ಅಂಗವಿಕಲ ಮಕ್ಕಳು ದೇವರಿದ್ದಂತೆ: ವೆಂಕಟೇಶ ದೇಶಪಾಂಡೆ

KannadaprabhaNewsNetwork |  
Published : Oct 01, 2024, 01:42 AM IST
27ಕೆಕೆಆರ್1:ಕುಕನೂರಿನ ವೀರಭದ್ರೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಹಾಗು ಶಿಕ್ಷಣ ಸಂಸ್ಥೆ ವತಿಯಿಂದ ಸಮೂಹ ಸಮರ್ಥ ಸಂಸ್ಥೆ ಜರುಗುತ್ತಿರುವ ಅಂಗವಿಕಲ ಮಕ್ಕಳಿಗೆ ನಿತ್ಯ ವ್ಯಾಯಾಮ ಹಾಗು ನಾನಾ ಕ್ರೀಯಾ ಚಟುವಟಿಕೆಗಳನ್ನು ಜಿಲ್ಲಾಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ ದೇಶಪಾಂಡೆ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳಿಗೆ ನಿತ್ಯ ವ್ಯಾಯಾಮ ಮಾಡಿಸುವ ಅಗತ್ಯತೆ ಇದೆ. ಇದರಿಂದ ಅವರ ದೇಹದಲ್ಲಿ ಬದಲಾವಣೆ ಸಾಧ್ಯ.

ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಹೇಳಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ಅಂಗವಿಲಕ ಮಕ್ಕಳ ಪಾಲನೆ, ಪೋಷಣೆ ಅಗತ್ಯ. ಅಂತಹ ಮಕ್ಕಳನ್ನು ದೇವರೆಂದು ಪರಿಗಣಿಸಿ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ ದೇಶಪಾಂಡೆ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಸಮೂಹ ಸಮರ್ಥ ಸಂಸ್ಥೆ ಜರುಗುತ್ತಿರುವ ಅಂಗವಿಕಲ ಮಕ್ಕಳಿಗೆ ನಿತ್ಯ ವ್ಯಾಯಾಮ ಹಾಗೂ ನಾನಾ ಕ್ರಿಯಾ ಚಟುವಟಿಕೆ ವೀಕ್ಷಣೆ ಮಾಡಿ ಮಾತನಾಡಿದರು.

ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳಿಗೆ ನಿತ್ಯ ವ್ಯಾಯಾಮ ಮಾಡಿಸುವ ಅಗತ್ಯತೆ ಇದೆ. ಇದರಿಂದ ಅವರ ದೇಹದಲ್ಲಿ ಬದಲಾವಣೆ ಸಾಧ್ಯ. ಅಂಗವಿಕಲರು ಇದ್ದಾರೆ ಎಂದು ಅವರನ್ನು ಕಡೆಗಣಿಸಬಾರದು. ಅವರೊಂದಿಗೆ ಸದಾ ಪಾಲಕರು ಹಾಗೂ ಕುಟುಂಬ ಸದಸ್ಯರು ಬೆರೆಯಬೇಕು. ಅಂಗವಿಕಲತೆ ಎಂಬುದು ಶಾಪವಲ್ಲ. ದೈವತ್ವ ಆಗಿದೆ. ಅಂಗವಿಕಲರನ್ನು ಕಡೆಗಣಿಸದೆ ಅವರನ್ನು ದೇವರ ಸ್ವರೂಪದಲ್ಲಿ ಕಾಣಬೇಕು ಎಂದರು.

ನಿತ್ಯ ಅವರಿಗೆ ವ್ಯಾಯಾಮ ಮಾಡಿಸುವುದರಿಂದ ಹಸಿವು ಆಗುತ್ತದೆ. ಅಲ್ಲದೆ ಮೆದುಳು ಸಹ ಸ್ಪಂದಿಸುತ್ತದೆ. ಅಂಗಾಂಗಗಳ ಚಲನವಲನ ಆಗುತ್ತದೆ. ಆ ನಿಟ್ಟಿನಲ್ಲಿ ಕುಕನೂರಿನಲ್ಲಿಯೇ ವೀರಭದ್ರೇಶ್ವ ಸಂಸ್ಥೆಯಿಂದ ಆ ಕಾರ್ಯ ಜರುಗುತ್ತಿದೆ. ಕುಕನೂರು ತಾಲೂಕಿನಲ್ಲಿರುವ ಅಂಗವಿಕಲ ಮಕ್ಕಳನ್ನು ಈ ಸಂಸ್ಥೆಗೆ ಕರೆದುಕೊಂಡು ಬಂದು ನಿತ್ಯ ವ್ಯಾಯಾಮ ಮಾಡಿಸಬೇಕು. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿ ಆಗಲು ಸಾಧ್ಯ ಆಗುತ್ತದೆ ಎಂದರು.

ಈ ವೇಳೆ ಬಳಗೇರಿ ಗ್ರಾಮದಲ್ಲಿ ಒಂದೇ ಕುಟುಂಬದಲ್ಲಿ ಮೂರು ಮಕ್ಕಳು ಅಂಗವಿಕಲರಾಗಿದ್ದು, ಆ ಮಕ್ಕಳಿಗೆ ಅಂಗವಿಕಲ ಜಿಲ್ಲಾಧಿಕಾರಿ ವೆಂಕಟೇಶ ಅವರು ಸರ್ಕಾರಿ ಸವಲತ್ತುಗಳನ್ನು ತಲುಪುವಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು. ಅಲ್ಲದೆ ಅವರ ಆರೋಗ್ಯ ಬಗ್ಗೆ ಕಾಳಜಿ ವಹಿಸಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹ ತಿಳಿಸಿದರು.

ಸಿಡಿಪಿಒ ಬೆಟ್ಟದಪ್ಪ, ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ಪಪಂ ಸದಸ್ಯ ನೂರುದ್ದೀನ ಗುಡಿಹಿಂದಲ್, ಶ್ರೀ ವೀರಭದ್ರೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಈರಪ್ಪ ಕರೆಕುರಿ, ಸಮೂಹ ಸಾಮರ್ಥ್ಯ ಸಂಸ್ಥೆಯ ಪ್ರವೀಣ, ವಿ.ಆರ್.ಡಬ್ಲೂ. ಶರಣಯ್ಯ ಹಾಗೂ ಇತರರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ