-685 ಅಂಕಗಳೊಂದಿಗೆ ಚನ್ನಬಸವ ಕೊರಳ್ಳಿ ಕಾಲೇಜು ಟಾಪರ್ । 600ಕ್ಕೂ ಹೆಚ್ಚು ಅಂಕ ಪಡೆದ 14 ವಿದ್ಯಾರ್ಥಿಗಳು । 950ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಅರ್ಹತೆ
---ಕನ್ನಡಪ್ರಭ ವಾರ್ತೆ ಕಲಬುರಗಿ
ಶರಣಬಸವೇಶ್ವರ ರೆಸಿಡೆನ್ಶಿಯಲ್ ಕಾಂಪೋಸಿಟ್ ಪಿಯು ಕಾಲೇಜು ನೀಟ್-2026 ಪರೀಕ್ಷೆಯಲ್ಲಿ ಮತ್ತೊಮ್ಮೆ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ.ಕಾಲೇಜಿನ ವಿದ್ಯಾರ್ಥಿ ಚನ್ನಬಸವ ಕೊರಳ್ಳಿ 720ಕ್ಕೆ 685 ಅಂಕ ಪಡೆದು ಅಖಿಲ ಭಾರತ 190ನೇ ರ‍್ಯಾಂಕ್ (AIR-190) ಗಳಿಸುವ ಮೂಲಕ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇದೇ ಕಾಲೇಜಿನ ವಿದ್ಯಾರ್ಥಿನಿ ಸಿಮ್ರನ್ ಬಾನು 720ಕ್ಕೆ 657 ಅಂಕ ಗಳಿಸಿ ಅಖಿಲ ಭಾರತ 1001ನೇ ರ‍್ಯಾಂಕ್ (AIR-1001) ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ರೋಹಿತ್ ರಾಜಕುಮಾರ್ 720ಕ್ಕೆ 642 ಅಂಕಗಳನ್ನು ಗಳಿಸಿ ರಾಷ್ಟ್ರೀಯ ಮಟ್ಟದಲ್ಲಿ 57ನೇ ಕ್ಯಾಟಗರಿ ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ನೀಟ್-2026ರಲ್ಲಿ ಕಾಲೇಜಿನ 14 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು, 150 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಅಲ್ಲದೆ 950ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಳಿಸಿರುವುದು ಸಂಸ್ಥೆಯ ಮತ್ತೊಂದು ಹೆಮ್ಮೆಯ ಸಾಧನೆಯಾಗಿದೆ.
...ಬಾಕ್ಸ್.....ಭರ್ಜರಿ ಸಾಧನೆ
ಎಸ್.ಬಿ.ಆರ್ ಕಾಲೇಜಿನ ಭರ್ಜರಿ ಸಾಧನೆ, ರಾಷ್ಟ್ರಕ್ಕೆ ೧೯೦ ನೇ ರ್ಯಾಂಕ್ಚನ್ನಬಸವ ಕೊರಳ್ಳಿ ರಾಷ್ಟ್ರಕ್ಕೆ ೧೯೦ನೇ ರ‍್ಯಾಂಕ್, ೬೮೫/೭೨೦ ಅಂಕಗಳು,
ಸಿಮ್ರನ್ ಬಾನು ರಾಷ್ಟ್ರಕ್ಕೆ ೧೦೦೧ನೇ ರ‍್ಯಾಂಕ್, ೬೫೭/೭೨೦ ಅಂಕಗಳು,ರೋಹಿತ ರಾಜಕುಮಾರ ರಾಷ್ಟ್ರಕ್ಕೆ ೫೭ನೇ ರ‍್ಯಾಂಕ್(ಕ್ಯಾಟ್), ೬೪೨/೭೨೦ ಅಂಕಗಳು,
....ಬಾಕ್ಸ್...೧೪ ವಿದ್ಯಾರ್ಥಿಗಳಿಗೆ ೬೦೦ ಕ್ಕೂ ಹೆಚ್ಚು ಅಂಕ
೯೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ವಿಭಾಗಕ್ಕೆ ಅರ್ಹರುಎಸ್.ಬಿ.ಆರ್ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿ ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದ್ದಾರೆ.
ಗುಣಮಟ್ಟದ ಬೋಧನೆ, ವೈಜ್ಞಾನಿಕ ತರಬೇತಿ ಹಾಗೂ ನಿರಂತರ ಪರೀಕ್ಷಾ ಪದ್ಧತಿಯ ಫಲವಾಗಿ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಚನ್ನಬಸವ ಕೊರಳ್ಳಿ ೬೮೫/೭೨೦ ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ೧೯೦ನೇ ರ‍್ಯಾಂಕ್ ಪಡೆದಿದ್ದು, ವಿದ್ಯಾರ್ಥಿನಿ ಸಿಮ್ರನ್ ಬಾನು ೬೫೭/೭೨೦ ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ೧೦೦೧ನೇ ರ‍್ಯಾಂಕ್ ಹಾಗೂ ವಿದ್ಯಾರ್ಥಿ ರೋಹಿತ ರಾಜಕುಮಾರ ೬೪೨/೭೨೦ ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ೫೭ನೇ ರ‍್ಯಾಂಕ್(ಕ್ಯಾಟ್) ಪಡೆದು, ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ೧೫೦ ವಿದ್ಯಾರ್ಥಿಗಳು ೫೦೦ ಕ್ಕಿಂತ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ್ದಾರೆ. ೯೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ವಿಭಾಗಕ್ಕೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆಂದು ಕಾಲೇಜಿನ ಪ್ರಾಚಾರ್ಯ ಎನ್.ಎಸ್ ದೇವರಕಲ್ ತಿಳಿಸಿದ್ದಾರೆ.----
ಪ್ರಕಟವಾದ ಫಲಿತಾಂಶ೬೦೦ ಕ್ಕೂ ಹೆಚ್ಚು ಅಂಕ -೧೪ ವಿದ್ಯಾರ್ಥಿಗಳು
೫೭೫ ರಿಂದ ೫೯೯ ಅಂಕ -೧೧ ವಿದ್ಯಾರ್ಥಿಗಳು೫೫೦ ರಿಂದ ೫೭೪ ಅಂಕ -೨೨ ವಿದ್ಯಾರ್ಥಿಗಳು
೫೨೫ ರಿಂದ ೫೪೯ ಅಂಕ -೪೮ ವಿದ್ಯಾರ್ಥಿಗಳು೫೦೦ ರಿಂದ ೫೨೪ ಅಂಕ -೫೭ ವಿದ್ಯಾರ್ಥಿಗಳು
೪೭೫ ರಿಂದ ೪೯೯ ಅಂಕ -೭೬ ವಿದ್ಯಾರ್ಥಿಗಳು೪೫೦ ರಿಂದ ೪೭೪ ಅಂಕ -೫೮ ವಿದ್ಯಾರ್ಥಿಗಳು
ಈ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದು, ಕಾಲೇಜಿನ ಅನುಭವಿ ಅಧ್ಯಾಪಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.------
...ಕೋಟ್.....ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಅಂಕ ಗಳಿಸಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆದಿರುವುದು ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ ಹಾಗೂ ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನದ ಫಲವಾಗಿದೆ. ಶರಣಬಸವೇಶ್ವರರ ಶಿಕ್ಷಣ ತತ್ವಗಳಾದ ಗುಣಮಟ್ಟ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶ ವೈದ್ಯರಾಗಿ ಸೇವೆ ಸಲ್ಲಿಸಲಿ.
-ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿ, ಅಧ್ಯಕ್ಷರು, ಎಸ್‌ಬಿಆರ್, ಕಲಬುರಗಿ