- ಸುರಪುರ ಸರ್ಕಾರಿ ಶಾಲೆ-ಕಾಲೇಜಲ್ಲಿ ‘ನಿರಂತರ’ ಇ ಹಾಜರಾತಿ ವ್ಯವಸ್ಥೆ ಜಾರಿ । ಶಿಕ್ಷಕರಿಗೆ ‘ಕಾಮ್ಸ್’ ಆ್ಯಪ್‌ನಿಂದ ಜಿಪಿಎಸ್ ಆಧಾರಿತ ಹಾಜರಾತಿ
ಚಂದ್ರಶೇಖರನಾಯಕ ಗುಡ್ಡಕಾಯಿ
ಕನ್ನಡಪ್ರಭ ವಾರ್ತೆ ಸುರಪುರದಪ್ಪನೆಯ ರಿಜಿಸ್ಟರ್, ಶಿಕ್ಷಕರ ಕೈಯಲ್ಲಿ ಪೆನ್ನು, ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ದಾಖಲಿಸುವ ಪದ್ಧತಿ ಈಗ ಇತಿಹಾಸದ ಪುಟ ಸೇರುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಕೃತಕ ಬುದ್ಧಿಮತ್ತೆ (ಎಐ), ಮುಖ ಗುರುತಿಸುವಿಕೆ ಹಾಗೂ ಜಿಪಿಎಸ್ ತಂತ್ರಜ್ಞಾನದ ನೆರವಿನಿಂದ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಚಾಲನೆ ನೀಡಿದ್ದು, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ‘ನಿರಂತರ’ ಇ-ಹಾಜರಾತಿ ವ್ಯವಸ್ಥೆ ಜಾರಿಯಾಗಿದೆ.
‘ನಿರಂತರ'''' ಆ್ಯಪ್‌ನಲ್ಲಿ ವಿದ್ಯಾರ್ಥಿಯ ಮುಖವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು, ಅದನ್ನು ಎಸ್‌ಎಟಿಎಸ್ ದತ್ತಾಂಶದೊಂದಿಗೆ ಹೊಂದಾಣಿಕೆ ಮಾಡಿ ಕ್ಷಣಾರ್ಧದಲ್ಲೇ ಹಾಜರಾತಿ ದಾಖಲಿಸಲಾಗುತ್ತದೆ. ದಿನಕ್ಕೆ ಎರಡು ಬಾರಿ ಹಾಜರಾತಿ ಕಡ್ಡಾಯ, ವಿದ್ಯಾರ್ಥಿಗಳ ಹಾಜರಾತಿ ಮೇಲ್ವಿಚಾರಣೆ ಇನ್ನಷ್ಟೂ ಪರಿಣಾಮಕಾರಿಯಾಗಿದೆ.
ಸುರಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಾಗಿದೆ. ಒಟ್ಟು 429 ವಿದ್ಯಾರ್ಥಿನಿಯರಲ್ಲಿ 398 ಮಂದಿ ಈಗಾಗಲೇ ‘ನಿರಂತರ'''''''' ಆ್ಯಪ್‌ನಲ್ಲಿ ನೋಂದಣಿಯಾಗಿದ್ದು, ಪ್ರತಿದಿನ ಎಐ ಆಧಾರಿತ ಹಾಜರಾತಿ ದಾಖಲಿಸಲಾಗುತ್ತಿದೆ. ವಾರ್ಷಿಕ ಪರೀಕ್ಷೆಗೆ ಕಡ್ಡಾಯ ಶೇ. 75ರಷ್ಟು ಹಾಜರಾತಿ ಕಾಪಾಡಿಕೊಳ್ಳಲು ಈ ವ್ಯವಸ್ಥೆ ನೆರವಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ, ಸರ್ವರ್ ನಿಧಾನಗತಿ ಹಾಗೂ ಮುಖ ಗುರುತಿಸುವಿಕೆಯಲ್ಲಿ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದರೂ, ಅವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. ಒಟ್ಟಾರೆ, ಡಿಜಿಟಲ್ ಹಾಜರಾತಿ ವ್ಯವಸ್ಥೆ ಸರ್ಕಾರಿ ಶಿಕ್ಷಣದಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಗುಣಮಟ್ಟ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.
ಕೋಟ್- 1
- ಮೋನಯ್ಯ ಗೋನಾಲ, ಪ್ರಾಚಾರ್ಯಾ, ಸುರಪುರ. (4ವೈಡಿಆರ್2)
ಕೋಟ್-2
“ನಿರಂತರ ಆ್ಯಪ್ ಮೂಲಕ ಒಂದೇ ಬಾರಿ 30 ವಿದ್ಯಾರ್ಥಿಗಳ ಹಾಜರಾತಿ ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೂಲಕ ದಾಖಲಿಸಬಹುದು. ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಇದು ಅತ್ಯಂತ ಸುಲಭ. ಹೆಚ್ಚಿನ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ.” : -ಸೈದಾಬಿ ಜಮಾದಾರ, ಉಪನ್ಯಾಸಕರು, ಸುರಪುರ. (4ವೈಡಿಆರ್3)ಪ್ರಮುಖಾಂಶಗಳು
•ಮುಖ ಗುರುತಿಸುವಿಕೆ (ಎಐ) ತಂತ್ರಜ್ಞಾನದಿಂದ ಕ್ಷಣರ‍್ಧದಲ್ಲಿ ಹಾಜರಾತಿ.•ಸಿಬ್ಬಂದಿಗೆ ಜಿಪಿಎಸ್ ಆಧಾರಿತ ‘ಕಾಮ್ಸ್'''''''' ಡಿಜಿಟಲ್ ವ್ಯವಸ್ಥೆ.
•ಎಐ ಮೂಲಕ ಶಿಕ್ಷಣದಲ್ಲಿ ಶಿಸ್ತು, ಸಮಯಪಾಲನೆ, ಪಾರದರ್ಶಕತೆಗೆ ಉತ್ತೇಜನ.•ಗೈರುಹಾಜರಿಗೆ ಕಡಿವಾಣ, ಶಾಲೆ ತೊರೆಯುವಿಕೆ ತಡೆ
-4ವೈಡಿಆರ್1 :
ಸುರಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ನಿರಂತರ'''''''' ಆ್ಯಪ್ ಮೂಲಕ ವಿದ್ಯಾರ್ಥಿನಿಯರ ಮುಖ ಗುರುತಿಸುವಿಕೆ ಆಧಾರಿತ ಡಿಜಿಟಲ್ (ಎಐ) ಹಾಜರಾತಿ ದಾಖಲಿಸುತ್ತಿರುವ ದೃಶ್ಯ.