ವಿವಿಧ ವಿಷಯಗಳ ಕುರಿತು ಸಂವಾದ, ಮಾಹಿತಿ ಸಭೆ

KannadaprabhaNewsNetwork | Published : Nov 24, 2024 1:45 AM

ಸಾರಾಂಶ

ಹೊಸದಾಗಿ ತೆರೆದಿರುವ ಪಟ್ಟಣದ ಶಾಂತಿನಗರದ ನಮ್ಮ ಕ್ಲಿನಿಕ್ ನಿಂದ ಉಚಿತವಾಗಿ ಸಿಗುವಂತ ಸೌಲಭ್ಯ ತಿಳಿಸಿದರು. ಕ್ಯಾನ್ಸರ್ ಮುನ್ನಚ್ಚರಿಕೆ ಕ್ರಮ, ತುಂಬಾಕು ಸೇವನೆಯಿಂದ ಆಗುವಂತಹ ಸಮಸ್ಯೆಗಳ ಕುರಿತು ಸರ್ಕಾರಿ ಆಸ್ಪತ್ರೆಯಿಂದ ಜನರಿಗೆ ಉಚಿತವಾಗಿ ಲಭ್ಯವಿರುವ ಸೇವೆಗಳ ಬಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಒಡಿಪಿ ಸಂಸ್ಥೆಯಿಂದ ಪಟ್ಟಣದಲ್ಲಿ ವಿವಿಧ ವಿಷಯಗಳ ಕುರಿತು ಸಂವಾದ, ಮಾಹಿತಿ ಸಭೆ ನಡೆಯಿತು.

ಪುರಸಭೆ ಮುಖ್ಯಾಧಿಕಾರಿ ಸತೀಶ್ ಮಾತನಾಡಿ, ಸ್ವಸಹಾಯ ಸಂಘಗಳಿಗೆ ಪುರಸಭೆಯಿಂದ ಸಿಗುವ ಸೌಲಭ್ಯಗಳು, ಅಮೃತ ಮಿತ್ರ ಯೋಜನೆ, ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಮಾಹಿತಿ ನೀಡಲಾಯಿತು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಮ್ಮ ಮಾತನಾಡಿ, ಹೊಸದಾಗಿ ತೆರೆದಿರುವ ಪಟ್ಟಣದ ಶಾಂತಿನಗರದ ನಮ್ಮ ಕ್ಲಿನಿಕ್ ನಿಂದ ಉಚಿತವಾಗಿ ಸಿಗುವಂತ ಸೌಲಭ್ಯ ತಿಳಿಸಿದರು. ಕ್ಯಾನ್ಸರ್ ಮುನ್ನಚ್ಚರಿಕೆ ಕ್ರಮ, ತುಂಬಾಕು ಸೇವನೆಯಿಂದ ಆಗುವಂತಹ ಸಮಸ್ಯೆಗಳ ಕುರಿತು ಸರ್ಕಾರಿ ಆಸ್ಪತ್ರೆಯಿಂದ ಜನರಿಗೆ ಉಚಿತವಾಗಿ ಲಭ್ಯವಿರುವ ಸೇವೆಗಳ ಬಗೆ ಮಾಹಿತಿ ನೀಡಿದರು.

ನಂತರ ಕರ್ನಾಟಕ ಗ್ರಾಮೀಣಾ ಬ್ಯಾಂಕ್ ಮ್ಯಾನೆಜರ್ ಅಕ್ಷಯ್ ಅರಸ್ ಮಾತನಾಡಿ, ಬ್ಯಾಂಕಿನಿಂದ ಸಿಗುವಂತಹ ಸ್ವಸಹಾಯ ಸಂಘಗಳಿಗೆ ಸಾಲದ ಬಗೆ, ಇನ್ಶೂರೆನ್ಸ್ ಬಗೆ ಮಾಹಿತಿ ನೀಡಿದರು. ಈ ವೇಳೆ ಒಡಿಪಿ ಸಂಸ್ಥೆ ಕಾರ್ಯಕರ್ತೆ ಜೆ.ಎ.ಉಮಾ, ತಾಲೂಕ್ ಒಕ್ಕೂಟದ ಪದಾಧಿಕಾರಿಗಳಾದ ವಿದ್ಯಾವತಿ, ಜಯಶ್ರಿ , ಸಾವಿತ್ರಿ ,ಕುಸುಮ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ

ಪಾಂಡವಪುರ:

ಕಳ್ಳರ ತಂಡವೊಂದು ತಾಲೂಕಿನ ಕೆನ್ನಾಳು ಹಾಗೂ ವಿಶ್ವೇಶ್ವರ ನಗರ ಸೇರಿದಂತೆ ಮೂರು ಕಡೆ ರಾತ್ರಿ ವೇಳೆ ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ತಕ್ಷಣವೇ ಮನೆಗಳಿಂದ ನಿವಾಸಿಗಳು ಹೊರ ಬಂದ ಹಿನ್ನೆಲೆಯಲ್ಲಿ ಯಾವುದೇ ದರೋಡೆ ನಡೆಸದೇ ಕಳ್ಳರ ಗ್ಯಾಂಗ್ ಪರಾರಿಯಾಗಿದೆ. ಇದರಿಂದ ಸ್ಥಳೀಯರು ಭೀತಿಗೊಳಗಾಗಿದ್ದಾರೆ.

ಕಳ್ಳರ ಗ್ಯಾಂಗ್ ದಾಳಿ ಕುರಿತು ಸ್ವತಃ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯೇ ಈ ಬಗ್ಗೆ ಪ್ರಕಟಣೆ ಹೊರಡಿಸಿ ಕೆ.ಆ‌ರ್.ಪೇಟೆ ಹಾಗೂ ಪಾಂಡವಪುರದಲ್ಲಿ ಕಳ್ಳರು ಕಾಣಿಸಿಕೊಂಡು ಮನೆ ದರೋಡೆಗೆ ಹೊಂಚು ಹಾಕಿದ್ದು ಪೊಲೀಸರು ಜಾಗೃತಿ ವಹಿಸುವಂತೆ ಸೂಚಿದೆ.

ನಿರ್ಜನ ಪ್ರದೇಶದಲ್ಲಿ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುವ ಕಳ್ಳರ ಗ್ಯಾಂಗ್ ರಾತ್ರಿ ಹಾಗೂ ಮುಂಜಾನೆ 3 ಹಾಗೂ 4 ಗಂಟೆಯ ಮನೆಗಳ ಮೇಲೆ ದಾಳಿ ನಡೆಸಿ ಮನೆ ಬಾಗಿಲನ್ನು ಒಡೆದು ಅಥವಾ ಮಾರಕಾಸ್ತ್ರಗಳಿಂದ ಕಿಟಕಿ ಸರಳುಗಳನ್ನು ಕತ್ತರಿಸಿ ಮನೆಗೆ ನುಗ್ಗಿ ದರೋಡೆ ಹಾಗೂ ಕಳ್ಳತನದಂತಹ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳ್ಳರ ತಂಡದ ಕೃತ್ಯದಿಂದ ಪಾಂಡವಪುರದ ಜನತೆ ಬೆಚ್ಚಿಬಿದ್ದಾರೆ.

Share this article