ದಿಂಡಿ ಉತ್ಸವ ಸಂಪನ್ನ

KannadaprabhaNewsNetwork |  
Published : Jan 27, 2025, 12:48 AM IST
ಪಟ್ಟಣದ ಶ್ರೀ ವಿಠ್ಠಲ್‌ ರುಖುಮಾಯಿ ದೇಗುಲದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜ ಮತ್ತು ದಿಂಡಿ ಉತ್ಸವ ಸಮಿತಿ, ಶ್ರೀ ವಿಠ್ಠಲ್‌ ರುಖುಮಾಯಿ ಸಮುದಾಯ ಭವನ ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ, ಯುವಕ ಮಂಡಳಿ, ಶ್ರೀ ವಿನಾಯಕ ಸೇವಾ ಸಮಿತಿ, ಮಹಿಳಾ ಮಂಡಳಿ ಮತ್ತು ಘತ್ರಪತಿ ಶಿವಾಜಿ ಸೇನೆಯ ಸಹಯೋಗದಲ್ಲಿ ನಡೆದ ದಿಂಡಿ ಉತ್ಸವ ಸಂಭ್ರದಿಂದ ಜರುಗಿತು. | Kannada Prabha

ಸಾರಾಂಶ

ಪಟ್ಟಣದ ಶ್ರೀ ನಾಮದೇವ ಸಿಂಪಿ ಸಮಾಜದಿಂದ ಹಮ್ಮಿಕೊಂಡಿದ್ದ ದಿಂಡಿ ಉತ್ಸವವು ನೂರಾರು ಭಕ್ತರ ಸಮ್ಮುಖ ಸಂಭ್ರಮದಿಂದ ನ್ಯಾಮತಿಯಲ್ಲಿ ನೆರವೇರಿತು.

ನ್ಯಾಮತಿ: ಪಟ್ಟಣದ ಶ್ರೀ ನಾಮದೇವ ಸಿಂಪಿ ಸಮಾಜದಿಂದ ಹಮ್ಮಿಕೊಂಡಿದ್ದ ದಿಂಡಿ ಉತ್ಸವವು ನೂರಾರು ಭಕ್ತರ ಸಮ್ಮುಖ ಸಂಭ್ರಮದಿಂದ ನೆರವೇರಿತು.

ಪಟ್ಟಣದ ಶ್ರೀ ವಿಠ್ಠಲ ರುಖುಮಾಯಿ ದೇಗುಲದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜ ಮತ್ತು ದಿಂಡಿ ಉತ್ಸವ ಸಮಿತಿ, ಶ್ರೀ ವಿಠ್ಠಲ ರುಖುಮಾಯಿ ಸಮುದಾಯ ಭವನ ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ, ಯುವಕ ಮಂಡಳಿ, ಶ್ರೀ ವಿನಾಯಕ ಸೇವಾ ಸಮಿತಿ, ಮಹಿಳಾ ಮಂಡಳಿ ಮತ್ತು ಛತ್ರಪತಿ ಶಿವಾಜಿ ಸೇನೆಯ ಸಹಯೋಗದಲ್ಲಿ ನಡೆದ ಉತ್ಸವ ಜರುಗಿತು.

ಶ್ರೀ ಪಾಂಡುರಂಗ ದೇಗುಲದಲ್ಲಿ ಶನಿವಾರ ಪೋತಿ ಸ್ಥಾಪನೆಯೊಂದಿಗೆ ಆರಂಭಗೊಂಡು ಪಂಢರೀ ಸಂಪ್ರದಾಯದ ದಿಂಡಿ ಉತ್ಸವ ಭಾನುವಾರ ಬೆಳಗಿನ ಜಾವಾ ಶ್ರೀ ವಿಠ್ಠಲ ರುಖುಮಾಯಿ ಶಿಲಾಮೂರ್ತಿಗಳಿಗೆ ವಿವಿಧ ಧಾರ್ಮಿಕ ಕಾಕಡಾರತಿ, ಸುಪ್ರಭಾತ ಭಜನೆ ನೆರವೇರಿಸಲಾಯಿತು. ಉತ್ಸವ ಮೂರ್ತಿಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಮೆರವಣಿಗೆ ನಡೆಸಲಾಯಿತು. ಕಲಾಪ್ರಸಾದ ವಿತರಣೆಯೊಂದಿಗೆ ದಿಂಡಿ ಮಹೋತ್ಸವವು ಸಂಪನ್ನಗೊಂಡಿತು. ಶನಿವಾರ ಬೆಳಗ್ಗೆ ವಿವಿಧ ಪೂಜೆ, ಬೆಣ್ಣೆ ಅಲಂಕಾರ, ಜ್ಞಾನೇಶ್ವರಿ ಗ್ರಂಥ ಪಾರಾಯಣ, ನಾಮಜಪ, ಪ್ರವಚನ, ಕೀರ್ತನೆ ಅಖಂಡ ಜಾಗರಣೆ ಸಂತವಾಣಿ ಕಾರ್ಯಕ್ರಮಗಳು ನಡೆದವು.

ಶಿವಮೊಗ್ಗ ವಿಠ್ಠಲ್‌ ರಾವ್‌ ತೇಲ್ಕರ್, ಶಿಕಾರಿಪುರ ಅಮೃತ ಗಿರಿಧರ್‌, ಶಿವಮೊಗ್ಗ ರಂಗಧೋಳ್‌ ಆರ್‌.ಹನುಮಂತ ರಾವ್‌, ರಂಗಧೋಳ್‌ ತುಕರಾಮ್‌ ರಾವ್‌, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ಸುರೇಖಾ ಜಿ. ಹೆಗ್ಗಡೆ ಪ್ರವಚನ ಸಂತವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಶನಿವಾರ ಮತ್ತು ಭಾನುವಾರ ಭಾಗವಹಿಸಿದ ಸಾವಿರಾರು ಭಕ್ತರಿಗೆ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

- - - (-ಫೋಟೋ:)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು
ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುತ್ತಿರುವ ಪ್ರಶಂಸಾರ್ಹ: ಎಂ.ಎನ್.ಪಾಟೀಲ