ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಕೆ.ಎಚ್. ಸೋನವಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಪುರಸಭೆ ಕಾರ್ಯಾಲಯ ಮೂಡಲಗಿ, ನೇತಾಜಿ ರೂರಲ್ ಡೆವೆಲಪ್‌ಮೆಂಟ್ ಸೊಸೈಟಿ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಏರ್ಪಡಿಸಿದ್ದ ಸ್ವಚ್ಛ ಭಾರತ ಮಿಷನ್‌ದ ಐಇಸಿ ಕಾರ್ಯಕ್ರಮ ಅಡಿಯಲ್ಲಿ ಚಿತ್ರಕಲಾ, ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಘನತ್ಯಾಜ್ಯ ವಿಲೇವಾರಿ ಬಗ್ಗೆ ಅರಿತು ಜನರಲ್ಲಿ ಜಾಗೃತಿ ಮೂಡಿಸ ಬೇಕು ಎಂದರು.
ನೇತಾಜಿ ಸೊಸೈಟಿಯ ಅಧ್ಯಕ್ಷ ಈರಣ್ಣ ಕೊಣ್ಣೂರ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣದಿಂದ ಘನತ್ಯಾಜ್ಯದ ಸಮಸ್ಯೆಯು ಅಧಿಕವಾಗುತ್ತಲಿದೆ. ಇದನ್ನು ನಿರ್ವಹಣೆ ಮಾಡದೆ ಇದ್ದರೆ ಜೀವ ಸಂಕುಲ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಜಾಗೃರಾಗಬೇಕು ಎಂದರು.ಪುರಸಭೆ ಆರೋಗ್ಯ ಸಹಾಯಕ ನಿರೀಕ್ಷಕ ಪ್ರೀತಮ ಬೋವಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಪುರಸಭೆ ಸದಸ್ಯರಾದ ಅಬ್ದುಲ್‌ಗಫಾರ ಡಾಂಗೆ, ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ, ಮೂಡಲಗಿ ಶಿಕ್ಷಣ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಲಯನ್ಸ್‌ಕ್ಲಬ್ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ, ಕಾರ್ಯದರ್ಶಿ ಸುಪ್ರೀತ ಸೋನವಾಲಕರ, ಸಂದೀಪ ಸೋನವಾಲಕರ, ಚಂದ್ರಕಾಂತ ಪಾಟೀಲ, ಪ್ರಸನ್ನಕರ್ಪೂರ, ಬಾಲಶೇಖರ ಬಂದಿ, ಮುಖ್ಯ ಶಿಕ್ಷಕ ಎಂ.ಎಂ. ವಾಟಕರ ಇದ್ದರು.
ಶಿಕ್ಷಕರಾದ ಅಪ್ಪಾಸಾಹೇಬ ಕುರುಬರ ಪ್ರಾರ್ಥಿಸಿದರು, ಶಿವಬಸು ಶೆಟ್ಟರ ಸ್ವಾಗತಿಸಿದರು, ಬಿ.ಐ. ಬಡಿಗೇರ ನಿರೂಪಿಸಿದರು, ಪಿ.ಜಿ. ಪಾಟೀಲ ವಂದಿಸಿದರು.