ಪೌರಕಾರ್ಮಿಕರಿಗೆ ಆಹಾರ - ವೈದ್ಯಕೀಯ ಕಿಟ್‌ಗಳ ವಿತರಣೆ

KannadaprabhaNewsNetwork |  
Published : May 25, 2026, 01:15 AM IST
24ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆಯ 200 ಪೌರ ಕಾರ್ಮಿಕರಿಗೆ ಸ್ಟ್ಯಾಂಡ್ ಅಫ್ ಇಂಡಿಯಾ ಫೌಂಡೇಶನ್ ವತಿಯಿಂದ ನೀಡಲಾದ ಆಹಾರ ಕಿಟ್, ವೈದ್ಯಕೀಯ ಕಿಟ್ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ವಿತರಿಸಿದರು. | Kannada Prabha

ಸಾರಾಂಶ

ರಾಮನಗರ: ನಗರಸಭೆಯ 200 ಪೌರ ಕಾರ್ಮಿಕರಿಗೆ ಸ್ಟ್ಯಾಂಡ್ ಅಫ್ ಇಂಡಿಯಾ ಫೌಂಡೇಶನ್ ವತಿಯಿಂದ ನೀಡಲಾದ ಆಹಾರ ಕಿಟ್, ವೈದ್ಯಕೀಯ ಕಿಟ್ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭಾನುವಾರ ವಿತರಣೆ ಮಾಡಿದರು

ರಾಮನಗರ: ನಗರಸಭೆಯ 200 ಪೌರ ಕಾರ್ಮಿಕರಿಗೆ ಸ್ಟ್ಯಾಂಡ್ ಅಫ್ ಇಂಡಿಯಾ ಫೌಂಡೇಶನ್ ವತಿಯಿಂದ ನೀಡಲಾದ ಆಹಾರ ಕಿಟ್, ವೈದ್ಯಕೀಯ ಕಿಟ್ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭಾನುವಾರ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಶೇಷಾದ್ರಿ, ಸಮಾಜ ಮುಖಿ‌ ಕಾರ್ಯ ಪುಣ್ಯದ ಕೆಲಸ, ಯಾವುದೇ ಫಲಾಪೇಕ್ಷೆ ಯಿಲ್ಲದೆ ಅವಶ್ಯಕತೆ ಇರುವವರಿಗೆ ಸಹಾಯ ಮಾಡುತ್ತಿರುವ ಸ್ಟ್ಯಾಂಡ್ ಫೌಂಡೇಶನ್ ಪದಾಧಿಕಾರಿಗಳ ಕಾರ್ಯ ಮಾದರಿಯಾಗಿದೆ. ಬಡವರ ಬಗೆಗೆ ಕಾಳಜಿ ಇಟ್ಟುಕೊಂಡು ಕೈದಿಗಳ ಮಕ್ಕಳು ಹಾಗೂ ದಿನನಿತ್ಯ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವ ಪೌರ ಕಾರ್ಮಿಕರಿಗೆ ನೆರವು ನೀಡುತ್ತಿರುವ ಸ್ಟ್ಯಾಂಡ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಟ್ಯಾಂಡ್ ಫೌಂಡೇಶನ್ ನ ಪ್ರವೀಣ್ ಮಾತನಾಡಿ, ಮನೆಯೊಂದರಲ್ಲಿ ಒಬ್ಬರು ತಪ್ಪು‌ಮಾಡಿದ್ದರೆ ಅವರ ಮಗ ಏನು ತಪ್ಪು ಮಾಡಿರುವುದಿಲ್ಲ. ಅವರ ಮೇಲೆ ಸಮಾಜದಲ್ಲಿ ಬೇದ ಭಾವ ಮಾಡುತ್ತಿರುತ್ತಾರೆ. ಅಂತವರನ್ನು ಕೌನ್ಸಲಿಂಗ್ ಮಾಡಿ ಅವರ ನೆರವಿಗೆ ನಿಲ್ಲುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈವರೆಗೆ 122 ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕೊಡಿಸುವ ಕೆಲಸವನ್ನು ಫೌಂಡೇಶನ್ ಮಾಡಿದ್ದು, ರಾಮನಗರ ಭಾಗದಲ್ಲಿ ಕಣ್ಣಿನ ತಪಾಸಣೆ, ರಾಮದೇವರ ಬೆಟ್ಟದ ತಪ್ಪಲಿನ ಪರಿಶಿಷ್ಟ ಜನರಿಗೆ ನೆರವು ನೀಡಿದ್ದೇವೆ. ಇದೀಗ ಪೌರ ಕಾರ್ಮಿಕರಿಗೆ ನೆರವು ಮಾಡಲು ನಮ್ಮ ಫೌಂಡೇಶನ್ ಮುಂದಾಗಿದೆ ಎಂದರು.

ಈ ವೇಳೆ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯ ಗ್ಯಾಬ್ರಿಯಲ್, ಫೌಂಡೇಶನ್ ಸಂಸ್ಥಾಪಕ ಪ್ರವೀಣ್, ಸಂಯೋಜಕಿ ಶ್ರೀ ಲಕ್ಷ್ಮಿ, ರಕ್ಷಿತ್ ಗೌಡ, ಕೃಪಾಕರಗೌಡ, ಉದ್ಯಮಿ ಜಗದೀಶ್, ಪೌರ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು, ಶಾಖಾ ಅಧ್ಯಕ್ಷ ದೇವೇಂದ್ರ, ಮುಖಂಡ ಶಿವಕುಮಾರಸ್ವಾಮಿ ಹಾಜರಿದ್ದರು.

24ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆಯ 200 ಪೌರ ಕಾರ್ಮಿಕರಿಗೆ ಸ್ಟ್ಯಾಂಡ್ ಅಫ್ ಇಂಡಿಯಾ ಫೌಂಡೇಶನ್ ವತಿಯಿಂದ ನೀಡಲಾದ ಆಹಾರ ಕಿಟ್, ವೈದ್ಯಕೀಯ ಕಿಟ್ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ರೂಪಿಸಿಲ್ಲ
ಅಭಿವೃದ್ಧಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾದದ್ದು