ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಸದನ ಗಳಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತಿತ್ತು. ಈ ವೇಳೆ ರಾಜ್ಯಪಾಲರು ನಿಲ್ಲದೆ ಹೊರಟು ಹೋದರು. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿಯವರು ಯಾವುದೇ ರಾಜ್ಯಗಳೊಂದಿಗೆ ಚರ್ಚಿಸಲಿಲ್ಲ. ಎನ್ ಡಿ ಎ ಭಾಗವಾಗಿರುವ ರಾಜ್ಯಗಳೊಂದಿಗೂ ಚರ್ಚೆ ಮಾಡಿಲ್ಲ. ಹೀಗಾಗಿಯೇ ಚಂದ್ರಬಾಬು ನಾಯ್ಡು ಅವರು ಕೂಡ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ತಮ್ಮ ಡಿಕ್ಟೇಟರ್ ಶಿಪ್ ಮುಂದುವರಿಸಿದ್ದಾರೆ.
2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಕಾಯ್ದೆ ಜಾರಿಗೆ ತರುವಾಗ ಎಲ್ಲಾ ರಾಜ್ಯಗಳೊಂದಿಗೆ ಚರ್ಚಿಸಿದ್ದರು. 6 ತಿಂಗಳ ಕಾರ ವಿಸ್ತೃತ ಚರ್ಚೆ ಬಳಿಕ ಕಾಯ್ದೆ ಜಾರಿಗೆ ತಂದರು. ಆದರೆ ಪ್ರಧಾನಿ ಮೋದಿ ಅವರು ಹಾಗೆ ಮಾಡುತ್ತಿಲ್ಲ.ರಾಜ್ಯಗಳು 40 ರಷ್ಟು ಅನುದಾನ ಕೊಡಬೇಕಾದರೆ ಚರ್ಚಿಸಬೇಕಾಗಿತ್ತು. ಇಂತಹ ವಿಷಯಗಳನ್ನು ರಾಜ್ಯಪಾಲರ ಭಾಷಣದಲ್ಲಿ ಬರೆಯಲಾಗಿತ್ತು. ಆದರೆ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ನಡೆದುಕೊಂಡರು.
ಟ್ರಕ್ ಸಹಿತ ಹೈಜಾಕ್ ಆಗಿರುವ 400 ಕೋಟಿ ಕಾಂಗ್ರೆಸಿನದು ಎಂದು ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ನಮ್ಮನ್ನು ರಾಜ್ಯ ಸರ್ಕಾರ ಕಣ್ಣೀರು ಹಾಕಿಸಿದೆ. ಮುಂದೆ ನಮಗೂ ಒಳ್ಳೆಯ ಕಾಲ ಬರುತ್ತದೆ. ಆಗ ನಾವು ಹೀಗೆ ಮಾಡುತ್ತೇವೆಂದು ಎಚ್ ಡಿಕೆ, ಎಚ್ ಡಿ ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಖಂಡಿತ ಅವರ ಕಾಲ ಎಂದಿಗೂ ಬರಲು ಸಾಧ್ಯವಿಲ್ಲ. ಜೆಡಿಎಸ್ ನವರದು ಸರ್ವೈವಲ್ ಕಾಲ. ಹೀಗಾಗಿ ಹಿರಿಯರಾದ ಶ್ರೀಮಾನ್ ದೇವೇಗೌಡರು
2028 ಕ್ಕೆ ನೂರಕ್ಕೆ ನೂರು ನಮ್ಮ ಸರ್ಕಾರ ಬರುತ್ತೆ. ಈಗ 140 ಇದ್ದೇವೆ ಮುಂದಿನ ಚುನಾವಣೆಯಲ್ಲಿ 148 ಪಡೆಯಲಿದ್ದೇವೆ. ಇದು ನಮ್ಮ ಸಮೀಕ್ಷೆ ಎಂದರು.