ಕನ್ನಡಪ್ರಭ ವಾರ್ತೆ ಮೈಸೂರುಅಖಿಲ ಭಾರತ ವೀರಶೈವ ರಾಷ್ಟ್ರೀಯ ಮಹಾಸಭಾದ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ನಗರದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾಬಳಗ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಮೈಸೂರು ಜಿಲ್ಲಾ ವೀರಶೈವ ಘಟಕದ ನಿರ್ದೇಶಕ ಕಲ್ಮಳ್ಳಿ ನಟರಾಜು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಒಬ್ಬ ರಾಜಕಾರಣಿಯಾಗಿ, ಉದ್ಯಮಿಯಾಗಿ, ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾಗಿ ಅನನ್ಯವಾದದು, ಒಂದು ನಿರ್ದಿಷ್ಟ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು, ಯಾವುದೇ ವಿಷಯ ಬಂದಾಗ ಮುಚ್ಚುಮರೆ ಇಲ್ಲದೆ ಸ್ವಂತ ಪಕ್ಷವಾದರೂ ಅದರ ನಿಲುವುಗಳನ್ನು ಬಹಿರಂಗವಾಗಿ ಪ್ರಶ್ನಿಸಿ, ತಮ್ಮ ಧ್ವನಿ ಎತ್ತುತ್ತಿದ್ದರು ಎಂದರು.ಉದ್ಯಮಿಯಾಗಿ ಬಾಪೂಜಿ ಶಿಕ್ಷಣ ಸಂಸ್ಥೆಯನ್ನು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟಕ್ಕೆ ಒಬ್ಬ ಅದ್ವಿತೀಯ ಶಿಕ್ಷಣ ಪ್ರೇಮಿ ಅಷ್ಟೇ ಅಲ್ಲದೆ ರಾಜ್ಯದ ಬಹುದೊಡ್ಡ ಸಮುದಾಯವಾದ ವೀರಶೈವ ಸಮುದಾಯದ ಬಗ್ಗೆ ಯಾವುದೇ ಟೀಕೆ ಟಿಪ್ಪಣಿಗಳು ಬಂದಾಗ ಅಥವಾ ಆಳುವ ಸರ್ಕಾರಗಳು ಸಮುದಾಯವನ್ನು ನಿರ್ಲಕ್ಷಿಸುವ ಸಂದರ್ಭದಲ್ಲಿ ತಾನೋರ್ವ ಒಂದು ರಾಜಕೀಯ ಪಕ್ಷದ ಪ್ರತಿನಿಧಿ ಎನ್ನುವುದನ್ನು ನೋಡದೆ ಮುಚ್ಚುಮರೆಲ್ಲದೆ ಅದನ್ನು ಖಂಡಿಸಿ ಧ್ವನಿ ಎತ್ತಿದ ಅನೇಕ ಸಂದರ್ಭಗಳಲ್ಲಿ ನಾವು ಕಾಣಬಹುದಾಗಿದೆ, ಅಂತಹ ನೇರ ನಿಷ್ಟೂರ ಮಾತುಗಳಿಂದ ಸಮುದಾಯದ ಪರ ನಿಲ್ಲುತ್ತಿದ್ದ ಕಳೆದ ಒಂದು ದಶಕಗಳಿಂದ ದೊಡ್ಡ ಸಮುದಾಯವನ್ನು ಮುನ್ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ, ನಿಜಕ್ಕೂ ಅವರ ಅಗಲಿಕೆಯಿಂದ ನಾಡಿಗೆ ಮತ್ತು ವಿವಿಧ ಕ್ಷೇತ್ರಗಳಿಗೆ ಅಪಾರ ನಷ್ಟವಾಗಿದೆ ಎಂದರು. ಹಿರಿಯ ರಂಗಭೂಮಿ ಕಲಾವಿದ ಚಿಕ್ಕಳ್ಳಿ ಪುಟ್ಟಣ್ಣ, ಗೆರೆಹಳ್ಳಿ ದೊರೆಸ್ವಾಮಿ ಬಸವ ಬಳಗ ಪೂರ್ವ ವಲಯದ ಕಾರ್ಯದರ್ಶಿ ಲೋಹಿತ್ ದೊರೆಸ್ವಾಮಿ, ಅಖಿಲ ಭಾರತ ಮೈಸೂರು ಜಿಲ್ಲಾ ಘಟಕದ ನಿರ್ದೇಶಕ ಪರಮೇಶ್ ಮಾಸ್ಟರ್, ಮೈಸೂರು ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ಎಸ್. ಶಿವಕುಮಾರ್, ರಾಜೇಂದ್ರ ಕಲಾಬಳಗದ ಪದಾಧಿಕಾರಿಗಳಾದ ಸುರೇಶ್ ಉಮ್ಮತ್ತೂರು, ಶಿಕ್ಷಕರಾದ ಬಾಗಳಿ ಮಹೇಶ್, ಕೊತ್ತಲವಾಡಿ ಸಿದ್ಧರಾಮೇಶ್, ಜೆಎಸ್ಎಸ್ ಆಸ್ಪತ್ರೆಯ ನೌಕರ ಬಾಣಹಳ್ಳಿ ಸಂತೋಷ್, ಸೋಸಲೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜಣ್ಣ, ಹಿರಿಯ ಕಲಾವಿದ ಎಚ್.ಎಂ. ವಿಜಯಕುಮಾರ್, ಸಂಗಮ ಗೆಳೆಯರ ಬಳಗದ ಕಾರ್ಯದರ್ಶಿ ಸರಗೂರು ಚೇತನ್ ಕುಮಾರ್, ರಂಗಭೂಮಿ ಕಲಾವಿದರ ಪಾರ್ವತಪ್ಪ ಹುಲ್ಲಹಳ್ಳಿ, ಚಿಕ್ಕರೇಖಾ ಗುಂಡ್ಲುಪೇಟೆ, ಎಪಿಎಂಸಿ ಮಾಜಿ ನಿರ್ದೇಶಕ ಶಿವನಾಗಪ್ಪ ಕಬ್ಬಹಳ್ಳಿ, ಶ್ರೀಕಾಂತ ಬಾಲಿಕಾ ಶಾಲೆಯ ಮುಖ್ಯ ಶಿಕ್ಷಕ ತಳೂರು ಪ್ರಭುಸ್ವಾಮಿ, ಜೆಎಸ್ಎಸ್ ಬಾಲ ಜಗತ್ ಪ್ರೌಢಶಾಲೆಯ ಕನ್ನಡ ಶಿಕ್ಷಕ ಕರುಹಟ್ಟಿ ಮಲ್ಲಣ್ಣ, ಇತರರು ಉಪಸ್ಥಿತರಿದ್ದರು.