ಸಿಎಸ್ಆರ್ ಯೋಜನೆಯಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ

KannadaprabhaNewsNetwork |  
Published : Aug 21, 2026, 01:15 AM IST
 | Kannada Prabha

ಸಾರಾಂಶ

Distributing scholarships to children under CSR project

-ಸಿಎಸ್ಆರ್ ಯೋಜನೆ ಅಡಿ ಶೈಕ್ಷಣಿಕ ವಿದ್ಯಾರ್ಥಿ ವೇತನ ಚೆಕ್ ಹಸ್ತಾಂತರ

---

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಚತ್ರಸಾಲ ಗ್ರಾಮದಲ್ಲಿ ಸ್ಥಾಪಿತವಾಗಿರುವ ಕಲಬುರಗಿ CSR ಯೋಜನೆಯಡಿ ಸರ್ಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಸಿಎಸ್ಆರ್ ಮುಖ್ಯಸ್ಥ ನಿತೇಶ್ವರಕುಮಾರ್ ಹೇಳಿದರು.

ಚತ್ರಸಾ ವಿದ್ಯಾ ಮಂದಿರ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಚೆಕ್ ವಿತರಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಒದಗಿಸುವುದು, ಅವರ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವುದು, ಮಕ್ಕಳ ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿ ಗುರಿಗಳನ್ನು ಸಾಧಿಸಲು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

CSR ಉಪಕ್ರಮದ ಮೂಲಕ ಉತ್ತಮ ಶೈಕ್ಷಣಿಕ ಸಾಧನೆ ಹೊಂದಿದ್ದರು. ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಒದಗಿಸುವ ಗುರಿಯನ್ನು ಕಲ್ಬುರ್ಗಿ ಸಿಮೆಂಟ್ ಕಂಪನಿ ಹೊಂದಿದೆ.

ಕಂಪನಿ ಸುತ್ತಮುತ್ತಲಿನ ಸಮುದಾಯಗಳಲ್ಲಿ ಶಿಕ್ಷಣ, ಸಮಾನ ಅವಕಾಶಗಳು ಮತ್ತು ಯುವಜನರ ಅಭಿವೃದ್ಧಿಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕತೆ ಮತ್ತು ನ್ಯಾಯ ಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಶಾಲಾ ಆಡಳಿತ, ಶಿಕ್ಷಕರು ಮತ್ತು ಸಮುದಾಯದ ಪ್ರತಿನಿಧಿಗಳ ನಿಕಟ ಸಮನ್ವಯದೊಂದಿಗೆ ನಡೆಸಲಾಯಿತು. ಅಂತಿಮ ಆಯ್ಕೆಗೆ ಮುನ್ನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಕುಟುಂಬದ ಹಿನ್ನೆಲೆ ಮತ್ತು ಹಣಕಾಸಿನ ನೆರವಿನ ಅಗತ್ಯವನ್ನು ಪರಿಶೀಲಿಸಲಾಯಿತು. ಈ ನೆರವಿನ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಪೂರೈಸಲು ಸಹಾಯ ಮಾಡುವುದು, ಕುಟುಂಬಗಳ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ನೆರವಾಗುವುದು ನಮ್ಮ ಉದ್ದೇಶವಾಗಿದೆ.

ಸಿಎಸ್ಆರ್ ಮುಖ್ಯಸ್ಥ ನಿತೇಶ್ವರ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಕಲಬುರ್ಗಿ ಸಿಮೆಂಟ್ ಪ್ಲಾಂಟ್ ಯೂನಿಟ್ ಹೆಡ್ ಆರ್. ಕೃಷ್ಣಕುಮಾರ್ ಭಾಗವಹಿಸಿದ್ದರು.

ಫೋಟೊ

20 ಜಿಯು ಸಿಎಚ್3

ಚಿಂಚೋಳಿ ತಾಲೂಕಿನ ಕಲಬುರ್ಗಿ ಸಿಮೆಂಟ್ ಕಂಪನಿಯಿಂದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ ಚೆಕ್‌ ನ್ನು ಸಿಎಸ್‌ಆರ್‌ ಮುಖ್ಯಸ್ಥ ನಿತೇಶ್ವರಕುಮಾರ್ ವಿತರಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಕ್ರಾಣಿ: ಬಾವಿಯಲ್ಲಿ ಯುವತಿ ಶವ ಪತ್ತೆ
ಮುದಗಲ್‌: ಈದ್ ಮಿಲಾದ್ ಹಬ್ಬದ ಶಾಂತಿ ಸಭೆ