ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಹೊಳಲ್ಕೆರೆಯ ಒಂಟಿಕಂಬದ ಶ್ರೀ ಮುರುಘಾಮಠದ ಆವರಣದಲ್ಲಿ ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳ ೩೨ನೆಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಭಾಗಿಯಾಗಿ ಆಶೀರ್ವಚನ ನೀಡಿದರು.
ಇಡೀ ಜಗತ್ತಿನಲ್ಲಿ ರಾಮಕೃಷ್ಣ ಮಿಷನ್ ಶಾಖೆಗಳಿವೆ. ಜಗತ್ತಿನ ಪ್ರತಿ ಮೂಲೆಯಲ್ಲೂ ಇವೆ. ರಾಮಕೃಷ್ಣ ಪರಮಹಂಸರು ತಮ್ಮ ಕೊಲ್ಕತ್ತಾದ ಆಶ್ರಮ ಬಿಟ್ಟರೆ ಎಲ್ಲೂ ಹೋಗಿಲ್ಲ. ಆದರೆ ಅವರ ಹೆಸರು ಜಗತ್ತಿನ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ್ದು ವಿವೇಕಾನಂದರಂತಹ ಉತ್ತಮ ಶಿಷ್ಯರಿಂದ ಮಾತ್ರ ಸಾಧ್ಯವಾಯಿತು ಎಂದರು.ಎಸ್‌ಜೆಎಂ ವಿದ್ಯಾಪೀಠದ ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿ, ಶ್ವಾಸವಿರುವ ತನಕ ವಿಶ್ವಾಸ ಬಿಡಬೇಡ ಎಂಬುದನ್ನು ಅಳವಡಿಸಿಕೊಂಡು ಬದುಕಿದವರು ಮಲ್ಲಿಕಾರ್ಜುನ ಸ್ವಾಮಿಗಳು. ಅವರು ಮಾತನಾಡುವಾಗ ಅವರ ಪ್ರತಿ ಮಾತು ಭಾಷಣದ ರೀತಿ ಇರುತ್ತಿತ್ತು. ಶ್ರೀಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರೆ ಸಭೆ ಗಾಂಭೀರ್ಯದಿಂದ ಕೂಡಿರುತ್ತಿತ್ತು. ಜಯದೇವ ಶ್ರೀ ಅನ್ನದಾಸೋಹ ಹಾಗೂ ವಸತಿಗೆ ಪ್ರಾಮುಖ್ಯತೆ ನೀಡಿದ್ದರು. ಮಲ್ಲಿಕಾರ್ಜುನ ಶ್ರೀಗಳು ವಿದ್ಯಾಸಂಸ್ಥೆ ಸ್ಥಾಪಿಸಿ ಜ್ಞಾನ ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದರು ಎಂದು ತಿಳಿಸಿದರು.
ಶಿವಯೋಗಿ ಸಿ.ಕಳಸದ, ರಾವಂದೂರಿನ ಶ್ರೀ ಮೋಕ್ಷಪತಿ ಮಹಾಸ್ವಾಮಿಜಿ. ಮಾಜಿ ಶಾಸಕ ಪಿ ರಮೇಶ್, ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಬಿ.ಗುಡಸಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಮಾತನಾಡಿದರು.
ಗುರುಮಿಠಕಲ್ ಶ್ರೀ.ಶಾಂತವೀರ ಸ್ವಾಮಿಗಳು, ಚಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಬಸವ ಮಹಾಂತ ಸ್ವಾಮಿಗಳು, ಶರಣೆ ಶ್ರೀ ಸತ್ಯಕ್ಕ ಅಕ್ಕ ಜಯಶ್ರೀ, ಮಾಜಿ ಶಾಸಕ ತಿಪ್ಪೇರುದ್ರಪ್ಪ, ಪಟೇಲ್ ಶಿವಕುಮಾರ್, ಹರಗುರು ಚರಮೂರ್ತಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಜನ್ಮ ಶತಮಾನೋತ್ಸವ ಅಂಗವಾಗಿ ಸತ್ಯ ಶುದ್ಧ ಕಾಯಕ ತ್ರೈಮಾಸಿಕ ಪುಸ್ತಕ ಬಿಡುಗಡೆ ಮಾಡಲಾಯಿತು. ಉಮೇಶ್ ಪತ್ತಾರ್ ಪ್ರಾರ್ಥಿಸಿ ಮುರುಗೇಶ್ ಸ್ವಾಗತಿಸಿ, ಶ್ರೀ.ಮಲ್ಲಿಕಾರ್ಜುನ ಸ್ವಾಮಿಗಳು ನಿರೂಪಿಸಿ ವಂದಿಸಿದರು.