ರಾಷ್ಟ್ರೀಯ ಸೇವಾ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬಂದು ಸಾಧನೆಯ ಹಾದಿಯಲ್ಲಿ ಸಾಧಕರಾಗಿ ನಿಂತು ಸಮಾಜಕ್ಕೆ ಕೊಡುಗೆ ನೀಡಬಹುದು. ಹಳ್ಳಿಯಿಂದ ನಗರ ಪ್ರದೇಶದವರೆಗೆ ನಿಮ್ಮ ಸೇವೆ ಸದಾ ಹೀಗೆ ಇರಲಿ.
ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ಇದ್ದರೆ ಸಾಧಕರಾಗಿ ಬೆಳೆಯಬಹುದು ಎಂದು ಕರಲಕಟ್ಟೆ ಗ್ರಾಮದ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಕೆ.ಎನ್.ವಿಜಯಕುಮಾರ್ ತಿಳಿಸಿದರು.
ಸಮೀಪದ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಾಲೆಯ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸಿ ವಾತಾವರಣದಲ್ಲಿ ಮತ್ತಷ್ಟು ಸೊಬಗನ್ನು ಹೆಚ್ಚಿಸಿದ್ದೀರಿ ಎಂದು ಶಿಬಿರಾರ್ಥಿಗಳ ಸೇವೆಯನ್ನು ಸ್ಮರಿಸಿದರು.
ರಾಷ್ಟ್ರೀಯ ಸೇವಾ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬಂದು ಸಾಧನೆಯ ಹಾದಿಯಲ್ಲಿ ಸಾಧಕರಾಗಿ ನಿಂತು ಸಮಾಜಕ್ಕೆ ಕೊಡುಗೆ ನೀಡಬಹುದು. ಹಳ್ಳಿಯಿಂದ ನಗರ ಪ್ರದೇಶದವರೆಗೆ ನಿಮ್ಮ ಸೇವೆ ಸದಾ ಹೀಗೆ ಇರಲಿ ಎಂದರು.
ನಿಮ್ಮ ಶಾಲೆ ತರಗತಿಗಳನ್ನು ಬಿಟ್ಟು ಒಂದು ವಾರಗಳ ಕಾಲ ಸಮಯ ಕಳೆದಿದ್ದೀರಿ. ನಿಮ್ಮ ಅನುಭವಗಳು, ಒಂದು ಪ್ರವಾಸಕ್ಕೆ ಹೋದಾಗ ಹಲವು ಸವಿನೆನಪುಗಳು ಇರುತ್ತದೆ. ಅವುಗಳು ನಿಮ್ಮ ಜೀವನ ಪರ್ಯಂತ ನೆನಪಿನಲ್ಲಿ ಉಳಿಯಲಿವೆ ಎಂದರು.
ಸಮಾಜದಲ್ಲಿ ಸಾಧನೆ ಹಾದಿಯಲ್ಲಿರುವ ವ್ಯಕ್ತಿಗಳಲ್ಲಿ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ನೋಡುವ ಆಶಯ ನನ್ನದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೋರಾಟ ಮಾಡುವುದು ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟ. ಆದರೆ, ನಗರ ಪ್ರದೇಶದ ವಿದ್ಯಾರ್ಥಿಗಳ ಜೊತೆ ಹೋರಾಟ ಮಾಡಿ ಸಾಧಕರಾಗಿ ನಿಲ್ಲಬೇಕು ಎಂದರು.
ಸಾತನೂರು ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿ ತೇಜಸ್ ಮಾತನಾಡಿ, ಶಿಬಿರದಲ್ಲಿ ನೀವು ಕಲಿತಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ವ್ಯಾಸಂಗಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಅರಣ್ಯ ಇಲಾಖೆಯ ಮಹೇಶ್ ಮಾತನಾಡಿ, ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯಿಂದ ಸಕಾಲಕ್ಕೆ ಮಳೆಯಾಗದೆ ಜಾಗತಿಕ ತಾಪಮಾನ ಹೆಚ್ಚಾಗಿ ಮರಗಿಡಗಳು ಒಣಗುವುದಲ್ಲದೆ, ಅಂತರ್ಜಲ ಕಡಿಮೆಯಾಗಿ ನೀರಿನ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಮನೆ ಸುತ್ತಮುತ್ತಲಿನಲ್ಲಿ ಉತ್ತಮ ಪರಿಸರ ರೂಪಿಸಿ ಗಿಡಮರಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಹಲಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಅವರು, ಶಿಬಿರದಲ್ಲಿ ವಿದ್ಯಾರ್ಥಿಗಳು ಮಾಡಿದ ಸಾಧನೆ ಹಾಗೂ ಉಪನ್ಯಾಸಕರು ನೀಡಿದ ಸಹಕಾರವನ್ನು ಹಾಡಿನ ಮುಖಾಂತರ ವಿವರವಾಗಿ ತಿಳಿಸಿಕೊಟ್ಟರು.
ಶಿಬಿರಾಧಿಕಾರಿ ಬಿ.ಸಿ.ರವಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ ಗ್ರಾಮದಲ್ಲಿ ಪರಿಸರ ರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮ ಹಾಗೂ ಮದ್ಯಪಾನ- ಧೂಮಪಾನದಿಂದ ಆಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು, ತೇಜಸ್, ಮಹೇಶ್, ಶ್ರೀನಿವಾಸ್, ಗುರುಪ್ರಸಾದ್, ತಾರಾಜಯಲಕ್ಷ್ಮೀ, ಸುಧಾಬಿದರಿ, ರವಿ, ಭವ್ಯ ಮತ್ತು ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.