- ಹಿರಿಯ ವನಿತೆಯರು, ವಿಶೇಷಚೇತನರು, ಶಾಲೆ ವಿದ್ಯಾರ್ಥಿಗಳಿಗೆ ಸಿಹಿ, ಭೋಜನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಅವರ 62ನೇ ಜನ್ಮದಿನವನ್ನು ಸೋಮವಾರ ಹಿರಿಯ ವನಿತೆಯರು, ವಿಶೇಷಚೇತನ ಮಕ್ಕಳು ಹಾಗೂ ಸರ್ಕಾರಿ ಶಾಲೆ ಮಕ್ಕಳ ಜೊತೆ ಸಂಭ್ರಮದಿಂದ ಆಚರಿಸಲಾಯಿತು.ದಿನೇಶ್ ಕೆ. ಶೆಟ್ಟಿ ಬೆಳಗ್ಗೆ ಪಿ.ಜೆ. ಬಡಾವಣೆಯ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿರುವ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಎಂಸಿಸಿ ಎ ಬ್ಲಾಕ್ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದಲ್ಲಿ ಎಸ್.ಎಸ್.ಎಂ ಯೂಥ್ ಫೋರಂ ಅಧ್ಯಕ್ಷ ಪ್ರತಾಪ್ ಮತ್ತು ಮಂಜು ಮಗವೀರ್ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳೆಯರಿಗೆ ಸಿಹಿ ಊಟದ ವ್ಯವಸ್ಥೆ ಮಾಡಿ, ಆಶೀರ್ವಾದ ಪಡೆದರು.
ಅನಂತರ ಎಸ್.ಎಸ್. ಬಡಾವಣೆಯ ಅಂಧ ಮಕ್ಕಳ ಆಶಾಕಿರಣ ಟ್ರಸ್ಟ್‌ನಲ್ಲಿ ಮಕ್ಕಳ ಜೊತೆ ಮಕ್ಕಳಿಗೆ ಸಿಹಿ ಹಂಚಿ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ಕೆಟಿಜಿ ನಗರದಲ್ಲಿ ಕೇರಂ ಗಣೇಶ್ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಪೆನ್ಸಿಲ್, ಸಿಹಿಯನ್ನು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.ಬಳಿಕ ನಿಟುವಳ್ಳಿಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿ ಬಳಗ ಅಧ್ಯಕ್ಷ ಯೋಗೇಶ್, ಶಿವಣ್ಣ ಏರ್ಪಡಿಸಿದ್ದ ಪುನೀತ್ ರಾಜಕುಮಾರ್ 50ನೇ ವರ್ಷದ ಹುಟ್ಟುಹಬ್ಬ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಪುನೀತ್ ರಾಜಕುಮಾರ್ ಫೋಟೋಗೆ ಪುಷ್ಪನಮನ ಸಲ್ಲಿಸಿ ಕೇಕ್ ಕತ್ತರಿಸಿ, ಮಕ್ಕಳಿಗೆ ಹಂಚಿ ಸಂಭ್ರಮಿಸಿದರು.
ಕ್ರೀಡಾ ಪ್ರೋತ್ಸಾಹಕ, ಮಾಜಿ ನಗರಸಭಾ ಅಧ್ಯಕ್ಷರೂ ಆಗಿರುವ ದಿನೇಶ್ ಶೆಟ್ಟಿ, ಬಿಐಟಿ ರೋಡಿನ ಜೆ.ಎಚ್. ಪಟೇಲ್ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ಹೆಸರಿನಲ್ಲಿ ಕಾಲೇಜಿನ ಕಾರ್ಯದರ್ಶಿ ಮುಸ್ತಫ ನೇತೃತ್ವದಲ್ಲಿ 70ಕ್ಕೂ ಹೆಚ್ಚು ಮಕ್ಕಳಿಗೆ ತಲಾ ₹3ರಿಂದ ₹10 ಸಾವಿರದವರೆಗೆ ಸ್ಕಾಲರ್ ಶಿಪ್ ನೀಡಿದರು. ಬಡ ಮತ್ತು ಹಳ್ಳಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಕವಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳು ಒಳ್ಳೆಯ ವಿದ್ಯಾರ್ಥಿಗಳಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಆಪ್ತರು, ಅಭಿಮಾನಿಗಳು ಭಾಗವಹಿಸಿದ್ದರು.
- - - -17ಕೆಡಿವಿಜಿ36, 37, 38, 39, 40.ಜೆಪಿಜಿ:ದಾವಣಗೆರೆಯಲ್ಲಿ ಕ್ರೀಡಾ ಪ್ರೋತ್ಸಾಹಕ ದಿನೇಶ ಕೆ. ಶೆಟ್ಟಿ ಜನ್ಮದಿನವನ್ನು ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸಲಾಯಿತು.