ಆಯುರ್ವೇದ, ಹೋಮಿಯೋಪತಿ, ಯೋಗ ಚಿಕಿತ್ಸೆಯಲ್ಲಿ ರೋಗ ಬರದಂತೆ ತಡೆಗಟ್ಟುವ ಮಾರ್ಗೋಪಾಯಗಳಿವೆ. ಜೀವನ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವ ಅಂಶಗಳು ಮತ್ತು ಅವುಗಳಿಂದಲೇ ಆರೋಗ್ಯ ಕಾಪಾಡಿಕೊಳ್ಳುವ ಯೋಜನೆಗಳಿವೆ ಎಂದು ಜೋಕಟ್ಟೆ ತೋಕೂರು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಅಜಿತ್ ನಾಥ್ ಇಂದ್ರ ಹೇಳಿದರು.
ಮಂಗಳೂರು : ಆಯುರ್ವೇದ, ಹೋಮಿಯೋಪತಿ, ಯೋಗ ಚಿಕಿತ್ಸೆಯಲ್ಲಿ ರೋಗ ಬರದಂತೆ ತಡೆಗಟ್ಟುವ ಮಾರ್ಗೋಪಾಯಗಳಿವೆ. ಜೀವನ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವ ಅಂಶಗಳು ಮತ್ತು ಅವುಗಳಿಂದಲೇ ಆರೋಗ್ಯ ಕಾಪಾಡಿಕೊಳ್ಳುವ ಯೋಜನೆಗಳಿವೆ ಎಂದು ಜೋಕಟ್ಟೆ ತೋಕೂರು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಅಜಿತ್ ನಾಥ್ ಇಂದ್ರ ಹೇಳಿದರು.
ಅವರು ಶುಕ್ರವಾರ ದ.ಕ. ಜಿಲ್ಲಾ ಪಂಚಾಯಿತಿ ಆಯುಷ್ ಇಲಾಖೆಯ ರಾಷ್ಟ್ರೀಯ ಆಯುಷ್ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಬೋಧಶ್ರೀ ಸಭಾಭವನದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆಯುಷ್ ಇಲಾಖೆ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ಅವಶ್ಯ. ಜೀವನದುದ್ದಕ್ಕೂ ಅಳವಡಿಸಬಹುದಾಗಿದೆ ಎಂದರು.ಹಿರಿಯ ವೈದ್ಯಾಧಿಕಾರಿ ಡಾ.ಪ್ರಕಾಶ್, ಆಯುಷ್ಮಾನ್ ಭಾರತ ಡಿಜಿಟಲ್ ಮೆಷಿನಿನ ಜಿಲ್ಲಾ ಕೋಆರ್ಡಿನೇಟರ್ ಡಾ.ನೌಶತ್ ಬಾನು ಮಾಹಿತಿ ನೀಡಿದರು.
ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ, ಕೆಐಒಸಿಎಲ್ ನಿವೃತ್ತ ಜನರಲ್ ಮೆನೇಜರ್ ಶ್ಯಾಮಸುಂದರ ಭೀಮಗುಳಿ, ನಿವೃತ್ತ ಮುಖ್ಯಗುರು ಭಾಸ್ಕರ ಹೊಸಮನೆ, ಕೃಷ್ಣ ಭಟ್ ನಿಡುಗಳ ಇದ್ದರು.ಪ್ರಾಂಶುಪಾಲ ಸಂದೀಪ್ ಆಚಾರ್ಯ ಸ್ವಾಗತಿಸಿದರು. ಹಿರಿಯ ವೈದ್ಯಾಧಿಕಾರಿ ಡಾ.ಹೇಮವಾಣಿ ಪ್ರಸ್ತಾಪಿಸಿದರು.ನ ಶಲ್ಯತಂತ್ರತಜ್ಞೆ ಡಾ.ಶ್ರೀವರ್ಷ ವಂದಿಸಿದರು. ವಿದ್ಯಾರ್ಥಿನಿ ಡಿಂಪಲ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.