ಕನ್ನಡಪ್ರಭ ವಾರ್ತೆ ತಾಂಬಾ
ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಶಾಸಕರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಸಾಧ್ಯವಿದ್ದಷ್ಟು ದೂರುಗಳಿಗೆ ಸ್ಥಳದಲ್ಲೇ ಆಡಳಿತಾತ್ಮಕವಾಗಿ ತ್ವರಿತ ಪರಿಹಾರ ಒದಗಿಸಿಕೊಟ್ಟರು.ಸೌಲಭ್ಯಗಳ ವಿತರಣೆ: ಇದೇ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ವೇತನ ಯೋಜನೆ ಹಾಗೂ ವಿಧವಾ ವೇತನ ಸೇರಿದಂತೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ವಿತರಿಸಲಾಯಿತು. ಅಲ್ಲದೆ, ಪ್ರಧಾನ ಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಬ್ಯಾಂಕ್ ಪಾಸ್ ಬುಕ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 128 ಜನ ಫಲಾನುಭವಿಗಳಿಗೆ ಪಿಂಚಣಿ ಆದೇಶವನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಇಂಡಿ ತಹಸೀಲದಾರ್ ನಾಗೇಂದ್ರ ಕೊಳಶೆಟ್ಟಿ, ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ, ಮಲ್ಲಯ್ಯ ಸಾರಂಗಮಠ, ಪ್ರಮುಖರಾದ ರವಿ ಚವ್ಹಾಣ, ಅಪ್ಪು ಕಲ್ಲೂರ, ರಾಚಪ್ಪ ಗಳೆದ, ಚಂದ್ರಶೇಖರ ರೂಗಿ, ರಾಯಗೊಂಡ ನಾಟಿಕಾರ, ಮಹಮ್ಮದ ವಾಲಿಕಾರ, ಪರಶು ಬಿಸನಾಳ, ಮಹಮ್ಮದ ಧಡೇದ, ಫಾರೂಕ್ ಮುಲ್ಲಾ, ಮುನ್ನಾ ನಾಗಠಾಣ, ಉಪಸ್ಥಿತರಿದ್ದರು.ಅಲ್ಲದೆ, ಉಪ ತಹಶೀಲ್ದಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರಾವೂರ, ಎಸ್.ಎಚ್.ಮುಜಗೊಂಡ, ಬಳ್ಳೊಳ್ಳಿ ಕಂದಾಯ ನಿರೀಕ್ಷಕ ಪಿ.ಎಸ್.ಕೊಡಹೊನ್ನ, ಸಂತೋಷ್ ಹೊಟಗಾರ ಹಾಗೂ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಂಚಾಯಿತಿ ಇಲಾಖೆ, ಅಬಕಾರಿ ಇಲಾಖೆ, ಪಶುಸಂಗೋಪನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ನೀರಾವರಿ ಇಲಾಖೆ (ಕೆಬಿಜೆಎನ್ಎಲ್) ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.