ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಂದೇಶ ಭಾಷಣದಲ್ಲಿ ಮಾತನಾಡಿ, ಅದೇ ರೀತಿ ಬಿ.ಗೌಡಳ್ಳಿಯ ಬಳಿ ೬.೭ ಕೋಟಿ ರು. ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣಕ್ಕೂ ಅನುಮೋದನೆ ದೊರಕಿರುವುದಾಗಿ ಹೇಳಿದರು.
ಸರ್ಕಾರದಿಂದ ವಿಪತ್ತು ಉಪಶಮನ ನಿಧಿಯಡಿ ೫.೫೪ ಕೋಟಿ ರು.ಅನುದಾನಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದ್ದು, ವಿಪತ್ತು ಸಂಭವಿಸಿದ ವೇಳೆ ಆಗುವಂತಹ ಅಪಾಯವನ್ನು ತಗ್ಗಿಸಲು ನಾಲ್ಕು ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದರು.ಕಂದಾಯ ದಾಖಲೆಗಳ ಸುರಕ್ಷತೆಯ ಉದ್ದೇಶದಿಂದ ಭೂ ಸುರಕ್ಷಾ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಇದರಂತೆ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲು, ಎಲ್ಲಾ ತಾಲೂಕುಗಳಲ್ಲೂ ಭೂ ಸುರಕ್ಷಾ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಕೆಎಸ್‌ಆರ್‌ಟಿಸಿ ಎಲ್ಲಾ ನೌಕರರಿಗೆ ಅನುಕೂಲವಾಗುವಂತೆ ನಗದು ರಹಿತ ಚಿಕಿತ್ಸಾ ಯೋಜನೆಗೆ ಚಾಲನೆ ನೀಡಲಾಗಿದೆ. ನಿಗಮದ ಎಲ್ಲಾ ನೌಕರರು ಮತ್ತು ಅವರ ಅವಲಂಬಿತರು ಈ ಯೋಜನೆಯ ಫಲಾನುಭವಿಗಳಾಗಿದ್ದು, ರಾಜ್ಯಾದ್ಯಂತ ಸುಮಾರು ೨೭೫ಕ್ಕೂ ಅಧಿಕ ಖಾಸಗಿ-ಸರ್ಕಾರಿ ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಳ್ಳಲಾಗಿದೆ. ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬದವರಿಗೆ ೧ ಕೋಟಿ ರು. ವಿಮಾ ಸೌಲಭ್ಯ ನೀಡುವ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದರು.
ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್-ಅನಿಲ ಚಿತಾಗಾರವನ್ನು ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ೪ ಕೋಟಿ ರು. ಅನುದಾನದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆ ನೀಡಿದ ಅವರು,
ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಪಂ ಸಿಇಒ ಶೇಖ್ ತನವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಇತರರಿದ್ದರು.ಜಿಲ್ಲಾಡಳಿತದಿಂದ ಗೌರವ:
ಸಾರಿಗೆ ವಾಹನ ಚಾಲಕರಿಗೆ ಸನ್ಮಾನ:
ಸಾಧಕರಿಗೆ ಗೌರವ ಸಮರ್ಪಣೆ:
ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳು:
ಪಥ ಸಂಚಲನ ವಿಜೇತರು:
ಅಬಕಾರಿ ದಳ -ಪ್ರಥಮ, ಜಿಲ್ಲಾ ಸಶಸ್ತ್ರ ಮೀಸಲು ಪಡೆ-ದ್ವಿತೀಯ, ಗೃಹ ರಕ್ಷಕ ದಳ- ತೃತೀಯ, ಬಾಲಕರ ಎನ್‌ಸಿಸಿ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದಲ್ಲಿ ಅನಿಕೇತನ ಪದವಿ ಪೂರ್ವ ಕಾಲೇಜು ಎನ್‌ಸಿಸಿ ತಂಡ- ಪ್ರಥಮ, ಪಿಇಎಸ್ ಕಾಲೇಜಿನ ಎನ್‌ಸಿಸಿ ತಂಡ- ದ್ವಿತೀಯ ಹಾಗೂ ಕಾಳೇಗೌಡ ಎನ್‌ಸಿಸಿ ಬಾಲಕರ ತಂಡ- ತೃತೀಯ. ಬಾಲಕಿಯರ ವಿಭಾಗದಲ್ಲಿ ಅನಿಕೇತನ ಪದವಿ ಪೂರ್ವ ಕಾಲೇಜು ಎನ್‌ಸಿಸಿ ತಂಡ- ಪ್ರಥಮ, ಮಂಡ್ಯ ವಿಶ್ವವಿದ್ಯಾಲಯ ತಂಡ- ದ್ವಿತೀಯ ಹಾಗೂ ರೋಟರಿ ಪ್ರೌಢಶಾಲೆ ಗೈಡ್ಸ್ ತಂಡ ತೃತೀಯ. ಪ್ರೌಢಶಾಲಾ ವಿಭಾಗದಲ್ಲಿ ಡ್ಯಾಫೋಡಿಲ್ಸ್ ಪ್ರೌಢಶಾಲೆ ಬಾಲಕಿಯರ ತಂಡ- ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ತಂಡ- ದ್ವಿತೀಯ, ಆದರ್ಶ ಪ್ರೌಢಶಾಲೆ ತಂಡ ತೃತೀಯ. ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಸೆಂಟ್ ಜೋಸೆಫ್ ಪ್ರಾಥಮಿಕ ಶಾಲೆ ಬಾಲಕಿಯರ ತಂಡ- ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ತಂಡ- ದ್ವಿತೀಯ, ವಿಮಲ ಬಾಲಕಿಯರ ಶಾಲೆ ತಂಡ ತೃತೀಯ.