ಯಾದಗಿರಿ: ಎಲ್ಲಾ ರಾಜಕೀಯ ಪಕ್ಷದವರು ಮತಗಟ್ಟೆವಾರು ತಮ್ಮ ಏಜೆಂಟರನ್ನು ನೇಮಕ ಮಾಡಿ ಪಟ್ಟಿ ನೀಡಿ, ಚುನಾವಣೆ ನಿಷ್ಪಕ್ಷಪಾತವಾಗಿ ನಡೆದು ಯಶಸ್ವಿಗೊಳಿಸಲು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದರು.
ಶೋರಾಪುರ (ಸುರಪುರ) ವಿಧಾನಸಭಾ ಕ್ಷೇತ್ರದಲ್ಲಿ 317, ಶಹಾಪುರ 265, ಯಾದಗಿರಿ 268, ಗುರುಮಿಠಕಲ್ 284 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 1,134 ಮತಗಟ್ಟೆಗಳಿರುತ್ತವೆ ಎಂದು ತಿಳಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಚುನಾವಣೆ ತಹಸೀಲ್ದಾರ್ ಸಂತೋಷರಾಣಿ, ಕಾಂಗ್ರಸ್ ಮುಖಂಡ ಮಲ್ಲಿಕಾರ್ಜುನ ಈಟೇ, ಬಿಎಸ್ಪಿ ಮುಖಂಡ ಅಬ್ದುಲ್ ಕರೀಮ್ ದಾದೂ, ಬಿಜೆಪಿಯ ಮಂಜುನಾಥ ಜಡಿ ಹಾಗೂ ಚುನಾವಣೆ ಸಿಬ್ಬಂದಿ ವರ್ಗದವರಿದ್ದರು.