ವನ್ನಳ್ಳಿಯಲ್ಲಿ ಯುವ ಬ್ರಿಗೇಡ್ ತಂಡದವರಿಂದ ದೇವರ ಫೋಟೊಗಳ ವಿಲೇವಾರಿ

KannadaprabhaNewsNetwork |  
Published : Oct 21, 2024, 12:35 AM IST
ಫೋಟೋ : ೨೦ಕೆಎಂಟಿ_ಒಸಿಟಿ_ಕೆಪಿ೧ : ವನ್ನಳ್ಳಿಯಲ್ಲಿ ಆಲದ ಮರದ ಬುಡದಲ್ಲಿ ರಾಶಿ ಹಾಕಿದ್ದ ದೇವರ ಪಟಗಳನ್ನು ಯುವಾ ಬ್ರಿಗೇಡ್‌ನವರು ಸುರಕ್ಷಿತವಾಗಿ ವಿಸರ್ಜಿಸಿದರು.  | Kannada Prabha

ಸಾರಾಂಶ

ದೇವರೆಂದು ಪೂಜಿಸಿದ ಪಟಗಳನ್ನು ಕಂಡ ಕಂಡಲ್ಲಿ ಬೀಸಾಡಬಾರದು ಎಂಬ ಹಿನ್ನೆಲೆ ಯುವ ಬ್ರಿಗೇಡ್ ತಂಡದವರು ಕಣ ಕಣದಲ್ಲೂ ಶಿವ ಎಂಬ ಪರಿಕಲ್ಪನೆಯಲ್ಲಿ ಪಟಗಳನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡುತ್ತಾ ಬಂದಿದ್ದಾರೆ.

ಕುಮಟಾ: ಇಲ್ಲಿನ ಯುವ ಬ್ರಿಗೇಡ್ ತಂಡದವರು ಕಣ ಕಣದಲ್ಲೂ ಶಿವ ಎಂಬ ಪರಿಕಲ್ಪನೆಯಲ್ಲಿ ಸಾರ್ವಜನಿಕ ಸ್ಥಳಗಳಿಂದ ದೇವರ ಮತ್ತು ಪೂಜಿತ ಹಳೆಯ ಪಟ(ಫೋಟೋ)ಗಳನ್ನು ಸಂಗ್ರಹಿಸಿ ಸುರಕ್ಷಿತವಾಗಿ ಬೇರ್ಪಡಿಸಿ ವಿಲೇವಾರಿ ಮಾಡುವ ಕಾರ್ಯವನ್ನು ಭಾನುವಾರ ವನ್ನಳ್ಳಿಯಲ್ಲಿ ಹಮ್ಮಿಕೊಂಡಿದ್ದರು.ವನ್ನಳ್ಳಿಯಲ್ಲಿ ಸರ್ಕಾರಿ ಶಾಲೆಯ ಸನಿಹದ ಆಲದ ಮರದ ಸುತ್ತಲೂ ಇಟ್ಟು ಹೋಗಿದ್ದ ದೇವರ ಮತ್ತು ಪೂಜಿತ ಹಳೆಯ ಪಟಗಳನ್ನೆಲ್ಲ ಸಂಗ್ರಹಿಸಿದ್ದು, ಸುಮಾರು ೨೫೦ಕ್ಕೂ ಹೆಚ್ಚು ಪಟಗಳು ಸಿಕ್ಕಿದ್ದವು. ಅವುಗಳನ್ನು ಸನಿಹದ ಸಮುದ್ರ ತಟಕ್ಕೆ ಒಯ್ದು ಪಟಗಳಿಂದ ಗಾಜು, ಕಟ್ಟಿಗೆ, ಮೊಳೆ, ಚೌಕಟ್ಟು ಇವನ್ನೆಲ್ಲ ಬೇರ್ಪಡಿಸಿ ದೇವರ ಪಟವನ್ನು ಪ್ರತ್ಯೇಕಿಸಿ ವಿಧ್ಯುಕ್ತವಾಗಿ ವಿಸರ್ಜಿಸಲಾಯಿತು. ಸಾರ್ವಜನಿಕರು ಇಂಥ ಹಳೆಯ ಪಟಗಳನ್ನು ಆಲ, ಅಶ್ವತ್ಥ ಮುಂತಾದ ಮರಗಳ ಕಟ್ಟೆಗಳ ಬುಡದಲ್ಲಿ ರಾಶಿ ಹಾಕುವುದರಿಂದ ಕಾಲಕ್ರಮೇಣದಲ್ಲಿ ಇವು ಮಾನವನಿಗೂ, ಪರಿಸರಕ್ಕೂ ಅಪಾಯಕಾರಿಯಾಗಿರುತ್ತದೆ. ದೇವರೆಂದು ಪೂಜಿಸಿದ ಪಟಗಳನ್ನು ಕಂಡ ಕಂಡಲ್ಲಿ ಬೀಸಾಡಬಾರದು ಎಂಬ ಹಿನ್ನೆಲೆ ಯುವ ಬ್ರಿಗೇಡ್ ತಂಡದವರು ಕಣ ಕಣದಲ್ಲೂ ಶಿವ ಎಂಬ ಪರಿಕಲ್ಪನೆಯಲ್ಲಿ ಪಟಗಳನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡುತ್ತಾ ಬಂದಿದ್ದಾರೆ. ಮುಂದಿನ ಭಾನುವಾರವು ಇನ್ನೊಂದಿಷ್ಟು ಪಟವನ್ನು ಸಂಗ್ರಹಿಸಿ ಅದರ ಜತೆ ಇಂದು ಸಂಗ್ರಹಿಸಿದ ದೇವರ ಪಟವನ್ನು ಮಣ್ಣಿನಲ್ಲಿ ವಿಸರ್ಜಿಸಿ ಅದರ ಮೇಲೆ ಒಂದು ಉತ್ತಮ ಗಿಡಗಳನ್ನು ನೆಡುವ ಕಾರ್ಯ ಮಾಡಲಿದ್ದೇವೆ. ಆಸಕ್ತರು ನಮ್ಮ ಕಾರ್ಯದಲ್ಲಿ ಕೈಜೋಡಿಸಬಹುದು.

ಈ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡೋಣ. ನಿಮ್ಮ ದೇವರ ಪಟವನ್ನು ಹಾಳಾದ ನಂತರ ಬಿಸಾಡಬೇಡಿ. ಅದನ್ನು ನೀವೇ ಸರಿಯಾಗಿ ವಿಲೇವಾರಿ ಮಾಡಿ. ಕಣ ಕಣದಲ್ಲೂ ಶಿವ ಕಾರ್ಯ ಮಾಡುವುದರ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಯುವ ಬ್ರಿಗೇಡ್ ವಿಭಾಗ ಸಂಚಾಲಕ ಸತೀಶ ಪಟಗಾರ ವಿವರಿಸಿದರು. ಈ ವೇಳೆ ಯುವ ಬ್ರಿಗೇಡ್ ತಂಡದಿಂದ ಚಿದಂಬರ ಅಂಬಿಗ, ಗೌರೀಶ ನಾಯ್ಕ, ವಿನಾಯಕ ಗುನಗಾ, ರವೀಶ ನಾಯ್ಕ, ಮದನ್ ಗುನಗಾ, ಅಣ್ಣಪ್ಪ ನಾಯ್ಕ, ನಿಹಾಲ್, ಪ್ರಧ್ವೀಕ್ ಇತರರು ಇದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ