವಾರ ರಾಮನಗರದಿಂದ ವಿಧಾನಸೌಧದವರೆಗೆ ವಿಶೇಷಚೇತನರು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ರಾಜ್ಯ ಸಂಚಾಲಕ ಅನಿಲ್ ಕೆ.ಗೌಡ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಶೇಷಚೇತನರ ಅಹವಾಲು ಕೇಳಲು ಸಮಯವಿಲ್ಲ. ಪಾಪ ಅವರು ನಾಡಹಬ್ಬ ದಸರಾ ಮತ್ತು ಸಿಡಿ ಹಗರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ನಾವುಗಳೇ ವಿಧಾನಸೌಧಕ್ಕೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಆಗಲೂ ನಮ್ಮ ಬೇಡಿಕೆಗಳು ಈಡೇರದಿದ್ದರೆ ರಾಮನಗರದಲ್ಲಿಯೇ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ವಿಕಲಚೇತನರನ್ನು ಗುರುತಿಸಿ, ಅವರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ನಿರಂತರ 19 ವರ್ಷಗಳಿಂದ ಶ್ರಮಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಸೇವೆಯನ್ನು ಕಾಯಂಗೊಳಿಸಬೇಕು. ಅದೇ ರೀತಿ, ಕಳೆದ ಐದಾರು ತಿಂಗಳಿಂದ ಮಾಸಾಶನಕ್ಕಾಗಿ ಕಾಯುತ್ತಿರುವ ವಿಕಲಚೇತನರಿಗೆ ಗೌರವಯುತವಾಗಿ ಬದುಕಲು ಮಾಶಾಸನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಕಾಟಾಚಾರಕ್ಕೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿ ಹೋದವರು, ಇತ್ತ ತಿರುಗಿಯೂ ನೋಡಿಲ್ಲ. ಪ್ರತಿಭಟನಾ ಸ್ಥಳದಲ್ಲಿ ಪ್ರತಿದಿನ ಹಾವು, ಚೇಳು ಕಾರ್ಯಕರ್ತರ ಮೈಮೇಲೆ ಬರುತ್ತಿವೆ. ಮಳೆ, ಚಳಿ ಎನ್ನದೇ ಇಪ್ಪತ್ತು ದಿನಗಳಿಂದ ಹೆಂಡತಿ, ಮಕ್ಕಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಂದೆ-ತಾಯಿ ಎಲ್ಲರನ್ನೂ ಬಿಟ್ಟು ಪ್ರತಿಭಟನೆಯಲ್ಲಿ ಕುಳಿತಿದ್ದೇವೆ. ಸರ್ಕಾರ ನಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಅನಿಲ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಡಿ ಮೇಟಿ, ರಾಜ್ಯಾಧ್ಯಕ್ಷ ಫಕೀರ್ ಗೌಡ, ಪದಾಧಿಕಾರಿಗಳಾದ ಜಯಮ್ಮ, ಅಂಬರೀಷ್ , ಚಿಕ್ಕಮರಲೂರಯ್ಯ, ಹರೀಶ್, ನಟರಾಜ್ ಇತತರಿದ್ದರು.
ವಿಶೇಷಚೇತನರ ಬೇಡಿಕೆಗಳೇನು ?
2. ಮಾಸಾಶನವನ್ನು 5,000 ರು.ವರೆಗೆ ಹೆಚ್ಚಿಸಬೇಕು.
ಕೋಟ್ .............
- ಶಬರೀಶ್, ಜಿಲ್ಲಾಧ್ಯಕ್ಷರು, ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘ
ರಾಮನಗರದಲ್ಲಿ ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಚಾಲಕ ಅನಿಲ್ ಕೆ.ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.