ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ನಾಡಹಬ್ಬ ಉತ್ಸವ ಸಮಿತಿ ಬೆಳಗಾವಿ ಹಾಗೂ ಪ್ರಹ್ಲಾದ ಪ್ರಕಾಶನ ಬೆಳಗಾವಿ ಇವರ ನೇತೃತ್ವದಲ್ಲಿ ಡಾ.ಸಿ.ಕೆ.ಜೋರಾಪೂರ ಅವರು ಬರೆದ “ಕರ್ನಾಟಕದ ಇತಿಹಾಸ - ಒಂದು ಇಣುಕು ನೋಟ” ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಿರುವ ನಿದರ್ಶನಗಳಿಲ್ಲ. ಅಲ್ಲದೇ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿರುವ ಗ್ರಂಥಾಲಯಗಳನ್ನು ಸಂಪೂರ್ಣ ಡಿಜಿಟಲ್ ಮಾಡಲಾಗಿದೆ ಎಂದು ತಿಳಿಸಿದರು.
ಪೋಷಕರು ಮೊದಲು ಕೈಯಲ್ಲಿ ಪುಸ್ತಕ ಹಿಡಿದರೆ ಮಕ್ಕಳು ಅದೇ ಸಂಸ್ಕೃತಿಯನ್ನು ಅಳವಡಿಸಿಕೊಂಡು ಪುಸ್ತಕ, ಓದು, ಬರವಣಿಗೆಯತ್ತ ಆಸಕ್ತಿ ಹೊಂದುತ್ತಾರೆ. ಆದರೆ ಇತ್ತೀಚಿಗೆ ಮನೆಯಲ್ಲಿ ದೊಡ್ಡವರು ಫೋನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಸಮಯ ಮತ್ತು ಹೊಂದಿರುವ ಆಸಕ್ತಿಯನ್ನು ಪುಸ್ತಕದ ಮೇಲೆ ಹೊಂದಿಲ್ಲ ಇರುವುದು ವಿಪರ್ಯಾಸ ಎಂದರು.ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ತೊಂಟದಾರ್ಯ ಜಗದ್ಗುರು ಡಾ. ಸಿದ್ಧರಾಮ ಸ್ವಾಮೀಜಿ ಹಾಗೂ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಹೆಚ್. ಬಿ. ರಾಜಶೇಖರ, ರಾಜಕೀಯ ಧುರೀಣರಾದ ಎಂ.ಬಿ. ಝಿರಲಿ, ಮಹಾಂತೇಶ ಒಕ್ಕುಂದ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆರ್.ಪಿ.ಪಾಟೀಲ, ಬಾಸೂರ ತೀಪ್ಪೆಸ್ವಾಮಿ, ಬಸವರಾಜ ಗಾರ್ಗಿ, ಅನ್ನಪೂರ್ಣ ಹಿರೇಮಠ, ಮಧುಕರ ಗುಂಡೇನಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಕೋಟ್
-ಡಾ. ಸತೀಶಕುಮಾರ ಹೊಸಮನಿ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ