ಕನ್ನಡಪ್ರಭವಾರ್ತೆ, ತುರುವೇಕೆರೆ
ತಾಲೂಕಿನ ಮಾಯಸಂದ್ರ ಗ್ರಾಮದ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಬಾಪೂ ಶಿಶುವಿಹಾರ ವತಿಯಿಂದ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷನಷ್ಟೇ ಸಾಮರ್ಥ್ಯ ಮಹಿಳೆ ಹೊಂದಿದ್ದರೂ, ಅವರನ್ನು ಕೀಳಾಗಿ ಕಾಣುವುದು ಮುಂದುವರಿದಿದೆ. ಮಹಿಳೆಯರು ಇಂದಿಗೂ ಶೋಷಿತರಾಗಿಯೇ ಉಳಿದಿದ್ದಾರೆ. ಆಕೆ ಕೇವಲ ಭೋಗದ ಅಥವಾ ಪುರುಷರ ಸೇವೆಗೆಂದೇ ಇರುವ ನಿರ್ಜೀವ, ನಿರ್ಭಾವ ವಸ್ತು ಎಂದೇ ಭಾವಿಸಲಾಗಿದೆ ಎಂದು ಕಿಡಿಕಾರಿದರು.ಇಂದಿಗೂ ಮಹಿಳೆ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಹೋಗಬೇಕು, ಯಾರ ಜೊತೆಗೆ ಮಾತನಾಡಬೇಕು, ಯಾರ ಜೊತೆಗೆ ಮದುವೆಯಾಗಬೇಕು, ಯಾವ ಶಿಕ್ಷಣ ಪಡೆಯಬೇಕು ಅನ್ನೋದನ್ನು ಪುರುಷ ಪ್ರಧಾನ ಸಮಾಜವೇ ನಿರ್ಧರಿಸುತ್ತದೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೋಮಲ ಸಂತೋಷ್, ಆಶಾ ಜಿನಚಂದು, ಶೈಲಾ ಪ್ರಸಾದ್ ಜೈನ್, ಸಹನಾ ಸತ್ಯಾನಂದ್, ಗೀತಾಂಜಲಿ ವಿಫಲ ಜೈನ್. ಶೃತಿ ಯೋಗಾನಂದ್. ವಿಜಯ ವಸಂತರಾಜ್ ಜೈನ್. ಶ್ರೀದೇವಿ ಅಭಿನಂದನ್ ಜೈನ್. ಮೀನಾ ನಾಗೇಂದ್ರ. ಲಕ್ಷ್ಮಮ್ಮ ನರಸಿಂಹಯ್ಯ. ಅಂಜಲಿ ಭಾನುಪ್ರಕಾಶ್. ಪೂರ್ಣಿಮಾ ಮಹಾವೀರಬಾಬು. ಸ್ವಪ್ನ ವಿನೋದ್ ಪಾಲ್ಗೊಂಡಿದ್ದರು.