ಕನ್ನಡಪ್ರಭ ವಾರ್ತೆ ರಾಯಚೂರು
ನಗರದ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ನರಸಿಂಹಲು ನಂದಿನಿ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಲಿಂಗೈಕ್ಯ ಸಾತ್ವಿರಮ್ಮ ಗುರುಲಿಂಗಪ್ಪ ಸಾವಳಗಿ ದತ್ತಿ ಮತ್ತು ಚೆನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ತತ್ವಪದಕಾರರ ಕುರಿತು ಮೂರನೇ ಮಾಸಿಕ ಉಪನ್ಯಾಸ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲುಷಿತ ವಾತಾವರಣದಲ್ಲಿ ಹಾಗೂ ವಿಷಮ ಪರಿಸ್ಥಿತಿಯಲ್ಲಿ ಕನ್ನಡತನ ಮತ್ತು ನಮ್ಮತನವನ್ನು ಉಳಿಸಿಕೊಳ್ಳಲು, ನಾವು ನಂಬಿರುವಂತಹ ತತ್ವಗಳು ಮೌಲ್ಯಯುತವಾದ ಚಿಂತನೆ ಮಾಡಬೇಕು.ವಿಶೇಷವಾಗಿ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದವರು ಶಿಕ್ಷಣ ಮಾಧ್ಯಮದಲ್ಲಿ ಹೊಸ ಹೊಸ ವಿಚಾರಗಳನ್ನು ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳಿಗೆ ತಿಳಿ ಪಡಿಸುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಬೇಕು. ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳ ಪಾಲಿನ ದೈವವಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ನವೋದಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಧರ್ಮಾವತಿ ಎಸ್.ನಾಯಕ ಮಾತನಾಡಿ, ಅರಿವಿನ ಮೌಲ್ಯವನ್ನು ಮನಮುಟ್ಟುವಂತೆ ತಿಳಿಯ ಪಡಿಸುವುದೇ ತತ್ವಪದ. ಸಂತ ಶಿಶುನಾಳ ಶರೀಫ ಕಡಕೋಳ ಮಡಿವಾಳಪ್ಪ ಹಾಗೆ ರಮಾನಂದ ಶರಣರು ತಮ್ಮ ತತ್ವಪದಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಓರೆಕೋರೆಗಳನ್ನು ತಿದ್ದುವಂತಹ ಕೆಲಸವನ್ನು ತತ್ವಪದಗಳ ಮೂಲಕ ಅರಿವಿನ ಜ್ಞಾನದ ಮೂಲಕ ಉಣಬಡಿಸಿದವರು ಎಂದು ಹೇಳಿದರು.
ದಿನ್ನಿಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಎಂ.ಗಿರಿಯಪ್ಪ ಮತ್ತು ಮಲಿಯಾಬಾದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪುಷ್ಪ್ಪಲತಾ ಅವರಿಗೆ ಚೆನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.