ತುರುಪಲಾಯ ಸರ್ಕಾರಿ ಶಾಲೆಗೆ ಡೆಸ್ಕ್‌ಗಳ ವಿತರಣೆ

KannadaprabhaNewsNetwork |  
Published : Mar 21, 2024, 01:01 AM IST
20ಕೆಆರ್ ಎಂಎನ್‌ 2.ಜೆಪಿಜಿರಾಮನಗರದ ಅರ್ಕೇಶ್ವರ ಕಾಲೋನಿಯ ತುರುಪಲಾಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಿಲ್ಕಸಿಟಿ ಮತ್ತು ಸಹಯೋಗ ಸಂಸ್ಥೆಗಳು ಡೆಸ್ಕ್ ಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ನಗರದ ಅರ್ಕೇಶ್ವರ ಕಾಲೋನಿಯ ತುರುಪಲಾಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಿಲ್ಕ್‌ ಸಿಟಿ ಮತ್ತು ಸಹಯೋಗ ಸಂಸ್ಥೆಗಳು ಡೆಸ್ಕ್‌ಗಳನ್ನು ವಿತರಿಸುವ ಜೊತೆಗೆ ಶೌಚಾಲಯವನ್ನು ನಿರ್ಮಿಸಿಕೊಟ್ಟಿದೆ.

ಕನ್ನಡಪ್ರಭವಾರ್ತೆ ರಾಮನಗರ

ನಗರದ ಅರ್ಕೇಶ್ವರ ಕಾಲೋನಿಯ ತುರುಪಲಾಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಿಲ್ಕ್‌ ಸಿಟಿ ಮತ್ತು ಸಹಯೋಗ ಸಂಸ್ಥೆಗಳು ಡೆಸ್ಕ್‌ಗಳನ್ನು ವಿತರಿಸುವ ಜೊತೆಗೆ ಶೌಚಾಲಯವನ್ನು ನಿರ್ಮಿಸಿಕೊಟ್ಟಿದೆ.

ರಾಮನಗರದ ರೋಟರಿ ಸಿಲ್ಕ್‌ ಸಿಟಿ, ರೋಟರಿ ಬೆಂಗಳೂರು ಸೌತ್-ಸಮರ್ಪಣ ಕ್ಲಬ್, ಸ್ಟೈಲ್ ಡಿವಿಟ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳು ಒಗ್ಗೂಡಿ ರೋಟರಿ ಹ್ಯಾಪಿ ಸ್ಕೂಲ್ ಕಾರ್ಯಕ್ರಮದಡಿ ತುರುಪಲಾಯದ ಸರ್ಕಾರಿ ಶಾಲೆಗೆ 40 ಡೆಸ್ಕ್‌ಗಳನ್ನು ನೀಡಿವೆ. ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯ ಇಲ್ಲದಿರುವುದನ್ನು ಕಂಡು ಮೂರು ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದರೊಟ್ಟಿಗೆ ನಲಿ-ಕಲಿ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಟೇಬಲ್ ಮತ್ತು ಕುರ್ಚಿಗಳನ್ನು ಒದಗಿಸಿಕೊಟ್ಟಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡ ರಾಮನಗರ ರೋಟರಿ ಸಿಲ್ಕ್ ಸಿಟಿಯ ಅಧ್ಯಕ್ಷ ಎಸ್ .ಬಿ.ಇಶಾಂತ್ (ಸುನಿಲ್) ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ರೋಟರಿ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಶಾಲೆಗಳ ಅಗತ್ಯತೆಯನ್ನು ಮನವರಿಕೆ ಮಾಡಿಕೊಂಡು ಕಲಿಕಾ ಪರಿಕರಗಳು, ಮೇಜು, ಕುರ್ಚಿ ಮುಂತಾದವುಗಳನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು. ನಗರಸಭೆ ವ್ಯಾಪ್ತಿಯ ತುರುಪಲಾಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಿಲ್ಕ್ ಸಿಟಿ ದತ್ತು ಪಡೆದುಕೊಂಡಿದೆ. ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯ ಇಲ್ಲದಿರುವುದನ್ನು ಮನಗೊಂಡು ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ. ಈ ಶಾಲೆಯ ಶೈಕ್ಷಣಿಕ ಅಭಿವೃದ್ದಿಗೆ ಅನುಕೂಲವಾಗುವಂತೆ ಸ್ಪಂದಿಸಲಾಗಿದೆ ಎಂದರು.

ಈ ವೇಳೆ ರೋಟರಿ ಸಿಲ್ಕ್‌ ಸಿಟಿಯ ಕಾರ್ಯದರ್ಶಿ ಸುಹಾಸ್, ಐಪಿಪಿ ಶಿವರಾಜು, ನಿರ್ದೇಶಕರಾದ ರಾಮು, ಸಹನ ಸುನಿಲ್, ಹರಿನಾಥ್ ರಾಜ್, ಕಾರ್ಯದರ್ಶಿ ಶಿಲ್ಪಾ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಮುಖ್ಯಶಿಕ್ಷಕ ಮತ್ತು ಶಿಕ್ಷಕರ ವರ್ಗ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...