ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗ ದಿ. ಪ್ರೊ. ವಿ.ಆರ್. ಭಟ್ ಸ್ಮರಣಾರ್ಥ ''''''''ಪೋಕ್ಸೊ ಮತ್ತು ವಿಧಿ 21: ಡಿಜಿಟಲ್ ಯುಗದಲ್ಲಿ ಬಾಲ್ಯದ ಹಕ್ಕುಗಳ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳು ಶಿಕ್ಷಣ ಮನರಂಜನೆ ಮತ್ತು ಸಾಮಾಜಿಕ ಸಂವಹನಕ್ಕಾಗಿ ಆನ್‌ಲೈನ್ ವೇದಿಕೆಗಳಿಗೆ ಹೆಚ್ಚಾಗಿ ಅವಲಂಬಿತರಾಗುತ್ತಿದ್ದಾರೆ. ಈ ಅವಕಾಶಗಳ ಜತೆಗೆ ಮಗುವಿನ ಸುರಕ್ಷತೆಗೆ ಧಕ್ಕೆ ತರುವ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ ಎಂದರು.
ಆನ್‌ಲೈನ್ ವೇದಿಕೆಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿವೆ ಹಾಗೂ ಮಾನವನ ಘನೆತೆಗೂ ಧಕ್ಕೆ ಉಂಟು ಮಾಡುತ್ತಿವೆ. ಪೋಕ್ಸೋ ಕಾಯದೆ 2012 ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಲಯವು ನಿರಂತರವಾಗಿ ಭಾರತ ಸಂವಿಧಾನದ 21ನೇ ವಿಧಿ ಅಡಿ ಡಿಜಿಟಲ್ ಯುಗದಲ್ಲಿ ಬಾಲ್ಯದ ಹಕ್ಕುಗಳನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.ಈ ವೇಳೆ ಕಾನೂನು ವಿಭಾಗದ ಡೀನ್ ಡಾ. ವಿಶ್ವನಾಥ ಎಂ., ನಿವೃತ್ತ ಪ್ರೊ. ಎ.ಆರ್. ದೇಸಾಯಿ, ವಿಭಾಗದ ಉಪನ್ಯಾಸಕ ಡಾ. ಶಿವಕುಮಾರ ಎಂ.ಎ., ಡಾ. ಆರ್.ಎಂ. ಕಾಂಬಳೆ ಇದ್ದರು. ಮೊಹಮ್ಮದ್ ಮೀರ ಮತ್ತು ಅಮೃತಾ ಕೌಶಿಕ ನಿರೂಪಿಸಿದರು. ಪೂಜಾ ನವಲಿ ವಂದಿಸಿದರು.