ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಇಂದು ದೇಶ ಅಭಿವೃದ್ಧಿಯಾಗಬೇಕಾದರೆ ಆ ದೇಶದ ಕೃಷಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಸರಕಾರ ಕೃಷಿ ಅಭಿವೃದ್ಧಿಗಾಗಿ ಮೊದಲ ಪ್ರಾಶಸ್ತ್ಯ ಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ದೇಶ ಅಭಿವೃದ್ಧಿಯಾಗಬೇಕಾದರೆ ಆ ದೇಶದ ಕೃಷಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಸರಕಾರ ಕೃಷಿ ಅಭಿವೃದ್ಧಿಗಾಗಿ ಮೊದಲ ಪ್ರಾಶಸ್ತ್ಯ ಕೊಟ್ಟಿದೆ. ಇದಕ್ಕೆ ತಮ್ಮಗಳ ಸಹಕಾರ ಹಾಗೂ ಮಾರ್ಗದರ್ಶ ಸದಾ ಇರಲಿ ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್.ಅಂಗಡಿ ತಿಳಿಸಿದರು.

ಅವರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ಉತ್ತರ, ಎಂಎಎನ್‌ಎಜಿಇ ಹೈದರಾಬಾದ ಹಾಗೂ ಕೃಷಿ ಇಲಾಖೆ ಬಾಗಲಕೋಟೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವೆಯಲಿ ಡಿಪ್ಲೋಮಾ ಕೋರ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಇಂದು ಕೃಷಿ ಅಭಿವೃದ್ಧಿಯಾಗಬೇಕಾದರೆ ರೃತರು ನಿಮ್ಮಲ್ಲಿಗೆ ಬರುತ್ತಾರೆ. ಅವರಿಗೆ ಕೃಷಿಯ ಅಭಿವೃದ್ಧಿಯ ಮಾಹಿತಿ ನೀವು ಕೊಟ್ಟು ಸರಕಾರದ ಕೃಷಿ ಅಭಿವೃದ್ಧಿಗೆ ಸಹಕಾರ ಮಾಡಿ ಎಂದು ನುಡಿದರು.

ಸಮಾರಂಭದ ಮುಖ್ಯ ಅತಿಥಿಗಳಾದ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಮತ್ತು ರಾಜ್ಯ ನೂಡಲ್ ಅಧಿಕಾರಿ ಡಾ.ಎಂ. ಗೋಪಾಲ ಮಾತನಾಡಿ, ಇಂದು ಆಹಾರ ಧಾನ್ಯಗಳು, ಕಾಯಿಪಲ್ಲೆ ಮತ್ತು ಭೂಮಿ ಹಾಗೂ ಕುಡಿಯುವ ನೀರು ಸಹ ರಾಸಾಯನಯುಕ್ತ ಆಗುತ್ತಿವೆ. ಇದಕ್ಕೆಕಾರಣ ಇಂದು ಕೃಷಿ ಬೆಳೆಗಳಿಗೆ ರಾಸಾಯನ ಸಿಂಪರಣೆ ಅತೀ ಹೆಚ್ಚಾಗಿದೆ. ಇದರಿಂದ ಪರಿಸರ ಹಾಳಾಗುವುದರ ಜೊತೆ ಮಣ್ಣಿನ ಸತ್ವ ಕಡಿಮೆಯಾಗುವುರ ಜೊತೆ ಮನುಷ್ಯರಿಗೆ ರೋಗ ರುಜಿನಗಳು ಹೆಚ್ಚಾಗುತ್ತವೆ. ಅದಕ್ಕಾಗಿ ಸರಕಾರ ರಾಸಾಯನ ಮತ್ತು ಗೊಬ್ಬರ ಮುಕ್ತ ಬೇಳೆಗಳನ್ನು ಬೇಳೆಯಲು ಪ್ರೋತ್ಸಾಹ ಕೊಡುತ್ತಿದೆ. ಕಾರಣ ನೀವುಗಳು ಸಹ ರೈತರಿಗೆ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಮಾಡಿ ಎಂದು ತಿಳಿಸಿದರು.

ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಲಕ್ಷ್ಮಿನಾರಾಯಣ ಹೆಗಡೆ ಇವರು ಮಾತನಾಡಿದರು.

ಸಮಾರಂಭ ಉದ್ದೇಶಿಸಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ಡಾ.ಎಸ್.ಬಿ.ಪಾಟೀಲ ಹಾಗೂ ಹಿರಿಯ ಕೃಷಿ ಸಹಾಯಕ ನಿರ್ದೇಶಕ ರಫೀಕ ಕಾಂಟ್ರ್ಯಾಕ್ಟರ್‌ ಇತರರು ಇದ್ದರು. ಹಿರಿಯ ತಾಂತ್ರಿಕ ಅಧಿಕಾರಿ ಡಾ.ಸಿದ್ದಪ್ಪ ಅಂಗಡಿ ನಿರೂಪಿಸಿದರು.

Share this article