ನಗರದಲ್ಲಿ ಭಿಕ್ಷುಕರು, ನಿರ್ಗತಿಕರು, ಪ್ರಯಾಣಿಕರು, ಕೆಲವು ಅನಾಥರು ಊಟಕ್ಕಾಗಿ ಪರದಾಡುತ್ತಾ ಎಲ್ಲೆಂದರಲ್ಲಿ ಸಂಚರಿಸುತ್ತಿರುತ್ತಾರೆ, ಇದರಿಂದ ಆಹಾರ ಬ್ಯಾಂಕ್ ಪ್ರಾರಂಭಿಸಿದ್ದು ಯಶಸ್ವಿಯಾಗಿ ನಮ್ಮ ಸೇವೆ ನಡೆಯುತ್ತಿದೆ, ಯಾವುದೇ ಕಾರಣಕ್ಕೂ ಯಾರೂ ಹಸಿಯಬಾರದು ಎಂಬ ಧ್ಯೇಯವಿಟ್ಟುಕೊಂಡು ನಮ್ಮ ಟ್ರಸ್ಟ್ ಹಾಗೂ ಬ್ಯಾಂಕ್ ಕೆಲಸ ಮಾಡುತ್ತಿದೆ.
ಮುಳಬಾಗಿಲು: ನಗರದಲ್ಲಿ ಗ್ರಾಮಭಾರತಿ ಟ್ರಸ್ಟ್‌ನಿಂದ ನಿರ್ಗತಿಕರಿಗಾಗಿ ಆಹಾರ ಬ್ಯಾಂಕ್ ಆರಂಭ ಮಾಡಿದ್ದು, ಯಾವುದೇ ಕಾರಣಕ್ಕೂ ಮದುವೆಯ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು ಹಾಗೂ ಮನೆಗಳಲ್ಲಿ ಉಳಿಯುವ ಆಹಾರವನ್ನು ಬಿಸಾಡದೇ ನಮ್ಮ ಬ್ಯಾಂಕಿಗೆ ನೀಡಿ, ಬಡಬಗ್ಗರ ಸಹಾಯಕ್ಕೆ ಕೈ ಜೋಡಿಸಬೇಕು ಎಂದು ಪುಡ್ ಬ್ಯಾಂಕ್ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.
ನಗರದ ಕೆಇಬಿ ಕಚೇರಿ ಮುಂಭಾಗದಲ್ಲಿ ನಿರ್ಗತಿಕರು ಹಾಗೂ ಬೀದಿ ಬದಿಗಳ ಬಡ, ಬಗ್ಗರಿಗೆ ಉಚಿತವಾಗಿ ಆಹಾರ ವಿತರಿಸಿ ಮಾತನಾಡಿದ ಅವರು, ಆಹಾರ ಬ್ಯಾಂಕ್ ಸುಮಾರು ಆರು ತಿಂಗಳಿಂದ ನಗರದಲ್ಲಿ ಬಡಬಗ್ಗರಿಗೆ ಉಚಿತವಾಗಿ ಊಟ ಹಂಚುವ ಕೆಲಸ ಮಾಡುತ್ತಿದ್ದು, ಇಷ್ಟು ದಿನಗಳಿಂದ ಕಲ್ಯಾಣ ಮಂಟಪಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿ ಉಳಿಯುವ ಆಹಾರ ಸಂಗ್ರಹಿಸಿ ಎಲ್ಲರಿಗೂ ಹಂಚಲಾಗುತ್ತಿತ್ತು, ಆದರೆ ಇತ್ತೀಚೆಗೆ ಊಟಕ್ಕಾಗಿ ನಮ್ಮ ಬ್ಯಾಂಕ್ ಬಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ, ಇದರಿಂದ ಇನ್ನು ಮುಂದೆ ಮನೆಗಳಲ್ಲಿ ಮಾಡುವ ಊಟವೇನಾದರೂ ಉಳಿದಲ್ಲಿ ನಮಗೆ ನೀಡಿ ಸಹಾಯ ಮಾಡಬೇಕು ಎಂದು ಹೇಳಿದರು.
ನಗರದಲ್ಲಿ ಭಿಕ್ಷುಕರು, ನಿರ್ಗತಿಕರು, ಪ್ರಯಾಣಿಕರು, ಕೆಲವು ಅನಾಥರು ಊಟಕ್ಕಾಗಿ ಪರದಾಡುತ್ತಾ ಎಲ್ಲೆಂದರಲ್ಲಿ ಸಂಚರಿಸುತ್ತಿರುತ್ತಾರೆ, ಇದರಿಂದ ಆಹಾರ ಬ್ಯಾಂಕ್ ಪ್ರಾರಂಭಿಸಿದ್ದು ಯಶಸ್ವಿಯಾಗಿ ನಮ್ಮ ಸೇವೆ ನಡೆಯುತ್ತಿದೆ, ಯಾವುದೇ ಕಾರಣಕ್ಕೂ ಯಾರೂ ಹಸಿಯಬಾರದು ಎಂಬ ಧ್ಯೇಯವಿಟ್ಟುಕೊಂಡು ನಮ್ಮ ಟ್ರಸ್ಟ್ ಹಾಗೂ ಬ್ಯಾಂಕ್ ಕೆಲಸ ಮಾಡುತ್ತಿದೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.