ಕನ್ನಡಪ್ರಭ ವಾರ್ತೆ ಮುದಗಲ್

ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಪ್ರತಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದು, ಈದ್ ಮಿಲಾದ್ ಹಬ್ಬವನ್ನೂ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಪಿಎಸ್ಐ ವೆಂಕಟೇಶ ಮಾಡಗೇರಿ ಹೇಳಿದರು.

ಪಟ್ಟಣದ ಪೊಲೀಸ್ ಇಲಾಖೆಯಿಂದ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಈದ್ ಮಿಲಾದ ಹಬ್ಬದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಶಾಂತಿ ಸಭೆ ಆಯೋಜಿಸಿದ್ದು, ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅಗತ್ಯವಿರುವ ಇಲಾಖೆ ನೆರವು ಬಗ್ಗೆ ಗಮನಕ್ಕೆ ತರಲು ಸೂಚಿಸಿದರು.

ಸಾರ್ವಜನಿಕರ ಪರವಾಗಿ ಪಟ್ಟಣದ ಹಿರಿಯರಾದ ಗುರುಬಸ್ಸಪ್ಪ ಸಜ್ಜನ್, ಮೌಲಾನಾ ಜಮೀರ್ ಅಹ್ಮದ್ ಖಾಜಿಸಾಬ್ ಹಾಗೂ ಮೌಲಾನಾ ರಫಿ ಮಾತನಾಡಿ, ಭಾವೈಕ್ಯೆತಗೆ ಹೆಸರಾದ ಮುದಗಲ್ ಪಟ್ಟಣದಲ್ಲಿ ಹಬ್ಬದ ಆಚರಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಬರದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಬಗ್ಗೆ ಪಟ್ಟಣದ ಹಿರಿಯರು ವಹಿಸಿಕೊಂಡು ಯಾರಿಗೂ ತೊಂದರೆಯಾಗದಂತೆ ಹಬ್ಬದ ಆಚರಣೆಯಲ್ಲಿ ಭಾಗಿಯಾಗುವೆವು ಎಂದು ತಿಳಿಸಿದರು.

ಪುರಸಭೆಯಿಂದ ಮೆರವಣಿಗೆ ಸಂದರ್ಭದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಸೌಕರ್ಯ, ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗುವುದು ಸಹಿತ ಅನೇಕ ಸಲಹೆಗಳ ನೀಡಲಾಯಿತು.


ಹುಸೇನಿ ಆಲಂ ದರ್ಗಾ ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಮೈಬೂಬ್ ಸಾಬ್ ಹಳೇಪೇಟೆ, ಮಾಸೂಮ್ ಷರೀಫ್, ಅಜ್ಮೀರ್ ಬೆಳ್ಳಿಕಟ್, ಸಣ್ಣ ಸಿದ್ದಯ್ಯ ಮೇಗಳಪೇಟೆ, ವೆಂಕಟೇಶ ಹಿರೇಮನಿ, ಬಸವರಾಜ ಬಂಕದಮನಿ, ನಂದಪ್ಪ ಕತ್ತಿ, ಸಂಗಪ್ಪ ಹಿರೇಮನಿ, ಸಲೀಂ ಸಿರಾಮಿಕ್, ಸೈಯದ್ ಯಾಸೀನ್ ಖಾದ್ರಿ, ಪಾಷಾ ಕಡ್ಡಿಪುಡಿ, ಹುಸೇನ್ ಸಬ್, ಇಮಾಮ್ ಹುಸೇನ್, ಮಹಿಬೂಬಸಾಬ ಡೊಂಗ್ರಿ, ಭೀಮಣ್ಣ, ಗಯಾಸ್, ಮಹಾಂತೇಶ ಭೋವಿ ಇತರರು ಇದ್ದರು .