ದಿಲೀಪ್ ಕುಮಾರ್ ನಿರ್ದೇಶನದ ಪೋಲಾರ್ ಚಿತ್ರ ಪ್ರಥಮ

KannadaprabhaNewsNetwork |  
Published : Oct 09, 2024, 01:36 AM IST
15 | Kannada Prabha

ಸಾರಾಂಶ

ಈ ಸ್ಪರ್ಧೆಯಲ್ಲಿ ದಿಲೀಪ್ ಕುಮಾರ್ ನಿರ್ದೇಶನದ ಪೋಲಾರ್(ಪ್ರಥಮ), ಅಭಿಜಿತ್ ಪುರೋಹಿತ್ ನಿರ್ದೇಶನದ ಲಕ್ಷ್ಮೀ(ದ್ವಿತೀಯ), ಎಸ್.ಪಿ. ಪವನ್ ನಿರ್ದೇಶನದ ಅನ್ವಾಂಟೆಡ್ ಕಿಡ್(ತೃತೀಯ) ಸ್ಥಾನ ಪಡೆದವು. ಸ್ಟ್ಯಾನಿ ಜಾಯ್ ನಿರ್ದೇಶನದ ತ್ರಿಕಾಲಮ್ ಚಿತ್ರಕ್ಕೆ ಉತ್ತಮ ಸಂಕಲನಕಾರ ಹಾಗೂ ಕೃತಾರ್ತ ಕುಟ್ಟಂಡ ನಿರ್ದೇಶನದ ವರ್ತಕಾಲಿ ಚಿತ್ರಕ್ಕೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಚಲನಚಿತ್ರೋತ್ಸವ ಸಮಿತಿಯು ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಂಗಳವಾರ ಬಹುಮಾನ ವಿತರಿಸಿದರು.

ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ ಸಮಿತಿಯು ಏರ್ಪಡಿಸಿದ್ದ ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಈ ಸ್ಪರ್ಧೆಯಲ್ಲಿ ದಿಲೀಪ್ ಕುಮಾರ್ ನಿರ್ದೇಶನದ ಪೋಲಾರ್(ಪ್ರಥಮ), ಅಭಿಜಿತ್ ಪುರೋಹಿತ್ ನಿರ್ದೇಶನದ ಲಕ್ಷ್ಮೀ(ದ್ವಿತೀಯ), ಎಸ್.ಪಿ. ಪವನ್ ನಿರ್ದೇಶನದ ಅನ್ವಾಂಟೆಡ್ ಕಿಡ್(ತೃತೀಯ) ಸ್ಥಾನ ಪಡೆದವು. ಸ್ಟ್ಯಾನಿ ಜಾಯ್ ನಿರ್ದೇಶನದ ತ್ರಿಕಾಲಮ್ ಚಿತ್ರಕ್ಕೆ ಉತ್ತಮ ಸಂಕಲನಕಾರ ಹಾಗೂ ಕೃತಾರ್ತ ಕುಟ್ಟಂಡ ನಿರ್ದೇಶನದ ವರ್ತಕಾಲಿ ಚಿತ್ರಕ್ಕೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿತು.

ದಸರಾ ಚಲನಚಿತ್ರೋತ್ಸವ ಸಮಿತಿಯ ಉಪ ವಿಶೇಷಾಧಿಕಾರಿಯಾದ ಡಿಸಿಎಫ್ ಡಾ.ಕೆ.ಎನ್. ಬಸವರಾಜ ಮಾತನಾಡಿ, ಕಿರುಚಿತ್ರ ಸ್ಪರ್ಧೆಗೆ ಅರ್ಜಿ ಆಹ್ವಾನಿಸಿದ್ದು, 73 ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 4 ಜನರ ತೀರ್ಪುಗಾರರ ತಂಡ ಕಿರುಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಮಾಡಿತ್ತು ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಿಧಾನಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಹಿರಿಯ ನಟ ಮಂಡ್ಯ ರಮೇಶ್, ದಸರಾ ಚಲನಚಿತ್ರೋತ್ಸವ ಸಮಿತಿಯ ಉಪಾಧ್ಯಕ್ಷರಾದ ಕಾಶಿನಾಥ್, ಬೃಂದಾ ಕೃಷ್ಣೇಗೌಡ, ರಮೇಶ್, ಸಯ್ಯದ್ ಅಬ್ರಹಾಂ, ತೀರ್ಪುಗಾರರಾದ ಪ್ರೊ.ಎಂ.ಎಸ್. ಸಪ್ನಾ, ಸಮಿತಿಯ ಕಾರ್ಯಾಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಟಿ.ಕೆ. ಹರೀಶ್ ಹಾಗೂ ಸದಸ್ಯರು ಇದ್ದರು.

ಫೋಟೋ ಪ್ರದರ್ಶನ ವೀಕ್ಷಣೆ:

ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿರುವ ಕನ್ನಡ ಸಿನಿಮಾ ಬೆಳೆದು ಬಂದ ಹಾದಿ ಕುರಿತು ಫೋಟೋ ಪ್ರದರ್ಶನವನ್ನು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ವೀಕ್ಷಿಸಿದರು. ಚಲನಚಿತ್ರೋತ್ಸವ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಕೆ.ಎನ್. ಬಸವರಾಜ, ಕಾರ್ಯದರ್ಶಿ ಟಿ.ಕೆ. ಹರೀಶ್ ಹಾಗೂ ಪದಾಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ