ಹಾನಗಲ್‌ ಶಾಲೆಗೆ ಡೆಸ್ಕ್‌ಗಳ ವಿತರಣೆ

KannadaprabhaNewsNetwork |  
Published : Jan 24, 2025, 12:48 AM IST
23ಎಚ್ಎಸ್ಎನ್3 : ರಾಮನಾಥಪುರ ಹೋಬಳಿ ಹಾನಗಲ್ ಗ್ರಾಮದ ಶಾಲೆಗೆ ಬೆಂಚ್  ಗಳನ್ನು ಧರ್ಮಸ್ಥಳ ಸಂಘದವರು ನೀಡಿದರು.  | Kannada Prabha

ಸಾರಾಂಶ

ಅರಕಲಗೂಡು ತಾಲೂಕಿನ ಒಟ್ಟು 16 ಶಾಲೆಗಳಿಗೆ 1130500/- ರು. ಮೊತ್ತದ 133 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, 7 ಶಾಲೆಗಳಿಗೆ 56 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಯಿತು ಎಂದು ಯೋಜನಾಧಿಕಾರಿ ಜಿನ್ನಪ್ಪ ತಿಳಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾನಗಲ್ಲು ಗ್ರಾಮಕ್ಕೆ 10 ಬೆಂಚ್ ಡೆಸ್ಕ್ ವಿತರಣೆ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಅದರಲ್ಲಿ ಒಂದಾದ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಕರ ಕೊರತೆ ಇರುವ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಗೌರವ ಶಿಕ್ಷಕರನ್ನು ಒದಗಿಸುವ ಮೂಲಕ ಮತ್ತು ಸಾಲ ಕಟ್ಟಡ ರಚನೆ, ಆವರಣ ರಚನೆ, ಆಟದ ಮೈದಾನ, ಶೌಚಾಲಯ ಮೂತ್ರ ದೊಡ್ಡಿಗಳ ರಚನೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಶಾಲಾ ಕಟ್ಟಡ ದುರಸ್ತಿ, ಕ್ರೀಡಾ ಹಾಗೂ ಬೋಧನಾ ಸಾಮಗ್ರಿ ಪೂರೈಕೆ ಮತ್ತು ಡೆಸ್ಕ್ ಬೆಂಚುಗಳ ಒದಗಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಅರಕಲಗೂಡು ತಾಲೂಕಿನ ಒಟ್ಟು 16 ಶಾಲೆಗಳಿಗೆ 1130500/- ರು. ಮೊತ್ತದ 133 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, 7 ಶಾಲೆಗಳಿಗೆ 56 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಯಿತು ಎಂದು ಯೋಜನಾಧಿಕಾರಿ ಜಿನ್ನಪ್ಪ ತಿಳಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾನಗಲ್ಲು ಗ್ರಾಮಕ್ಕೆ 10 ಬೆಂಚ್ ಡೆಸ್ಕ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ನಾಗೇಗೌಡ ಮತ್ತು ಶಾಲೆಯ ಸಹ ಶಿಕ್ಷಕರು, ಗ್ರಾಮಪಂಚಾಯಿತಿ ಸದಸ್ಯರು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ವಲಯದ ಮೇಲ್ವಿಚಾರಕ ರವೀಂದ್ರ, ಕೃಷಿ ಮೇಲ್ವಿಚಾರಕರು ಸುನೀಲ್ ಕುಮಾರ್ ಎಂ, ಸೇವಾಪ್ರತಿನಿಧಿ ಗೀತಾ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!