ಇಪ್ಪತ್ತೈದು ಅಕ್ರಮ ಕಟ್ಟಡಗಳಿಗೆ ಇ-ಸ್ವತ್ತು ವಿತರಣೆ: ದೂರು

KannadaprabhaNewsNetwork | Published : Dec 23, 2024 1:03 AM

ಸಾರಾಂಶ

ಕೊಳ್ಳೇಗಾಲ ನಗರಸಭೆಯಲ್ಲಿ ಅಕ್ರಮ ಕಟ್ಟಡಕ್ಕೆ ಅಧಿಕೃತ ಕಟ್ಟಡ ಎಂದು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯಕ್ಕೆ ಕೋಟ್ಯಂತರ ರು, ನಷ್ಟವುಂಟು ಮಾಡಿರುವ ನಗರಸಭೆ ಆಯುಕ್ತ ರಮೇಶ್ ಸೇರಿ 4 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಗರದ ದೊಡ್ಡಗಂಡಿ ಬೀದಿ ನಿವಾಸಿ ರಾಮನಾಥ ಶೇಷಾದ್ರಿ ಎಂಬುವರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ನಗರಸಭೆಯಲ್ಲಿ ಅಕ್ರಮ ಕಟ್ಟಡಕ್ಕೆ ಅಧಿಕೃತ ಕಟ್ಟಡ ಎಂದು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯಕ್ಕೆ ಕೋಟ್ಯಂತರ ರು, ನಷ್ಟವುಂಟು ಮಾಡಿರುವ ನಗರಸಭೆ ಆಯುಕ್ತ ರಮೇಶ್ ಸೇರಿ 4 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಗರದ ದೊಡ್ಡಗಂಡಿ ಬೀದಿ ನಿವಾಸಿ ರಾಮನಾಥ ಶೇಷಾದ್ರಿ ಎಂಬುವರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ಪೌರಾಯುಕ್ತರ ಬೇಜವಾಬ್ದಾರಿಯಿಂದಾಗಿಯೂ ಆದಾಯ ಸೋರಿಕೆಯಾಗಿದೆ. ಅನಧಿಕೃತ ಕಟ್ಟಡಗಳಿಗೆ ಅಧಿಕೃತ ಎಂದು ಇ-ಸ್ವತ್ತು ನೀಡಿ ನಗರಸಭೆ ಆದಾಯಕ್ಕೆ ಕೋಟ್ಯಂತರ ರು, ನಷ್ಟ ಉಂಟಾಗಿದೆ. ಕೆಲವು ಕಡೆ ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಿಸಿದ್ದರೂ ಅಳತೆ ಕಡಿಮೆ ತೋರಿಸಿ 25ಕ್ಕೂ ಅಧಿಕ ಇ-ಸ್ವತ್ತು ನೀಡಿ ಅಪಾರ ಪ್ರಮಾಣದ ನಷ್ಟ ಉಂಟಾಗಲು ಹಾಲಿ ನಗರಸಭೆ ಆಯುಕ್ತ ರಮೇಶ್, ಪ್ರಭಾರಿ ರಾಜಸ್ವ ನಿರೀಕ್ಷಕ ಪ್ರದೀಪ್, ಸಿಬ್ಬಂದಿ ರವಿಶಂಕರ್, ಗುಣಶ್ರೀ ಮತ್ತು ವ್ಯವಸ್ಥಾಪಕ ಲಿಂಗರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.ಇಸ್ವತ್ತು ನೀಡಿದ ವಿವರ?:

ವಾರ್ಡ್1ರಲ್ಲಿ ಪಿಐಡಿ ಸಂಖ್ಯೆ13- 505,2116 ಆಗಿದ್ದು ಖಾತೆ ಸಂಖ್ಯೆ 926ಎ, 926ಬಿ ಮತ್ತು 926ಸಿ ರಲ್ಲಿ ಅಳತೆ 83.6127 ಚದರ ಮೀಟರ್ ಆಗಿದ್ದು ನಕ್ಷೆ ಉಲ್ಲಂಘಿಸಿ ನಿರ್ಮಿಸಿದ್ದರೂ 2 ಪಟ್ಟು ಕಂದಾಯ ಪಡೆಯುವ ಬದಲು ಅಧಿಕೖತ ಎಂದು ಜುಲೈ 9ರ 2024 ರಂದು ಅಕ್ರಮವಾಗಿ ಇ-ಸ್ವತ್ತು ನೀಡಿದ್ದಾರೆ. ವಾರ್ಡ್ 21ರಲ್ಲಿ ಪಿ ಐಡಿ ಸಂಖ್ಯೆ 20-883ರ ಖಾತೆ 1417, ವಾರ್ಡ್ ಪಿಐಡಿ ಸಂಖ್ಯೆಯಲ್ಲಿ 20-505,83ರ ಖಾತೆ ಸಂಖ್ಯೆ1532 ಆಗಿದೆ. ವಾರ್ಡ್ 20ರಲ್ಲಿ ಪಿಐಡಿಸಂಖ್ಯೆ 42, 510ರ 164ರಲ್ಲಿ ಖಾತೆ ಸಂಖ್ಯೆ 2711 ಮತ್ತು ವಾರ್ಡ್ 17ರಲ್ಲಿ 13-13-17ಬಿ ರ ಖಾತೆ ಸಂಖ್ಯೆ 2698ಎ ಆಗಿದೆ. 13-5- 17ಬಿರ ಖಾತೆ ಸಂಖ್ಯೆ 269 795, 796,798 ರಲ್ಲಿ ಅಕ್ರಮ ಎಸಗಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಲಾಗಿದೆ. ವಾಡ್ 17ರಲ್ಲಿ ಪಿಐಡಿಸಖ್ಯೆ 13-3-77ಬಿರಲ್ಲಿ ಖಾತೆ ಸಂಖ್ಯೆ 946ರಲಿ, ವಾರ್ಡ್ 21ರಲ್ಲಿ ಖಾತೆ 1532ರಲ್ಲಿ 20-50483 ಹಾಗೂ ಪಿಐಡಿ ಸಂಖ್ಯೆ 39-138-27ಬಿ ರಲ್ಲಿ ಖಾತೆ ನಂಬರ್ 1806, ಪಿಐಡಿ ಸಂಖ್ಯೆ 39-138,29, 1840 ,ಸಿ 12 ಖಾತೆ ಸಂಖ್ಯೆ 1840, 29,502-21ರಲ್ಲಿ ಖಾತೆ ನಂಬರ್ 1786, ಪಿಐಡಿ ಸಂಖ್ಯೆ 39,502, 2008ರಲ್ಲಿ ಖಾತೆ 1735 ಆಗಿದೆ. ಪಿಐಡಿ ಸಂಖ್ಯೆ 39-17,2015ರ ಖಾತೆ ಸಂಖ್ಯೆ 1797ಎ ಆಗಿದೆ. 23ನೇ ವಾರ್ಡ್‌ ಪಿಐಡಿ ಸಂಖ್ಯೆ (35-10-14(55), ) ಖಾತೆ ಸಂಖ್ಯೆ 55 ಮತ್ತು ಪಿಐಡಿ ಸಂಖ್ಯೆ 35-135-49ರ ಖಾತೆ ಸಂಖ್ಯೆ 385 ಆಗಿದೆ. ವಾರ್ಡ್ 21ರಲ್ಲಿ ಖಾತೆ 1417ರಲ್ಲಿ 20-8-83ರಲ್ಲಿ, ವಾರ್ಡ್ 17ರಲ್ಲಿ 13-505-83ರ ಖಾತೆ ಸಂಖ್ಯೆ 1532ರಲ್ಲಿ ಹಾಗೂ 13-505ರ 168ರ ಖಾತೆಯ ಸಂಖ್ಯೆ 937,938ರಲ್ಲಿ ಮತ್ತು ವಾರ್ಡ್ 23ರಲ್ಲಿ 35- 135-49ರ ಸಂಖ್ಯೆಯ ಖಾತೆ ನಂಬರ್ 395ರಲ್ಲಿ, ವಾರ್ಡ್ 21ರಲ್ಲಿ 39-502-21ರ ಖಾತೆ ಸಂಖ್ಯೆ 1786 ಹೀಗೆ ಮೇಲ್ಕಂಡ 25ಕ್ಕೂ ಅಧಿಕ ಕಡೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಯಾದ ನಗರಸಭೆಗೆ ವಂಚಿಸಿ ಆದಾಯ ವಂಚನೆ ಮಾಡಿದ್ದು ಇವರ ವಿರುದ್ಧ ಪರಿಶೀಲಿಸಿ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪ್ರಕರಣ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ವಿವರಿಸಿದ್ದು, ದೂರು ಪ್ರತಿಯನ್ನು ಜಿಲ್ಲಾಧಿಕಾರಿಗಳು, ನಗರಸಭೆ ಕೋಶದ ಯೋಜನಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಈ ಹಿಂದೆ ಹಲವು ಬಾರಿ ನನಗೆ ಅಧಿಕಾರಿಗಳು ದಾಖಲೆ ನೀಡಲು ಸತಾಯಿಸುತ್ತಿದ್ದಾರೆ. ನವೆಂಬರ್‌ನಲ್ಲಿ ಈ ಸಂಬಂಧ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದು ದಾಖಲೆ ಒದಗಿಸಲು ಮನವಿ ಮಾಡಿದ್ದೇನೆ. ನಾಲ್ಕು ಬಾರಿ ಮನವಿ ಮಾಡಲಾಗಿದ್ದರೂ ಸ್ಪಂದಿಸಿಲ್ಲ ಎಂದು ರಾಮನಾಥ ಶೇಷಾದ್ರಿ ದೂರಿದ್ದಾರೆ.

2016 ರತನಕ ನಮ್ಮ ಕುಟುಂಬದ ಹೆಸರಿನಲ್ಲಿದ್ದ ಆಸ್ತಿ, 2017ರಲ್ಲಿ ಸಂಸ್ಥೆ ಹೆಸರಿಗೆ ಪಿಐಡಿ ನಂಬರ್ 13,3,1955ರ ಸಂಖ್ಯೆಯ ಸರ್ವೇ ನಂಬರ್ 745ರ ಆಸ್ತಿ, ಖಾತೆ ಸಂಖ್ಯೆ 2031ರಲ್ಲಿ ವಾರ್ಡ್ 17ಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳಲ್ಲಿ ಅಕ್ರಮ ಖಾತೆ ಮಾಡಲಾಗಿದ್ದು, ಇದರಿಂದ ನನಗೆ ಅನ್ಯಾಯವಾಗಿದ್ದು ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಬೇಕು.

ರಾಮನಾಥ್ ಶೇಷಾದ್ರಿ ದೂರುದಾರ

Share this article