ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಅವರು ಬಸವಕಲ್ಯಾಣದಲ್ಲಿ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ನಡೆದಿದ್ದು ಬಸವಕಲ್ಯಾಣದಲ್ಲಿ. ಇಷ್ಟು ದೊಡ್ಡ ಕ್ರಾಂತಿ ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆದಿಲ್ಲ. ಮಾನವ ಕುಲದ ಕಲ್ಯಾಣಕ್ಕಾಗಿ ಮಹಿಳೆಯರ ಹಕ್ಕಿಗಾಗಿ ದೀನ ದಲಿತರ ಉದ್ಧಾರಕ್ಕಾಗಿ 12ನೇ ಶತಮಾನದಲ್ಲಿ ಅನುಭವ ಮಂಟಪ ಮುಖಾಂತರ ಬಸವಕಲ್ಯಾಣದಲ್ಲಿ ಬಹುದೊಡ್ಡ ಕ್ರಾಂತಿ ನಡೆಯಿತು ಈ ಕ್ರಾಂತಿಯಿಂದ ನಮ್ಮ ಕನ್ನಡ ನಾಡು ಬಹಳಷ್ಟು ಪ್ರೇರಣೆ ಪಡೆದಿದೆ ಎಂದರು.
ಬಸವಣ್ಣನವರ ಕಾಯಕ ದಾಸೋಹ ಸಿದ್ಧಾಂತ ಎಲ್ಲಾ ಮಠ ಮಾನ್ಯಗಳಲ್ಲಿ ಕಾಣಬಹುದು. ಹುಟ್ಟಿನಿಂದ ಯಾರೂ ಮೇಲಿಲ್ಲ. ಜಾತಿಯಿಂದಲೂ ಯಾರೂ ದೊಡ್ಡವರಲ್ಲ. ಸದ್ಗುಣ ಸದಾಚಾರ ಸದ್ವಿಚಾರದಿಂದ ಮನುಷ್ಯ ದೊಡ್ಡವನಾಗುತ್ತಾನೆ ಎಂದರು.ಬಸವಣ್ಣನವರ ನೇತೃತ್ವದಲ್ಲಿ ನಡೆದ ಕ್ರಾಂತಿ ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿ ನಡೆದಿದ್ದರೆ ಇಂದು ಈ ಧರ್ಮ ಜಗತ್ತಿನಾದ್ಯಂತ ವಿಶಾಲವಾಗಿ ಬೆಳೆಯುತ್ತಿತ್ತು, ಈಗಲಾದರೂ ಈ ತತ್ವ ಜಗತ್ತಿಗೆ ಮುಟ್ಟಿಸಬೇಕಾಗಿದೆ ಈ ದಿಸೆಯಲ್ಲಿ ಇಲ್ಲೊಂದು ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ. ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಷ್ಟೇ ಅಲ್ಲ ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಇಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಜಗತ್ತಿನ ಅಧ್ಯಾತ್ಮಿಕ ಸಂಸತ್ತು ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ತಿಳಿಸಿದರು.ವಚನ ವಿವಿ: ಪಟ್ಟದ್ದೇವರ ಹೋರಾಟಕ್ಕೆ ಬೆಂಬಲ
ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉತ್ಸವ ಸಮಿತಿಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಕಮ್ಮಟ ಮತ್ತು ಅನುಭವ ಮಂಟಪ ನಿರ್ಮಾಣ ನಡೆದು ಬಂದ ದಾರಿ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಸ್ಥಾವರಕ್ಕೆ ಅಳಿಯುಂಟು ಜಂಗಮಕ್ಕೆ ಅಳಿವಿಲ್ಲ ಹೀಗಾಗಿ ಇಲ್ಲಿಯ ನೂತನ ಅನುಭವ ಮಂಟಪದ ಬೃಹತ್ ಕಟ್ಟಡದ ಜೊತೆಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ ಈ ದಿಸೆಯಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾಡುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ವಚನ ಸಂಗೀತ ಶಿವಕುಮಾರ ಪಂಚಾಳ, ಬೀದರ್‌ನ ಉಷಾ ಪ್ರಭಾಕರ ನೇತೃತ್ವದ ನುಪೂರ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಪ್ರದರ್ಶನಗೊಂಡಿತು.ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ: ಪಟ್ಟದ್ದೇವರು
ರಾಜ್ಯದ ಬೇರೆ ಕಡೆ ಸಂಗೀತ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಸಾಂಸ್ಕೃತಿಕ ವಿಶ್ವವಿದ್ಯಾಲಯ ಸ್ಥಾಪಿಸಿದಂತೆ ಬಸವಕಲ್ಯಾಣ ದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಮುಖಾಂತರ ಬಸವಣ್ಣನವರ ತತ್ವಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡ ಬೇಕಾಗಿದೆ ಹೀಗಾಗಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ ಎಂದರು.2025ರ ವರ್ಷಾಂತ್ಯಕ್ಕೆ ಅನುಭವ ಮಂಟಪ ಲೋಕಾರ್ಪಣೆ
ಅವರು 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಕಮ್ಮಟ ನಡೆದು ಬಂದ ದಾರಿ, ಅನು ಭವ ಮಂಟಪ ನಿರ್ಮಾಣಕ್ಕಾಗಿ 1955ರಿಂದ ಪ್ರಯತ್ನ ಮಾಡಿದವರ ಹೆಸರುಗಳು, ಇತಿಹಾಸ ಸಹಿತವಾಗಿ ಎಳೆ ಎಳೆಯಾಗಿ ಸಭೀಕರಿಗೆ ತಿಳಿಸಿದರು.ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣವಾಗಬೇಕೆಂದು ಬಂತನಾಳ ಶಿವಯೋಗಿಗಳು ಹಾಗೂ ಧಾರವಾಡ ಮುರುಘಾ ಮಠದ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಬಿ.ಡಿ ಜತ್ತಿ, ಬಾಬಾ ಸಾಹೇಬ ವಾರದ ಅವರ ಕನಸ್ಸಾಗಿತ್ತು. ಇದನ್ನು ಪೂರ್ತಿಗೊಳಿಸಿದವರು ಲಿಂ.ಡಾ.ಚೆನ್ನಬಸವ ಪಟ್ಟದೇವರು. ಇವರು ಹುಟ್ಟು ಹಾಕಿದ ಶರಣ ಕಮ್ಮಟ ಕಾರ್ಯಕ್ಕೆ ನಾನು, ಸ್ಥಳೀಯರಾದ ಕಾಮಶೆಟ್ಟಿ, ತಂಬಾಕೆ, ಗುರುನಾಥ ಗಡ್ಡೆ, ಡಾ.ಎಸ್.ಬಿ.ದುರ್ಗೆ ಮುಂತಾದವರು ಸೇರಿ ಸತತ 14 ವರ್ಷ ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡು ಬಸವಕಲ್ಯಾಣದ ಅಭಿವೃದ್ಧಿಗೆ ಹತ್ತಾರು ಸಲ ಮನವಿ ಪತ್ರಗಳನ್ನು ನೀಡಲಾಯಿತು ಎಂದು ವಿವರಿಸಿದರು.ಜನಾರ್ಧನ ಪೂಜಾರಿಯವರಿಗೆ ಶರಣ ಕಮ್ಮಟಕ್ಕೆ ಕರೆಯಿಸದಾಗ ಅವರು ಇಲ್ಲಿಯ ಬಸವ ತತ್ವಕ್ಕೆ ಪ್ರಭಾವಿತರಾಗಿ ಇಂತಹ ತತ್ವವು ಜಗತ್ತಿಗೆ ತುಂಬಾ ಬೆಳಗಬೇಕು ಬಸವ ಕಲ್ಯಾಣ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಬೇಕು ಎಂಬ ನಮ್ಮ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮುಖಾಂತರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ಇದರಿಂದ ಬಸವಕಲ್ಯಾಣ ಅಭಿವೃದ್ಧಿ ನಡೆಯಿತು. ನಂತರ ಬಂದ ಎಲ್ಲಾ ಮುಖ್ಯಮಂತ್ರಿಗಳು ಇದಕ್ಕೆ ಸ್ಪಂದಿಸಿದರು ನಾನು ಸಚಿವನಾಗಿದ್ದಾಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದು, ನೂತನ ಅನುಭವ ಮಂಟಪದ ನೀಲನಕ್ಷೆ ತಯಾರಿಸಲು ಗೋ.ರು.ಚ ನೇತೃತ್ವದಲ್ಲಿ ಸಮಿತಿ ರಚಿಸಿ ಅದರ ವರದಿಯನ್ನು ಪಡೆಯಲಾಗಿತ್ತು. ಇದನ್ನು ಕಾರ್ಯರೂಪಕ್ಕೆ ತರಲು ಯಡಿಯೂರಪ್ಪನವರು, ಬೊಮ್ಮಾಯಿಯವರು ಎಲ್ಲರೂ ಸಹಕರಿಸಿದರು ಎಂದರು.ಹೀಗಾಗಿ ಇದೊಂದು ಧಾರ್ಮಿಕ, ಐತಿಹಾಸಿಕ ಪ್ರವಾಸಿ ತಾಣ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಡಾ.ಬಸವಲಿಂಗ ಪಟ್ಟದ್ದೇವರ ಆಶಯದಂತೆ ಇಲ್ಲೊಂದು ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸಲಾಗುವುದು. ಈಗಾಗಲೇ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದೆ. ಇದರಂತೆ ಮುಂಬರುವ ದಿನಗಳಲ್ಲಿ ಬಸವ ತತ್ವವನ್ನು ವಿಶ್ವಕ್ಕೆ ಮುಟ್ಟಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.ವೇದಿಕೆಯ ಮೇಲೆ ರಾಜ್ಯಪಾಲ ಸಿ.ಎಚ್.ವಿಜಯಶಂಕರ, ಶಾಸಕ ಶರಣು ಸಲಗರ ಉಪಸ್ಥಿತರಿದ್ದರು.ನಾಲ್ವರಿಗೆ ಪ್ರಶಸ್ತಿ ಪ್ರದಾನ; ರಾಜ್ಯದ ನಾಲ್ಕು ದಿಕ್ಕಿನ ಸಾಧಕರನ್ನು ಗುರುತಿಸಿ ಗೌರವ