ಸಿದ್ದಾಪುರ: ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಚುಟುಕುಗಳ ಮೂಲಕ ಬರೆದು ಶೋಷಿತರ ಪರ ಹೋರಾಡಿದವರು ದಿನಕರ ದೇಸಾಯಿ ಎಂದು ಕವಿ ವಿಠ್ಠಲ ಅವರಗುಪ್ಪ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ, ಜಿಲ್ಲೆಯ ಮಹಾನ್ ಹೋರಾಟಗಾರರೊಬ್ಬರ ಆದರ್ಶ ಮತ್ತು ಸಮಾಜಮುಖಿ ಕೆಲಸಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂಬ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಚುಟುಕು, ಪ್ರಬಂಧ ಸ್ಪರ್ಧೆ, ಉಪನ್ಯಾಸವನ್ನು ಕಸಾಪ ಆಯೋಜಿಸಿದೆ ಎಂದರು.
ಸಮಾರಂಭದಲ್ಲಿ ಪಿ.ಬಿ.ಹೊಸೂರು.ಕನ್ನೇಶ್ ಕೋಲಸಿರ್ಸಿ ಹಾಗೂ ಅಧ್ಯಕ್ಷತೆ ವಹಿಸಿದ ವಿ. ಎನ್. ನಾಯ್ಕ ಬೇಡ್ಕಣಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸೇವಾ ಸಂಕಲ್ಪ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಸಾಪ ಸಿದ್ದಾಪುರ ಘಟಕದಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಿ.ಎಂ. ನಾಯ್ಕ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಚುಟುಕು, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ, ಅಭಿನಂದನಾ ಪತ್ರ ನೀಡಲಾಯಿತು. ವಿದ್ಯಾಲಯದ ಜಿ.ಟಿ. ಭಟ್ ಸಿಬ್ಬಂದಿ ಇದ್ದರು.
ಜನತಾ ವಿದ್ಯಾಲಯದ ಮುಖ್ಯ ಶಿಕ್ಷಕಿ ಪ್ರತಿಮಾ ಪಾಲೇಕರ್ ಸ್ವಾಗತಿಸಿದರು. ಪಿ.ಎಂ. ನಾಯ್ಕ ನಿರೂಪಿಸಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಪ್ರಶಾಂತ ಶೇಟ್ ವಂದಿಸಿದರು.