ಕನ್ನಡಪ್ರಭ ವಾರ್ತೆ ನವದೆಹಲಿ:
ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಡದಿ ಟೌನ್‌ಶಿಪ್ ವಿಚಾರವಾಗಿ ಡಿಕೆಶಿ-ಎಚ್‌ಡಿಕೆ ಪಂಥಾಹ್ವಾನ ಕುರಿತು ಪ್ರತಿಕ್ರಿಯಿಸಿ, ಡಿಕೆಶಿಯವರು ಪಂಥಾಹ್ವಾನಕ್ಕೆ ಬರುವುದಾಗಿ ಈ ಹಿಂದೆಯೂ ಹೇಳಿದ್ದರು. ಆದರೆ, ಬಂದಿರಲಿಲ್ಲ. ಈಗ ಮತ್ತೆ ಪಂಥಾಹ್ವಾನ ನೀಡಿದ್ದಾರೆ. ಆದರೆ, ಬಿಡದಿ ಟೌನ್‌ಶಿಪ್ ವಿಚಾರ ರೈತರ ನಡುವೆಯೇ ಚರ್ಚೆಯಾಗಬೇಕು. ಇದು ರೈತರ ಸಮಸ್ಯೆಯಾಗಿದ್ದು, ರೈತರ ಜೊತೆ ಚರ್ಚೆಯಾದರೆ ಅದು ನಿಜವಾದ ಚರ್ಚೆಯಾಗುತ್ತದೆ. ರೈತರ ಜಮೀನಿನ ಬಗ್ಗೆ ಚರ್ಚೆ ಮಾಡಲು ಎಚ್.ಡಿ.ಕುಮಾರಸ್ವಾಮಿಯವರು ಸಿಎಂ ಕಚೇರಿಗೆ ಯಾಕೆ ಹೋಗಬೇಕು. ರೈತರ ಸಮ್ಮುಖದಲ್ಲಿಯೇ ಚರ್ಚೆಯಾಗಲಿ ಎಂದು ಹೇಳಿದರು.
ಇದೇ ವೇಳೆ, ಡಿಕೆಶಿ ವಿರುದ್ಧ ಹರಿಹಾಯ್ದ ಅಶೋಕ್, ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ನಾಲ್ಕೈದು ಸಾವಿರ ಕೋಟಿ ರೂ.ಗಳನ್ನು ಹೊಡೆಯುತ್ತಿದ್ದಾರೆ. ಈ ಹಣ ಯಾರ ಜೇಬಿಗೆ ಹೋಗುತ್ತದೆ. ಭ್ರಷ್ಟಾಚಾರ ಮಾಡಲೆಂದೇ ಕಾಂಗ್ರೆಸ್ ಹೈಕಮಾಂಡ್, ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯದ ಸಿಎಂ ಆಗಿ ನೇಮಿಸಿದೆ. ಡಿಕೆಶಿಯಿಂದ ಕಾಂಗ್ರೆಸ್ ಹೈಕಮಾಂಡ್ ಹಣ ಪಡೆಯುತ್ತದೆ ಎಂದು ಆರೋಪಿಸಿದರು.ರೈತರ ಒಕ್ಕೆಲೆಬ್ಬಿಸುವ ಕೆಲಸ- ವಿಜಯೇಂದ್ರ: