ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಶಿವಮೊಗ್ಗದಿಂದ ಚನ್ನಗಿರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಹೊಳೆಹೊನ್ನೂರು-ಅರಹತೊಳಲು ಕೈಮರ ಮಧ್ಯದಲ್ಲಿ ನಾಲ್ಕು ಬೃಹತ್ ಮರಗಳು ಸಂಪೂರ್ವಾಗಿ ಒಣಗಿ ರಸ್ತೆಗೆ ಬಾಗಿ ನಿಂತಿವೆ. ಪ್ರತಿನಿತ್ಯ ಸಾವಿರಾರು ವಾಹನಗಳು ಹೆದ್ದಾರಿಯಲ್ಲಿ ಓಡಾಡುತ್ತವೆ. ಆದರೆ ಅವರೆಲ್ಲಾ ಈ ಮರಗಳ ಬಳಿ ಬರುವಾಗ ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕಾರ್ಮಿಕರು, ದನ ಮೇಯಿಸುವವರು ಸೇರಿ ನೂರಾರು ದಾರಿಹೋಕರು ರಸ್ತೆಯಲ್ಲಿ ನಡೆದಾಡಲು ಭಯ ಪಡುತ್ತಿದ್ದಾರೆ.
ಈ ಒಣಗಿರುವ ಬೃಹತ್ ಮರಗಳ ಪಕ್ಕದಲ್ಲಿಯೇ 11 ಸಾವಿರ ಕಿ.ಲೋ.ವ್ಯಾಟ್ ಸಾಮರ್ಥ್ಯದ ವಿದ್ಯುತ್ ಲೈನ್ ಹಾದು ಹೋಗಿದೆ. ಯಾವುದೇ ಕ್ಷಣದಲ್ಲಾದರೂ ಮರಗಳು ಗಾಳಿ ಮಳೆಗೆ ಮುರಿದು ಬೀಳುವ ಸಾಧ್ಯತೆ ಇದೆ. ಕೆಲವೊಂದು ಬಾರಿ ಒಣ ಮರದ ರೆಂಬೆಗಳು ಬೈಕ್ ಸವಾರರ ಮೇಲೆ ಬಿದ್ದಿರುವ ಉದಾಹರಣೆಗಳು ಇವೆ.ಗಮನ ಹರಿಸುವುದೇ ಅರಣ್ಯ ಇಲಾಖೆ
ಚಂದ್ರಪ್ಪ, ಮೆಸ್ಕಾಂ ಎಂಜಿನಿಯರ್
ಚಲಿಸುತ್ತಿರುವ ವಾಹನಗಳ ಮೇಲೆ ಒಣಗಿದ ಮರದ ರೆಂಬೆಗಳು ಬಿದ್ದರೆ ಏನಾಗುವುದೆಂದು ಊಹಿಸಿಕೊಳ್ಳುವುದೂ ಕಷ್ಟವಾಗಿದೆ. ಈಗಿರುವಾಗ ಅರಣ್ಯ ಇಲಾಖೆಯಾಗಲೀ ಅಥವಾ ಕೆಇಬಿಯವರಾಗಲೀ ಒಣಗಿದ ಮರಗಳನ್ನು ತಕ್ಷಣ ಕಡಿಯಬೇಕು. ಇಲ್ಲವಾದರೆ ಆಗುವ ಅನಾಹುತಕ್ಕೆ ಇಲಾಖೆಯವರೆ ನೇರ ಹೊಣೆಯಾಗಬೇಕಾಗುತ್ತದೆ.ಎಸ್.ಪಿ.ಅರುಣ್ ಪಾಲಂಕರ್. ಹೊಳೆಹೊನ್ನೂರು