- ದಿಂಡದಹಳ್ಳಿ, ಕೊಗ್ಗನೂರಿಗೆ ಮಾಯಕೊಂಡ ಶಾಸಕ ಭೇಟಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇದೇ ವೇಳೆ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಕಳಪೆ ಗುಣಮಟ್ಟದಿಂದ ಕೂಡಿದೆ, ನೀರು ಪೂರೈಕೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರ ಬಳಿ ಸಮಸ್ಯೆ ಬಿಚ್ಚಿಟ್ಟರು. ಕಾಮಗಾರಿ ಪರಿಶೀಲಿಸಿದ ಶಾಸಕರು, ಕಳಪೆ ಕಂಡು ಗುತ್ತಿಗೆದಾರರ ವಿರುದ್ಧ ಕೆಂಡಾಮಂಡಲರಾದರು. ಕೂಡಲೇ ಗುಣಮಟ್ಟದ ಕಾಮಗಾರಿ ನಡೆಸಿ, ಗ್ರಾಮಸ್ಥರಿಗೆ ಸಮಪರ್ಕ ಕುಡಿಯುವ ನೀರು ಪೂರೈಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪರಶುರಾಮ್, ಗಣೇಶಪ್ಪ, ಹೊನ್ನೂರಪ್ಪ, ಬಸಣ್ಣ, ಶ್ರೀಕಾಂತ್, ಕೆಂಚಪ್ಪ ಹಾಗೂ ಗ್ರಾಮಸ್ಥರು ಇದ್ದರು.ವಾಲ್ಮೀಕಿ ಜಯಂತಿ:
- - - ಬಾಕ್ಸ್ * ನಿರಾಶ್ರಿತರು ಆತಂಕ ಪಡಬಾರದು: ಶಾಸಕ ನಿರಂತರ ಮಳೆ ಸುರಿದು ಕುಸಿದು ಬಿದ್ದಿರುವ ಮನೆಗಳಿಗೆ ಪರಿಹಾರ ಕೊಟ್ಟರೆ, ಮನೆ ಮಂಜೂರು ಆಗುವುದಿಲ್ಲ. ಮನೆ ಬೇಕೋ ಅಥವಾ ಪರಿಹಾರ ಬೇಕೋ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ನಿರಾಶ್ರಿತರು ಶಾಸಕರ ಬಳಿ ಪರಿಹಾರ ಮತ್ತು ಮನೆ ಮಂಜೂರು ಮಾಡಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಪ್ರತಿಕ್ರಿಯಿಸಿ, ಮಳೆಯಿಂದ ಮನೆಗಳು ಹಾನಿಗೊಳಗಾದ ನಿರಾಶ್ರಿತರಿಗೆ ಸರ್ಕಾರ ಪರಿಹಾರವನ್ನೂ ಕೊಡುತ್ತದೆ, ಮನೆಯೂ ಮಂಜೂರು ಮಾಡುತ್ತದೆ. ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದರು.
ದಾವಣಗೆರೆ ತಾಲೂಕಿನ ದಿಂಡದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಕುಸಿದು ಬಿದ್ದ ಮನೆಯನ್ನು ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲನೆ ನಡೆಸಿದರು.