ಅನಾಥೆಯ ಜೀವನ ನಿರ್ವಹಣೆಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ

KannadaprabhaNewsNetwork |  
Published : Jun 25, 2025, 01:17 AM IST
24ಕೆಎಂಎನ್ ಡಿ25 | Kannada Prabha

ಸಾರಾಂಶ

ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಎಂಬ ಉದ್ದೇಶದಿಂದ ಎನ್.ಸರಸ್ವತಿ ಹಾಗೂ ಮಂಡ್ಯ ಅನನ್ಯ ಹಾರ್ಟ್ ಸಂಸ್ಥೆಯ ಅಧ್ಯಕ್ಷೆ ಅನುಪಮಾ ಅವರು ತಲಾ ಒಂದೊಂದು ಹೊಲಿಗೆ ಯಂತ್ರಗಳನ್ನು ಇಬ್ಬರು ಫಲಾನುಭವಿಗಳಿಗೆ ವಿತರಿಸಿದ್ದಾರೆ. ಅವರ ಈ ಸಾಮಾಜಿಕ ಸೇವೆ ಮೆಚ್ಚುವಂತದ್ದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ದಿವ್ಯಾಂಗ ಚೇತನ (ಕಾಲುಗಳು ಸ್ವಾದೀನವಿಲ್ಲದ) ಅನಾಥೆ ಮಂಜುಳಾಗೆ ಜೀವನ ನಿರ್ವಹಣೆಗಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರವನ್ನು ಅಲಯನ್ಸ್ ಐಕ್ಯ ನಿಧಿ ಅಧ್ಯಕ್ಷೆ ಎನ್.ಸರಸ್ವತಿ ವಿತರಿಸಿದರು.

ಕ್ಯಾತನಹಳ್ಳಿ ವೆಂಕಟೇಗೌಡ ಸೇವಾ ಸಮಿತಿ ಅಧ್ಯಕ್ಷ ಹಿರಿಯ ವೈದ್ಯ ಕೆ.ವೈ.ಶ್ರೀನಿವಾಸ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಎಂಬ ಉದ್ದೇಶದಿಂದ ಎನ್.ಸರಸ್ವತಿ ಹಾಗೂ ಮಂಡ್ಯ ಅನನ್ಯ ಹಾರ್ಟ್ ಸಂಸ್ಥೆಯ ಅಧ್ಯಕ್ಷೆ ಅನುಪಮಾ ಅವರು ತಲಾ ಒಂದೊಂದು ಹೊಲಿಗೆ ಯಂತ್ರಗಳನ್ನು ಇಬ್ಬರು ಫಲಾನುಭವಿಗಳಿಗೆ ವಿತರಿಸಿದ್ದಾರೆ. ಅವರ ಈ ಸಾಮಾಜಿಕ ಸೇವೆ ಮೆಚ್ಚುವಂತದ್ದು ಎಂದರು.

ಇದೇ ವೇಳೆ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕಿ ಸುವರ್ಣಾದೇವಿ, ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಡಾ. ಆರ್. ಕೆ. ನಾಗರಾಜ್, ಯೋಗ ಶಿಕ್ಷಕ ಡಿ. ನಾಗೇಶ್, ಶಿವು, ಮಿಥುನ್, ಕೆ. ಗೋಪಾಲ್, ಲತಾ ಸೇರಿದಂತೆ ಇತರರು ಇದ್ದರು.

ಇಂದು ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ಜಿ.ಮಲ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಜೂನ್ 25 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ತಾಲೂಕಿನ ಜಿ.ಮಲ್ಲಿಗೆರೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ತಾಲೂಕಿನ ಜಿ.ಮಲ್ಲಿಗೆರೆ, ಹೊನ್ನೆಮಡು, ಹುನಗನಹಳ್ಳಿ, ನಂಜೇನಹಳ್ಳಿ, ಮುತ್ತೆಗೆರೆ, ತಿಪ್ಪಾಪುರ, ಬುಂಡಾರೆಕೊಪ್ಪಲು, ಎಂ.ಹಟ್ನ, ಸಂಗಾಪುರ ಜವನಹಳ್ಳಿ, ಮಲ್ಲೇನಹಳ್ಳಿ, ಛತ್ರನಹಳ್ಳಿ, ಬಿಲ್ಲೇನಹಳ್ಳಿ, ಬಂಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್, ಕಾ ಮತ್ತು ಪಾ ಮಂಡ್ಯ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ