ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯದ ಸರ್ಕಾರ ನ್ಯಾಯ ನೀತಿ, ಧರ್ಮದ ರೀತಿ ಹೋಗುತ್ತಿಲ್ಲ. ಇದುವರೆಗೂ ರಾಜ್ಯದಲ್ಲಿ ಒಂದೂ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇದರ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಮಾಡಿದರೆ ಅವರು ಅದಕ್ಕೂ ಅಭಿವೃದ್ಧಿ ಸಂಬಂಧವಿಲ್ಲದ ಬೇರೆ ಉತ್ತರ ಕೊಡುತ್ತಾರೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಅವರು ಭಾನುವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿರಾ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡರವರ ಗೃಹ ಕಚೇರಿ ಸೇವಾ ಸದನಕ್ಕೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಸಮಸ್ಯೆ ಹೆಚ್ಚಾಗಿದೆ. ಅದನ್ನೇ ಸರಿಪಡಿಸಲು ಅವರಿಂದ ಆಗುತ್ತಿಲ್ಲ. ಸಿಎಂ ಖುರ್ಚಿಗಾಗಿ ಕಿತ್ತಾಟ ನಡೆಯುತ್ತಲೇ ಇದೆ. ಅವರ ಭ್ರಷ್ಟಾಚಾರವನ್ನು ಮುಚ್ಚಿಟ್ಟುಕೊಳ್ಳಲು ಜನರ ಗಮನ ಬೇರೆಡೆ ಸೆಳೆಯಲು ಬೇರೆ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ೫ ಗ್ಯಾರಂಟಿಗಳನ್ನು ಕೊಟ್ಟು ೫ ವರ್ಷ ಕಳೆಯಬೇಕೆಂಬುದೇ ಅವರ ಉದ್ದೇಶವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಸಮುದಾಯವನ್ನು ದಮನ ಮಾಡಿದೆ. ದಲಿತರಿಗೆ ಅನ್ಯಾಯವಾಗುತ್ತಿದೆ ಆದರೆ ದಲಿತರು ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ವಿಶೇಷ ಗಮನ ಕೊಡಬೇಕು ಎಂದು ಸಂವಿಧಾನದಲ್ಲಿದೆ ಒಂದು ಕೈಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಕಾಂಗ್ರೆಸ್ಸಿನ ಕಾಂಗ್ರೆಸ್ ಸರ್ಕಾರ ತತ್ವವಾಗಿದೆ. ರಾಜ್ಯದಲ್ಲಿ ಎಸ್‌ಸಿಪಿ ಟಿಎಸ್‌ಪಿ ಹಣ ೩೯ ಸಾವಿರ ಕೋಟಿ ರು. ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿ ಆ ಸಮುದಾಯಕ್ಕೆ ಅನ್ಯಾಯ ಮಾಡಿದೆ ಈ ಸರ್ಕಾರ. ಮತಬ್ಯಾಂಕ್ ಉಳಿಸಿಕೊಳ್ಳಲು ಮುಸಲ್ಮಾನರಿಗೆ ಮೀಸಲಾತಿ ಕೊಡುತ್ತೇವೆ ಎಂದು ಹೇಳುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಲ್ಲಿ ಧಾರ್ಮಿಕ ಮೀಸಲಾತಿ ಇಲ್ಲ. ಆದರೆ ಮುಸಲ್ಮಾನರ ಬಡತನ ನಿರ್ಮೂಲನೆ ಮಾಡಲು ಸವಲತ್ತು ಕೊಡಬೇಕು. ಆ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಮುಸ್ಲಿಂರಿಗೆ ಶೇ. ೪ ಮೀಸಲಾತಿ ಕೊಡುತ್ತೇವೆಂದು ಕಾಯ್ದೆ ತಂದರೂ ಗೌರ್ವನರ್ ಒಪ್ಪುವುದಿಲ್ಲ. ಆಗ ಗೌರ್ವನರ್ ಒಪ್ಪುತ್ತಿಲ್ಲ ಅವರು ಮುಸ್ಲಿಂರ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ನೂರಕ್ಕೆ ನೂರು ಮುಸ್ಲಿಂರಿಗೆ ಒಳ್ಳೆಯದು ಮಾಡುತ್ತಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಬಿಜೆಪಿ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈರಣ್ಣ ಪಟೇಲ್, ನಿಕಟಪೂರ್ವ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಕೊಟ್ಟ ರಂಗನಾಥ್, ಮಲ್ಲಿಕಾಪುರ ಮಂಜುನಾಥ್, ಶ್ರೀಧರ್ ಮೂರ್ತಿ, ಲಕ್ಷ್ಮೀನಾರಾಯಣ, ಮಹಿಳಾ ಮೋರ್ಚ ರತ್ನಮ್ಮ, ಪದ್ಮ ಮಂಜುನಾಥ್, ಕವಿತಾ, ಸೈಯದ್ ಬಾಬಾ, ಕೃಷ್ಣಮೂರ್ತಿ, ಶಶಿ ಕುಮಾರ್, ಯಳಿಯಪ್ಪ, ಯೋಗಾನಂದ್ ಸೇರಿದಂತೆ ಹಲವರು ಹಾಜರಿದ್ದರು. ಕೋಟ್..... 1ಮೋದಿ ಕಾಂಗ್ರೆಸ್ ಪಕ್ಷವನ್ನೇ ಹನಿ ಟ್ರಾಪ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್ ಅವರು ಮೋದಿಯೇ ಹನಿ ಟ್ರಾಪ್‌ನ ಪಿತಾಮಹಾ ಎಂದು ಹೇಳುತ್ತಿದ್ದಾರೆ ಅದು ಸರಿಯಾಗಿದೆ. ಹೇಗೆಂದರೆ ಈ ದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನೇ ಹನಿ ಟ್ರಾಪ್ ಮಾಡಿದ್ದಾರೆ. ಇನ್ನೇನಿದ್ದರೂ ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಸನಿಹದಲ್ಲಿದ್ದಾರೆ. -- ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್.