ಬೀದಿಬದಿ ವ್ಯಾಪಾರಿಗಳ ಕಾಯ್ದೆ ರಾಜ್ಯಾದ್ಯಂತ ಜಾರಿಗೆ ಸಿಎಂ ಜತೆ ಚರ್ಚೆ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Nov 06, 2026, 02:30 AM IST
5ಜಿಡಿಜಿ8 | Kannada Prabha

ಸಾರಾಂಶ

ಗದಗ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಬೀದಿಬದಿ ವ್ಯಾಪಾರಿಗಳ 2014ರ ಕಲ್ಯಾಣ ಕಾಯ್ದೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಗದಗ

ಗದಗ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಬೀದಿಬದಿ ವ್ಯಾಪಾರಿಗಳ 2014ರ ಕಲ್ಯಾಣ ಕಾಯ್ದೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಈಚೆಗೆ ಗದಗ ನಗರದ ಡಿ.ಕೆ.ಎಚ್. ಪಾಟೀಲ ವೃತ್ತದ ಬಳಿ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಹಾಗೂ ರಾಜ್ಯ ರಸ್ತೆಬದಿ ವ್ಯಾಪಾರಿಗಳ ಮಹಾಮಂಡಳದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಸಂಭ್ರಮ 53, ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಸಮುದಾಯ ಭವನದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬೀದಿಬದಿ ವ್ಯಾಪಾರಿಗಳ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹1 ಕೋಟಿ ಅನುದಾನ ನೀಡುವುದಾಗಿ ಹಾಗೂ ವಕಾರ ಸಾಲಿನ 32 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಬೀದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೌಲಾನಾ ಇನಾಯತುಲ್ಲಾ ಪೀರಜಾದೆ ನೇತೃತ್ವ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಮುಖಂಡರಾದ ಧರ್ಮೇಂದ್ರಕುಮಾರ, ಭಾಸ್ಕರ ಅರಸು, ಅಕ್ಬರಸಾಬ ಬಬರ್ಚಿ, ಡಾ. ರವಿ ಎಲ್. ಗುಂಜೀಕರ, ಪ್ರೇಮಾ, ಅನ್ವರ ಶಿರಹಟ್ಟಿ, ವಾಸಣ್ಣ ಕುರುಡಗಿ, ಕೃಷ್ಣಾಗೌಡ ಪಾಟೀಲ, ಸಿದ್ದಲಿಂಗೇಶ್ವರ ಪಾಟೀಲ, ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ, ಸಯ್ಯದ್‌ಖಾಲಿದ್ ಕೊಪ್ಪಳ, ಮಾರುತಿ ರಾ. ಸೋಳಂಕಿ, ತಬರೇಜ ಪಠಾಣ, ರಶೀದಾ ಬಾ. ನದಾಫ, ರಜಿಯಾ ಹತ್ತಿವಾಲೆ, ಫಾತಿಮಾ ಧಾರವಾಡ, ರಮೇಶ ಮುಳುಗುಂದ, ರಾಜೇಖಾನ ಪಠಾಣ ಉಪಸ್ಥಿತರಿದ್ದರು.

ತಾಲೂಕು ಘಟಕಗಳ ಅಧ್ಯಕ್ಷರಾದ ಬಸವರಾಜ ತಾವರೆ (ನರಗುಂದ), ಭೀಮಣ್ಣ ಕೊಳ್ಳಿ (ಮುಳುಗುಂದ), ಮಂಜು ಹೊಗೆಸೊಪ್ಪಿನ (ಲಕ್ಷ್ಮೇಶ್ವರ), ಜಹಾಂಗೀರ ಅಹ್ಮದ್ (ಮುಳುಗುಂದ), ಶಬ್ಬೀರ ನಗಾರಿ (ಶಿರಹಟ್ಟಿ), ಹನುಮಂತಪ್ಪ (ರೋಣ), ಮಹಮ್ಮದ್ (ಗಜೇಂದ್ರಗಡ), ಶಿವಾನಂದ (ನರೇಗಲ್), ರಫೀಕ್ (ಮುಂಡರಗಿ) ಭಾಗವಹಿಸಿದ್ದರು. ಕೃಷ್ಣಪ್ರಿಯಾ ಪ್ರಾರ್ಥಿಸಿದರು. ಚಂದ್ರಕಾಂತ ಚವ್ಹಾಣ ಸ್ವಾಗತಿಸಿ, ಉಪನ್ಯಾಸಕ ಬಾಹುಬಲಿ ಜೈನರ ನಿರೂಪಿಸಿದರು.ಬೀದಿಬದಿ ವ್ಯಾಪಾರಿಗಳಲ್ಲಿ ಆರ್ಥಿಕ ಸ್ವಾಭಿಮಾನ ಬೆಳೆಸಲು ರೂಪಿಸಲಾದ ಕಲ್ಯಾಣ ಕಾನೂನುಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಗದಗ ಮಾದರಿಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ.

ಎಚ್.ಕೆ. ಪಾಟೀಲ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯ: ನೀರಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಮಹಿಳೆ
ಬ್ರಹ್ಮಾವರ: ಬಾಳೆಕುದ್ರು ಮಠದ ಶ್ರೀಗಳು ನಾಪತ್ತೆ !