ಬೌದ್ಧಿಕ ವಿಕಸನಕ್ಕೆ ಪ್ರವಚನ ಸಹಕಾರಿ

KannadaprabhaNewsNetwork | Published : Apr 24, 2025 12:06 AM

ಸಾರಾಂಶ

ಆಧುನಿಕತೆ ದಿನಗಳಲ್ಲಿ ಪುರಾಣ ಮತ್ತು ಪ್ರವಚನ ಹೆಚ್ಚು ಪ್ರಸ್ತುತವಾಗಿವೆ. ಅವುಗಳಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಭಾಗವಹಿಸಬೇಕು. ಇದರಿಂದ ಧರ್ಮ, ಸಂಸ್ಕೃತಿ, ಶರಣರ ತತ್ವ, ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಕುಷ್ಟಗಿ:

ದೇಹದ ಬೆಳವಣಿಗೆಗೆ ಆಹಾರ ಎಷ್ಟು ಮುಖ್ಯವೋ ಬುದ್ಧಿಯ ವಿಕಸನಕ್ಕೆ ಪುರಾಣ, ಪ್ರವಚನದ ನುಡಿಗಳು ಅಷ್ಟೇ ಮುಖ್ಯ ಎಂದು ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಬಸವ ಜಯಂತಿ ಅಂಗವಾಗಿ ನಡೆದ ಬಸವ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಉಂಟಾಗುತ್ತಿದ್ದು ಅಂತರಾತ್ಮದ ಶುದ್ಧಿ ಸಾಧ್ಯವಾಗಬೇಕಾದರೆ ಪುರಾಣ- ಪ್ರವಚನ ಆಲಿಸಬೇಕೆಂದರು.

ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಟಿ. ಬಸವರಾಜ ಮಾತನಾಡಿ, ಆಧುನಿಕತೆ ದಿನಗಳಲ್ಲಿ ಪುರಾಣ ಮತ್ತು ಪ್ರವಚನ ಹೆಚ್ಚು ಪ್ರಸ್ತುತವಾಗಿವೆ. ಅವುಗಳಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಭಾಗವಹಿಸಬೇಕು. ಇದರಿಂದ ಧರ್ಮ, ಸಂಸ್ಕೃತಿ, ಶರಣರ ತತ್ವ, ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿವಶರಣರ ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ಮತ್ತು ಓದುವುದರಿಂದ ಜೀವನ ಪಾವನವಾಗುತ್ತದೆ. ಜನರು ಪುರಾಣ, ಪ್ರವಚನ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯುತ್ತಾರೆ ಎಂದರು.

ಪ್ರವಚನಕಾರ ಬಸವಕಿರಣ ಶರಣರು ಮಾತನಾಡಿ, ಮಹಾತ್ಮರ ನುಡಿಗಳನ್ನು ಕೇಳಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಬಸವಾದಿ ಶಿವಶರಣರ ತತ್ವಗಳನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಇಂದು ದುಡ್ಡು ಕೊಟ್ಟು ಏನಾದರು ಪಡೆದುಕೊಳ್ಳಬಹುದು. ಆದರೆ, ಪುರಾಣ-ಪ್ರವಚನ ಸಿಗುತ್ತಿಲ್ಲ. ಅವುಗಳು ಜೀವನದ ಒಂದು ಅವಿಭಾಜ್ಯ ಅಂಗವಾಗಿವೆ ಎಂದು ಹೇಳಿದರು.

ಈ ವೇಳೆ ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಮಹಾದೇವಪ್ಪ ಮಹಾಲಿಂಗಪುರ, ಮಹಾಂತಯ್ಯ ಹಿರೇಮಠ, ಎಸ್‌.ಕೆ. ತಟ್ಟಿ, ಮಲ್ಲಪ ಹೊರಪ್ಯಾಟಿ, ಶಿವಮ್ಮ ನಿಡಶೇಸಿ, ರಾಮನಗೌಡ ಪಾಟೀಲ್, ಮಲ್ಲಪ್ಪ ಮದ್ನಾಳ, ಜೆ. ಶರಣಪ್ಪ, ಸಿದ್ದರಾಮಪ್ಪ ವಂದಾಲಿ, ಎಸ್‌.ಸಿ. ಪಾಟೀಲ್ , ಬಸವ ಸಮಿತಿ ಕಾರ್ಯದರ್ಶಿ ಮಹೇಶ ಹಡಪದ, ಕಳಕಪ್ಪ ರೆಡ್ಡೇರ, ನೀಲಮ್ಮ ಮಹಾಲಿಂಗಪುರ, ಶಿಲ್ಪಾ ಸುಂಕದ, ಗಿರಿಜಾ ಪಾಟೀಲ, ಬಸವರಾಜೇಶ್ವರಿ ಪಾಟೀಲ, ಸಂಗೀತ ಬಳಗದವರಾದ ಮಲ್ಲನಗೌಡ ಅಗಸಿಮುಂದಿನ, ತಬಲ ವಾದಕರಾದ ರುಕ್ಮುದ್ದೀನ್ ಧಾರವಾಡ, ಬಸವ ಸಮಿತಿ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Share this article