ಬೆಂಗಳೂರು ದಕ್ಷಿಣ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜಿಲ್ಲೆಯ ಗೌರವ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
- ಜಿಲ್ಲೆಗೆ ಅನೇಕ ಕಾರ್ಯಕ್ರಮ ರೂಪಿಸಿ ಶೀಘ್ರದಲ್ಲಿಯೇ ಘೋಷಣೆ ಮಾಡುವೆ
- ನಾನು ಎಷ್ಟೇ ದೊಡ್ಡ ಅಧಿಕಾರದಲ್ಲಿದ್ದರೂ ಇಲ್ಲಿ ನಿಮ್ಮ ಮಗ, ನಿಮ್ಮ ಸೇವಕಕನ್ನಡಪ್ರಭ ವಾರ್ತೆ ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜಿಲ್ಲೆಯ ಗೌರವ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಶೀಘ್ರದಲ್ಲಿಯೇ ಘೋಷಣೆ ಮಾಡುತ್ತೇನೆ. ಎಲ್ಲರೂ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ತಿರುಗಿ ನೋಡುವಂತೆ ಅಭಿವೃದ್ಧಿ ಪಡಿಸುತ್ತೇವೆ ಎಂದರು.ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬಂದಿದೆ. ಅದನ್ನು ನೀವು ಉಳಿಸಿಕೊಂಡು ನಮಗೆ ಹೆಚ್ಚಿನ ಶಕ್ತಿ ತುಂಬಬೇಕು. ನಾನು ಎಷ್ಟೇ ದೊಡ್ಡ ಅಧಿಕಾರದಲ್ಲಿದ್ದರೂ ಇಲ್ಲಿ ನಿಮ್ಮ ಮಗ, ನಿಮ್ಮ ಸೇವಕ. ಸಿಕ್ಕ ಅವಕಾಶದಲ್ಲಿ ನಿಮ್ಮ ಸೇವೆ ಮಾಡುತ್ತೇನೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರೇ ಇರಲಿ ಪಕ್ಷಭೇದ ಮರೆತು ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.ರಾಮನಗರ ಕ್ಷೇತ್ರದಲ್ಲಿ ಬದಲಾವಣೆ ಕಾಣುವ ಆಸೆಯಿಂದ ನೀವೆಲ್ಲರು ನನಗೆ ಶಕ್ತಿ ತುಂಬಿದಿರಿ. ನಮ್ಮ ಸರ್ಕಾರ ಬಂದ ಮೇಲೆ ಇಲ್ಲಿವರೆಗೆ ರಾಮನಗರ ಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿ ರುಪಾಯಿ ಅನುದಾನ ಒದಗಿಸಿ ವಿವಿಧ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈಗಾಗಲೇ ರಾಮನಗರ ಟೌನಿಗೆ ದಿನದ 24 ಗಂಟೆ ಕಾವೇರಿ ನೀರು ಒದಗಿಸಿದ್ದೇವೆ. ರಾಜೀವ್ ಗಾಂಧಿ ವಿವಿಗೆ 600 ಕೋಟಿ, ಅರ್ಕಾವತಿ ರಿವರ್ ಫ್ರಂಟ್ ಯೋಜನೆ 156 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಪಿಎಸ್ಸಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಬಡವರಿಗೆ ನಿವೇಶನ ಕಲ್ಪಿಸಲು 300 ಎಕರೆ ಜಾಗ ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಆಶ್ರಯ ಸಮಿತಿ ಸಭೆ ಮಾಡಿ ಬಡವರಿಗೆ ನಿವೇಶನ ವಿತರಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಆಗಮಿಸಿದ್ದೇನೆ. ಎಲ್ಲ ಜಾತಿ ಧರ್ಮದವರು ಸೌಹಾರ್ದತೆಯಿಂದ ಬದುಕು ಬೇಕೆಂದು ಕರಗ ಮಹೋತ್ಸವ ಆಯೋಜನೆ ಮಾಡಲಾಗಿದೆ .ನಿಮ್ಮೆಲ್ಲರ ಆಶೀರ್ವಾದದಿಂದ ಆ ಸ್ಥಾನ ಸಿಕ್ಕಿದೆ. ನನಗೆ ನಿಮ್ಮ ನೆಮ್ಮದಿ, ಸಂತೋಷದ ಬದುಕು ಮುಖ್ಯ. ನಿಮ್ಮೆಲ್ಲರ ಪ್ರಾರ್ಥನೆಯಿಂದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನನಗೆ ಒಳ್ಳೆಯದಾಗಬೇಕೆಂದು ಪ್ರತಿಯೊಬ್ಬರು ಪ್ರಾರ್ಥನೆ ಮಾಡಿದ್ದೀರಿ. ನಿಮಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ಕರ್ನಾಟಕದ ಐದು ಗ್ಯಾರೆಂಟಿಗಳು ಜನರ ಮನೆ ಬಾಗಿಲಿಗೆ ತಲುಪಿ, ಅದು ದೇಶಕ್ಕೆ ಮಾದರಿ ಕಾರ್ಯಕ್ರಮಗಳಾಗಿವೆ. ಪ್ರತಿ ಪಂಚಾಯಿತಿಗಳಲ್ಲಿ ಯುವಕ ಸಂಘಗಳು ಆರಂಭಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿ ಯುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.3 ವರ್ಷಗಳಲ್ಲಿ ರಾಮನಗರ ಚಿತ್ರಣವೇ ಬದಲು :ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ನೀವು ಕೊಟ್ಟ ಶಕ್ತಿಯಿಂದ ಮೈಸೂರು ದಸರಾ ಮಾದರಿಯಲ್ಲಿಯೇ ಬಹಳ ಭಕ್ತಿ, ಸಂತೋಷದಿಂದ , ಪಕ್ಷಾತೀತ, ಜಾತ್ಯತೀತವಾಗಿ ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಆಚರಿಸುತ್ತಿದ್ದೇವೆ. ಈ ಜಿಲ್ಲೆಯ ಮಣ್ಣಿನ ಮಗ ರಾಜ್ಯ ಚುಕ್ಕಾಣಿ ಹಿಡಿಯಬೇಕಂಬುದು ಜನರ ಆಸೆಯಾಗಿತ್ತು. ತಾಯಿಯ ಆಶೀರ್ವಾದದಿಂದಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ ಎಂದು ಹೇಳಿದರು.ಈ ಹಿಂದೆ ರಾಮನಗರ ಕ್ಷೇತ್ರ ಹೇಗಿತ್ತು ಎಂಬುದು ನಿಮಗೆಲ್ಲ ಗೊತ್ತಿದೆ. ಹಿಂದೆ ಇದ್ದವರು ಕ್ಷೇತ್ರ ಮತ್ತು ಜನರ ಹಿತ ಬಯಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಕೃಷಿ, ನೀರಾವರಿ, ಆರೋಗ್ಯ, ರಸ್ತೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇನ್ನೂ ಸಾಕಷ್ಟು ಕನಸುಗಳಿದ್ದು, ಅದೆಲ್ಲವನ್ನು ಸಾಕಾರಗೊಳಿಸುತ್ತೇವೆ. ಇದಕ್ಕಾಗಿ ಭಗವಂತ ಡಿ.ಕೆ.ಶಿವಕುಮಾರ್ ರೂಪದಲ್ಲಿ ನಮಗೆ ದೊಡ್ಡ ಶಕ್ತಿಯಾಗಿ ನೀಡಿದ್ದಾನೆ ಎಂದು ಹೇಳಿದರು.ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಉದಯ್ , ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ರಾಮೋಜಿಗೌಡ, ಸುಧಾಮ್ ದಾಸ್ , ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ , ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಮುಖಂಡ ದುಂತೂರು ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು. -----------------------ಡಿಬಾಸ್ ಅಭಿಮಾನಿಗಳ ಮೇಲೆ ಡಿಕೆಶಿ ಗರಂ - ಡಿ ಬಾಸ್ .. ಡಿ ಬಾಸ್... ಆಯ್ತು ಸುಮ್ಮನಿರಿರಾಮನಗರ :ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಷಣಕ್ಕೆ ನಿಂತಾಗ ಚಿತ್ರನಟ ದರ್ಶನ್ ಅಭಿಮಾನಿಗಳು ಡಿ ಬಾಸ್ , ಡಿ ಬಾಸ್ ಎಂದು ಘೋಷಣೆ ಕೂಗಿದರು. ಇದರಿಂದ ಕೋಪಗೊಂಡ ಡಿ.ಕೆ.ಶಿವಕುಮಾರ್ ರವರು ಈ ರೀತಿ ಮಾಡಿಯೇ ಹಾಳು ಮಾಡಿಕೊಳ್ಳುತ್ತಿದ್ದೀರಾ ಎಂದು ಹೇಳಿ ಭಾಷಣ ಮೊಟಕುಗೊಳಿಸಿ ಕುರ್ಚಿಯಲ್ಲಿ ಕುಳಿತುಕೊಂಡರು. ಆಗ ಶಾಸಕ ಇಕ್ಬಾಲ್ ಹುಸೇನ್ ರವರು, ಇದು ಅಗೌರವ ದಯವಿಟ್ಟು. ಮುಖ್ಯಮಂತ್ರಿಗಳು ಮಾತನಾಡುವಾಗ ಮೌನವಾಗಿರಬೇಕು. ಇದು ನಮ್ಮೂರಿನ ಕಾರ್ಯಕ್ರಮ. ಪ್ರತಿಯೊಬ್ಬರು ಭಕ್ತಿಯಿಂದ ಆಚರಿಸುವ ಕಾರ್ಯಕ್ರಮ. ನಿಶ್ಯಬ್ದವಾಗಿರಬೇಕು ಎಂದು ಮನವಿ ಮಾಡಿಕೊಂಡರು.ಆನಂತರ ಭಾಷಣಕ್ಕಿಳಿದ ಡಿ.ಕೆ.ಶಿವಕುಮಾರ್ ರವರು, ಇದೊಂದು ಪವಿತ್ರವಾದ ಕಾರ್ಯಕ್ರಮ. ನಿಮ್ಮ ಅಭಿಮಾನಕ್ಕೆ ಗೌರವ ಕೊಡುತ್ತೇನೆ. ಕೋರ್ಟಿನ ವಿಚಾರ ಇಲ್ಲಿ ಮಾತನಾಡಲು ಆಗಲ್ಲ. ನಾನು ಮುಖ್ಯಮಂತ್ರಿ ಆಗಿರಬಹುದು, ಜಿಲ್ಲೆಯ ಜನರ ಸೇವಕ. ನಿಮಗೆಲ್ಲ ಒಳ್ಳೆಯದಾಗ ಬೇಕಾದರೆ ಸುಮ್ಮನಿರಿ. ಕಾನೂನು ಚೌಕಟ್ಟಿನಲ್ಲಿಯೇ ಎಲ್ಲ ಕೆಲಸ ಮಾಡಬೇಕು ಎಂದರು.ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ ನೀವು ಪ್ರಾರ್ಥನೆ ಮಾಡಿ. ಪ್ರಯತ್ನ ವಿಫಲವಾದರು ಪ್ರಾರ್ಥನೆ ವಿಫಲವಾಗಲ್ಲ ಎಂದು ಭಾವಿಸಿ ತಾಯಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ, ಎಲ್ಲವೂ ಸರಿ ಹೋಗುತ್ತದೆ ಎಂದು ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.----------------------------....ಕೋಟ್ ...ನಿನ್ನೆ ಮೊನ್ನೆವರೆಗೆ ಮಳೆ ಬರದೆ ದೊಡ್ಡ ಸಮಸ್ಯೆಯಾಗಿ ರಾಜ್ಯಕ್ಕೆ ಕಂಠಕವಾಗಿತ್ತು. ಆದರೀಗ ಚಾಮುಂಡಿ ತಾಯಿಯ ಕೃಪೆ, ನಿಮ್ಮೆಲ್ಲರ ಪ್ರಾರ್ಥನೆಯಿಂದ ಮಳೆ ಸುರಿಯುತ್ತಿದೆ. ಕಾವೇರಿ ತಾಯಿ ಮೈದುಂಬಿ ತಮಿಳುನಾಡಿಗೆ ನೀರು ಹರಿಸುವ ಪರಿಸ್ಥಿತಿ ಬಂದಿದೆ.- ಡಿ.ಕೆ.ಶಿವಕುಮಾರ್ , ಮುಖ್ಯಮಂತ್ರಿ.---------------------------...ಕೋಟ್ ...ಈ ಜಿಲ್ಲೆಯ ಮಣ್ಣಿನ ಮಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಚಾಮುಂಡಿ ತಾಯಿ ಹರಸಿ, ಆಶೀರ್ವಾದಿಸಿದ್ದಾಳೆ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಅವರು ಅಭಿಮಾನ ಮತ್ತು ಬದ್ಧತೆ ಇಟ್ಟುಕೊಂಡಿದ್ದಾರೆ. ಡಿಕೆ ಸಹೋದರರ ನೇತೃತ್ವದಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಇಲ್ಲಿ ನಾನಲ್ಲ, ಇಕ್ಬಾಲ್ ಹುಸೇನ್ ಅವರೇ ಮಂತ್ರಿ. ನಾನು ಮಂತ್ರಿ, ಶಾಸಕ ಎಂಬುದನ್ನು ಮರೆತು ಜಿಲ್ಲೆಯ ಮೂವರು ಶಾಸಕರು ಒಟ್ಟಾಗಿ ಪಣತೊಟ್ಟು ಡಿಕೆಶಿರವರ ಕೈ ಬಲಪಡಿಸಿ, ಅಭಿವೃದ್ಧಿ ಕೆಲಸ ಮಾಡುತ್ತೇವೆ. ನನ್ನನ್ನು ಮಂತ್ರಿಯನ್ನಾಗಿ ಮಾಡಿರುವ ಡಿಕೆಶಿರವರ ಋಣವನ್ನು ಸಾಯುವವರೆಗೂ ತೀರಿಸಲಾಗದು.- ಎಚ್.ಸಿ.ಬಾಲಕೃಷ್ಣ, ನೂತನ ಸಚಿವರು.--------------------------4ಕೆಆರ್ ಎಂಎನ್ 11,12.ಜೆಪಿಜಿ11.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಇಕ್ಬಾಲ್ ಹುಸೇನ್ ಅಭಿನಂದಿಸಿದರು.12.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.----------------------------
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.