ಡಿಜಿಟಲ್‌ ಬೋಧನೆಯಿಂದ ಗುರು-ಶಿಷ್ಯರ ನಡುವೆ ಭೌತಿಕ ಅಂತರ ಕಡಿಮೆ

KannadaprabhaNewsNetwork |  
Published : Sep 30, 2026, 03:00 AM IST
ರಾಮದುರ್ಗ | Kannada Prabha

ಸಾರಾಂಶ

ಬೋಧನಾ ವಿಧಾನಗಳು ಡಿಜಿಟಲ್ ಆಗಿವೆ. ಇದರಿಂದಾಗಿ ಗುರು ಮತ್ತು ಶಿಷ್ಯರ ನಡುವಿನ ಭೌತಿಕ ಅಂತರ ಕಡಿಮೆಯಾಗಿದ್ದು, ಮುಕ್ತ ಸಂವಾದದ ವಾತಾವರಣ ನಿರ್ಮಾಣವಾಗಿದೆ ಎಂದು ಬೆಂಬುಳಗಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಸ್.ಎಂ.ಸಕ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಬೋಧನಾ ವಿಧಾನಗಳು ಡಿಜಿಟಲ್ ಆಗಿವೆ. ಇದರಿಂದಾಗಿ ಗುರು ಮತ್ತು ಶಿಷ್ಯರ ನಡುವಿನ ಭೌತಿಕ ಅಂತರ ಕಡಿಮೆಯಾಗಿದ್ದು, ಮುಕ್ತ ಸಂವಾದದ ವಾತಾವರಣ ನಿರ್ಮಾಣವಾಗಿದೆ ಎಂದು ಬೆಂಬುಳಗಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಸ್.ಎಂ.ಸಕ್ರಿ ಹೇಳಿದರು.

ವಿಶ್ವ ಭಾರತಿ ಪದವಿ ಪೂರ್ವ ಕಾಲೇಜಿನ 2005-06ನೇ ಸಾಲಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೇ ತಂತ್ರಜ್ಞಾನ ಬೆಳೆದರೂ ಯಂತ್ರಗಳು ಮನುಷ್ಯನಿಗೆ ಭಾವನೆ, ನೈತಿಕ ಮೌಲ್ಯ ಮತ್ತು ಸಂಸ್ಕಾರ ಕಲಿಸಲು ಸಾಧ್ಯವಿಲ್ಲ. ಅದನ್ನು ಒಬ್ಬ ಗುರು ಮಾತ್ರ ಮಾಡಲು ಸಾಧ್ಯ ಎಂದರು.ತಂದೆ-ತಾಯಿ ಜನ್ಮ ನೀಡಿದರೆ, ಆ ಜನ್ಮಕ್ಕೆ ಸಾರ್ಥಕತೆ ಮತ್ತು ಯೋಗ್ಯತೆ ತಂದುಕೊಡುವವರು ಗುರುಗಳು. ಹಳೆಯ ಕಾಲದಲ್ಲಿ ಗುರುಕುಲ ಪದ್ಧತಿ ಇತ್ತು. ಅಲ್ಲಿ ಶಿಷ್ಯರು ಗುರುಗಳ ಆಶ್ರಮದಲ್ಲೇ ವಾಸಿಸುತ್ತ ಕಠಿಣ ನಿಯಮಗಳ ನಡುವೆ ವಿದ್ಯೆ ಮತ್ತು ಸಂಸ್ಕಾರ ಕಲಿಯುತ್ತಿದ್ದರು. ಆದರೆ, ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಕ್ರಾಂತಿಯಾಗಿದೆ. ಇಂಟರನೆಟ್‌, ಗೂಗಲ್ ಮತ್ತು ಕೃತಕ ಬುದ್ಧಿಮತ್ತೆಗಳ ಮೂಲಕ ಜಗತ್ತಿನ ಯಾವುದೇ ಮಾಹಿತಿ ಬೆರಳ ತುದಿಯಲ್ಲಿ ಸಿಗುತ್ತದೆ ಎಂದರು.ಸುರೇಬಾನ್‌ನ ಎಚ್‌ಎಫ್‌ಎಸ್‌ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಪಿ.ಎಲ್.ಮಿಸಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಕೇವಲ ಮಾಹಿತಿ ನೀಡಬಲ್ಲದೇ ಹೊರತು ಮನುಷ್ಯನಿಗೆ ಇರಬೇಕಾದ ವಿವೇಕ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಲು ಸಾಧ್ಯವಿಲ್ಲ. ಗೂಗಲ್ ನಿಮಗೆ ದಾರಿಯನ್ನು ತೋರಿಸಬಹುದು, ಆದರೆ ಆ ದಾರಿಯಲ್ಲಿ ಹೇಗೆ ನಡೆಯಬೇಕು ಎಂದು ಕಲಿಸುವವರು ಗುರುಗಳು ಮಾತ್ರ ಎಂದರು.ವಿಶ್ವಭಾರತಿ ಪದವಿಪೂರ್ವ ಕಾಲೇಜಿನ ಪ್ರಾಂಶಪಾಲ ಎ.ಎಚ್.ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ವಿ. ಬಿ.ಸೋಮಣ್ಣವರ, ಬಿ.ಎಚ್. ತೆಗ್ಗಿನಮನಿ, ಎಸ್.ವಿ. ಗುದಗನವರ, ವಿ.ಎಸ್. ಕಿಲಬನೂರ, ಆರ್.ಬಿ. ಸವಟಗಿ, ಎಸ್.ವಿ. ಕಲ್ಯಾಣಶೆಟ್ಟಿ, ಎಸ್.ಆರ್. ನಾಗಣ್ಣವರ, ಐ.ಎಸ್.ತಳವಾರ, ಡಿ.ಎಂ. ಮೊಗೇರ್, ಎಂ.ಎಚ್. ನದಾಫ್, ಎಚ್.ಎಸ್. ನಾಡಗೌಡ್ರ ಹಾಗೂ ಬೋಧಕೇತರ ಸಿಬ್ಬಂದಿ ಎಸ್.ಎ.ಸಣ್ಣಪ್ಪನವರ, ಎಮ್. ಎಸ್. ಶಿಂಧೆ, ಎನ್.ಎಂ. ಕಲ್ಲೂರ, ಎಂ.ಜಿ. ಮೋಹಿತೆ ಇದ್ದರು.ಹಳೇ ವಿದ್ಯಾರ್ಥಿಗಳಾದ ಮೋಹನ ದಾಸರ, ರವಿಚಂದ್ರ ಕೋಣಿಮನಿ, ಶ್ರೀಧರ ಇಂಗಳಗಿ, ಬಸವರಾಜ ಮೊರಬದ, ಮುತ್ತುರಾಜ ನರಸಾಪುರ, ರಾಘವೇಂದ್ರ ಉದಪುಡಿ, ಬಸವರಾಜ ಕೋಟಿ ಸೇರಿದಂತೆ ಇತರರು ಗುರುವೃಂದವನ್ನು ಸನ್ಮಾನಿಸಿ ಗೌರವಿಸಿದರು.ಬದಲಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ನೀಡುವ ವಿಧಾನ ಮತ್ತು ಕಲಿಯುವ ಪರಿಸರ ಬದಲಾಗಿರಬಹುದು. ಆದರೆ, ಒಬ್ಬ ವ್ಯಕ್ತಿಯ ಜೀವನ ರೂಪಿಸುವಲ್ಲಿ ಗುರುವಿನ ಪಾತ್ರ ಮತ್ತು ಅವರ ಮೇಲಿರುವ ಗೌರವ ಸದಾ ಶಾಶ್ವತವಾಗಿರುತ್ತದೆ.

-ಎಸ್.ಎಂ.ಸಕ್ರಿ, ನಿವೃತ್ತ ಪ್ರಾಚಾರ್ಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ