ಜಾಗತಿಕ ಬದಲಾವಣೆಯ ಅರಿವಿಗೆ ಡಿಜಿಟಲ್‌ ಜ್ಞಾನ ಅಗತ್ಯ

KannadaprabhaNewsNetwork |  
Published : Nov 11, 2025, 02:15 AM IST
10ಡಿಡಬ್ಲೂಡಿ5ರಾಯಾಪುರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಟಿಸಿಎಸ್ ಪ್ರಾದೇಶಿಕ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ ಉದ್ಘಾಟನೆ.  | Kannada Prabha

ಸಾರಾಂಶ

ಐಟಿ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಅರಿವು ಪಡೆಯಬಹುದು. ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಉದ್ಯೋಗಾವಕಾಶಗಳನ್ನು ಹುಡುಕಬಹುದಾಗಿದೆ.

ಧಾರವಾಡ:

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ವಿಜ್‌ಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಆಸಕ್ತಿ ಮೂಡಿಸುತ್ತಿವೆ ಎಂದು ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಹೇಳಿದರು.

ಇಲ್ಲಿಯ ರಾಯಾಪುರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಟಿಸಿಎಸ್ ಪ್ರಾದೇಶಿಕ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿದ ಅವರು, ಇತ್ತೀಚೆಗೆ ಡಿಜಿಟಲ್ ಜ್ಞಾನ ಕ್ವಿಜ್ ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಭಾರೀ ಪ್ರತಿಕ್ರಿಯೆ ದೊರಕಿದೆ. ಐಟಿ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಅರಿವು ಪಡೆಯಬಹುದು. ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಉದ್ಯೋಗಾವಕಾಶಗಳನ್ನು ಹುಡುಕಬಹುದಾಗಿದೆ. ಇದರೊಂದಿಗೆ ಗ್ರಾಮೀಣ ಯುವಕರು ಸ್ವಯಂ ಉದ್ಯೋಗಕ್ಕೆ ತಯಾರಾಗಬಹುದು. ಜಾಗತಿಕ ಬದಲಾವಣೆಯ ಅರಿವಿಗೆ ಡಿಜಿಟಲ್ ಜ್ಞಾನ ಅತ್ಯಗತ್ಯ ಎಂದು ಕೆಳದಿಮಠ ಹೇಳಿದರು.

ಇಂದಿನ ಯುಗವನ್ನು ಡಿಜಿಟಲ್ ಯುಗವೆಂದು ಕರೆಯಲಾಗುತ್ತದೆ. ಮಾಹಿತಿ ತಂತ್ರಜ್ಞಾನವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹತ್ತರ ಪಾತ್ರವಹಿಸಿದೆ. ನಗರ ಪ್ರದೇಶಗಳಷ್ಟೇ ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿಯೂ ಮಾಹಿತಿ ತಂತ್ರಜ್ಞಾನ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.

ಶಿಕ್ಷಣಾಧಿಕಾರಿ ಎಸ್‌.ಎಂ. ಹುಡೇದಮನಿ ಮಾತನಾಡಿ, ಈ ಕ್ವಿಜ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕುರಿತ ಅರಿವು ಮಾತ್ರವಲ್ಲ, ಆತ್ಮವಿಶ್ವಾಸವೂ ಬೆಳೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು ಸಹಾಯವಾಗುತ್ತವೆ ಎಂದು ಹೇಳಿದರು.ಗ್ರಾಮೀಣ ಐಟಿ ರಸಪ್ರಶ್ನೆ ನೋಡಲ್ ಅಧಿಕಾರಿ ಡಾ. ಗಿರಿಜಾ ಲಮಾಣಿ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ನಫೀಸಾಬಾನು ದಾವಲಸಾಬನವರ, ಶ್ರೀಧರ ಹೆಗಡೆ ಭದ್ರನ್, ಟಾಟಾ ಕನ್ಸಲ್ಟೆನ್ಸಿ ಪ್ರಧಾನ ವ್ಯವಸ್ಥಾಪಕಿ ಶೋಭಾ ಮೂರ್ತಿ, ರಸಪ್ರಶ್ನೆ ನಿರೂಪಕಿ ರಶ್ಮಿ ಫುರ್ಟಾಡೊ, ಶ್ರೀಧರ್ ಪಾಟೀಲ ಕುಲಕರ್ಣಿ ಇದ್ದರು. ಸಂಜೀವಕುಮಾರ ಭೂಶೆಟ್ಟಿ ನಿರೂಪಿಸಿದರು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಮೂಲಭೂತ ಜ್ಞಾನ, ಇಂಟರ್‌ನೆಟ್‌ ಬಳಕೆ, ಸಾಫ್ಟವೇರ್‌, ಸೈಬರ್ ಸುರಕ್ಷತೆ ಮುಂತಾದ ವಿಷಯಗಳಲ್ಲಿ ತಮ್ಮ ಅರಿವು ತೋರಿಸಿದರು.

PREV

Recommended Stories

ಪ್ರತಿಯೊಂದು ಕಾರ್ಯವನ್ನು ಭಗವಂತನ ಪ್ರೀತಿಗಾಗಿ ಮಾಡಿ
ಹಿಂದುಳಿದ ವರ್ಗಕ್ಕೆ ಕಾನೂನು ನೆರವು