ಧಾರವಾಡ:
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ. 2ರಂದು ಅವರು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅವರ ಸ್ಪರ್ಧೆ ಬರೀ ಬಿಜೆಪಿಗೆ ಮಾತ್ರ ಪರಿಣಾಮ ಆಗಲಿದೆ ಎಂದೇನಿಲ್ಲ. ಅವರ ಅಭಿಮಾನಿಗಳು ಎರಡೂ ಪಕ್ಷಗಳಲ್ಲಿ ಇದ್ದಾರೆ ಎಂದರು.
ಸ್ವಾಮೀಜಿ ತಮಗೆ ಬಹಳ ವರ್ಷಗಳಿಂದ ಪರಿಚಯ ಎಂದ ಸಚಿವರು, ನಾನು ಕೂಡ ಅವರ ದೊಡ್ಡ ಅಭಿಮಾನಿ. ಅವರ ಮಾತುಗಳಲ್ಲಿ ಗಂಭೀರತೆ ಇದೆ. ಚುನಾವಣೆ ವಿಷಯ ಮಾತ್ರವಲ್ಲದೇ, ಅವರೊಂದಿಗೆ ಸಾವಿರಾರು ಜನರು ಇದ್ದಾರೆ. ಅವರ ಸೈದ್ಧಾಂತಿಕ ಭಾಷಣ ಮತ್ತು ಸಮಾಜಕ್ಕೆ ಸಂದೇಶ ಕೊಡುತ್ತಾರೆ. ಅವರನ್ನು ಅವರ ಹೇಳಿಕೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಅವರದ್ದೇ ಯಾದ ಅಭಿಮಾನಿ ಬಳಗವಿದೆ. ಅವರು ಇಷ್ಟು ಬಹಿರಂಗವಾಗಿ ಬಂದು ಹೇಳಿಕೆ ನೀಡಿದ್ದು, ಅವರ ನೋವನ್ನು ಅವರು ತೋಡಿಕೊಂಡಿದ್ದಾರೆ. ಏ. 2ರಂದು ಏನು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ. ಅವರು ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರ ಮಠವೇ ಜ್ಯಾತ್ಯತೀತ ಮಠ. ಹೀಗಾಗಿ ಅವರನ್ನು ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಅನುಸರಿಸುತ್ತಾರೆ. ಅವರಿಗೆ ಬಹು ದೊಡ್ಡ ಬೆಂಬಲಿಗರ ಪಡೆ ಇದೆ. ಖಂಡಿತವಾಗಿಯೂ ಅವರು ಯಾವುದೇ ರೀತಿ ಆಶೀರ್ವಾದ ಮಾಡಿದರೂ ನಮಗೆ ಅನುಕೂಲ ಇದೆ. ಆದರೆ, ಅವರು ಸ್ಪರ್ಧೆ ಮಾಡುತ್ತಾರೆಯೋ ಅಥವಾ ಇಲ್ಲವೋ ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದರು.ಧಾರವಾಡದಲ್ಲಿ ಕೈ ಬಾವುಟ:
ಸಾಮಾನ್ಯವಾಗಿ ಚುನಾವಣೆ ಪ್ರಕ್ರಿಯೆಗಳು ಶುರುವಾಗ ತೊಡಗಿದಾಗ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ರಾಜ್ಯಕ್ಕೂ, ಜಿಲ್ಲೆಗೂ ರಾಷ್ಟ್ರೀಯ ನಾಯಕರು ಪ್ರಚಾರಕ್ಕಾಗಿ ಬರಲಿದ್ದಾರೆ. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಧಾರವಾಡ ಕ್ಷೇತ್ರದ ಕೈ ಅಭ್ಯರ್ಥಿ ವಿನೋದ ಅಸೂಟಿ ಏ. 18ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.